93ರ ಇಳಿವಯಸ್ಸಲ್ಲೂ ರಾಜಕೀಯ ಹೋರಾಟ ನಿಲ್ಲಲ್ಲ ಎಂಬ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೇಳಿಕೆ, ಜೆಡಿಎಸ್‌ಗೆ ಹೊಸ ಹುಮ್ಮಸ್ಸು ನೀಡಿದೆ. ಆದ್ರೆ, ಮಿತ್ರಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.
ದೇವೇಗೌಡರ ರಾಜಕೀಯ ಮುಗಿಯಿತೆಂಬ ಲೆಕ್ಕಾಚಾರದಲ್ಲಿದ್ದವರಿಗೆ, ಹೆಚ್‌ಡಿಡಿ ಮಾತು ಕೇಳಿ ನಡುಕ ಉಂಟಾಗಿದೆ. ರಾಜ್ಯಸಭೆಗೆ ವ್ಹೀಲ್‌ಚೇರ್‌ನಲ್ಲೇ ಹೋಗುತ್ತೇನೆ. ಅವಧಿ ಪೂರ್ಣಗೊಂಡರೂ ನನ್ನ ಹೋರಾಟ ನಿಲ್ಲುವುದಿಲ್ಲ ಎನ್ನುವ ಮೂಲಕ, ರಾಜಕೀಯ ನಿವೃತ್ತಿಯಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಜೆಡಿಎಸ ಪಾಲಿಗೆ ರಾಜಕಾರ ಹಿಂದಿನಷ್ಟು ಸುಲಭವಲ್ಲ. ಈ ಸೂಕ್ಷ್ಮತೆಯನ್ನು ಅರಿತುಕೊಂಡಿರುವ ದೇವೇಗೌಡ್ರು, ಮತ್ತೆ ಅಖಾಡಕ್ಕಿಳಿಯುವ ಸುಳಿವು ಕೊಟ್ಟಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಇರಬಹುದು. ನನಗೆ ನೆನಪಿನ ಶಕ್ತಿ ಚೆನ್ನಾಗಿದೆ ಅಂತಾ ಪುನರುಚ್ಚರಿಸಿದ್ದಾರೆ. ನಾನಿಂದು ರಾಜಕೀಯವಾಗಿ ದಣಿದಿಲ್ಲಎನ್ನುವ ಮೂಲಕ, ಹಾಸನ ಜಿಲ್ಲಾ ರಾಜಕೀಯದ ಮೇಲಿನ ಹಿಡಿತವನ್ನು, ಅಷ್ಟು ಸುಲಭವಾಗಿ ಬಿಟ್ಟು ಕೊಡಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
2023ರಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೆಚ್.ಡಿ. ರೇವಣ್ಣ, ಕಡಿಮೆ ಅಂತರದ ಮತಗಳಿಂದ ಗೆಲುವು ಸಾಧಿಸಿದ್ರು. ಅದೇ ರೀತಿ ಶ್ರವಣಬೆಳಗೊಳ ಕ್ಷೇತ್ರದಲ್ಲೂ, ಸವಾಲಿನ ಗೆಲವು ಸಿಕ್ಕಿತ್ತು. ಇನ್ನು, ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಅತ್ಯಾಚಾರ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಇನ್ನೇನಿದ್ರೂ ನಮ್ದೇ ಹವಾ ಎನ್ನುತ್ತಿದ್ದ ವಿರೋಧಿಗಳಿಗೆ, ಹೆಚ್.ಡಿ. ದೇವೇಗೌಡ್ರು ಟಾಂಗ್ ಕೊಟ್ಟಿದ್ದಾರೆ.
ಇನ್ನು, 2028ರ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಹಿಡಿತವನ್ನ ದೇವೇಗೌಡರು ತೆಗೆದುಕೊಂಡ್ರೆ ಮಾತ್ರ, ಜೆಡಿಎಸ್ ಪಕ್ಷಕ್ಕೆ ಬೂಸ್ಟ್ ಸಿಕ್ಕಂತಾಗುತ್ತೆ ಎಂಬುದನ್ನ, ಸ್ಥಳೀಯ ಮುಖಂಡರು ಮನವರಿಕೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ವೀಲ್‌ಚೇರ್‌ನಲ್ಲಿ ಕುಳಿತಾದ್ರೂ ಸರಿ ಹೋರಾಟ ಮುಂದುವರೆಯುತ್ತೆ ಎಂದು, ಹೆಚ್.ಡಿ. ದೇವೇಗೌಡ್ರು ಹೇಳಿದ್ದಾರೆ. ಒಟ್ನಲ್ಲಿ ಮೊಮ್ಮಗನಿಗಾಗಿ 10 ವರ್ಷದ ಹಿಂದೆ ಹಾಸನವನ್ನು ತ್ಯಾಗ ಮಾಡಿದ್ದ ಹೆಚ್‌ಡಿಡಿ, ಮತ್ತೆ ಕಮ್‌ಬ್ಯಾಕ್ ಮಾಡ್ತಾರೆ ಎನ್ನಲಾಗ್ತಿದೆ.