Thursday, June 13, 2024

Latest Posts

ಮಾಜಿ ಕಾಂಗ್ರೆಸ್ಸಿಗರು ಹಾಲಿ ಬಿಜೆಪಿ, ಜೆಡಿಎಸ್ ನಾಯಕರಿಗೆ ಡಿಕೆಶಿ ಗಾಳ

- Advertisement -

ಕರ್ನಾಟಕ ಟಿವಿ : ಕೆಪಿಸಿಸಿ ನಿಯೋಜಿತಅಧ್ಯಕ್ಷ್ಷ ಡಿಕೆ ಶಿವಕುಮಾರ್ ಪಕ್ಷ ಬಿಟ್ಟು ಹೋದವರನ್ನ ವಾಪಸ್ ಕರೆತರಲು ಮುಂದಾಗಿದ್ದಾರೆ.. ಮರಳಿ ಕಾಂಗ್ರೆಸ್ ಗೆ ನಾಯಕರನ್ನ ಕರೆತರುವ ದೃಷ್ಟಿಯಿಂದ ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ಸಮಿತಿಯನ್ನ ಮಾಡಿರುವ ಡಿಕೆ ಶಿವಕುಮಾರ್ ಬಿಜೆಪಿ ಹಾಗೂ ಜೆಡಿಎಸ್ ಸೇರಿರುವ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆಗೆ ಇಳಿದಿದ್ದಾರೆ. ಹಾಗೆ ನೋಡಿದ್ರೆ ಭಾರತದ ರಾಜಕೀಯ ಇತಿಹಾಸದಲ್ಲಿ ಪಕ್ಷ ಬಿಟ್ಟವರನ್ನ ವಾಪಸ್ ಪಕ್ಷಕ್ಕೆ  ಕರೆತರಲು ಅಧಿಕೃತವಾಗಿ ಪಕ್ಷದಲ್ಲಿ ಸಮಿತಿ ಮಾಡಿದ್ದು ಕರ್ನಾಟಕದ ಕಾಂಗ್ರೆಸ್ ಪಕ್ಷ ಮಾತ್ರ. ಇದೆಲ್ಲಾವೂ  ಡಿಕೆ ಶಿವಕುಮಾರ್ ಪಕ್ಷ ಸಂಘಟನೆಯನ್ನ ತುಂಬಾ ಪ್ರಮುಖವಾಗಿ ತೆಗೆದುಕೊಂಡಿದ್ದಾರೆ ಅನ್ನೋದನ್ನ ಸೂಚಿಸುತ್ತದೆ.

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ

- Advertisement -

Latest Posts

Don't Miss