- Advertisement -
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ, ಅತೀ ಹೆಚ್ಚಾಗಿ ಕೊಪ್ಪಳ ಜಿಲ್ಲೆಯ ಜನರು ಭಾಗಿಯಾಗಿದ್ದಾರೆ. ಸಮೀಕ್ಷೆಯ ಪ್ರಾರಂಭದಲ್ಲಿ ತಾಂತ್ರಿಕ ದೋಷ, ಸರ್ವರ್ ಸಮಸ್ಯೆ ಎದುರಾಗಿತ್ತು.
ಆದರೂ ಜಿಲ್ಲಾಧಿಕಾರಿ ಆದೇಶದ ಮೇರೆಗೆ, ಯಲಬುರ್ಗಾ, ಕುಷ್ಟಗಿ, ಕುಕನೂರ, ಗಂಗಾವತಿ ತಾಲೂಕುಗಳಲ್ಲಿ, ಅತ್ಯಂತ ವೇಗವಾಗಿ ಸಮೀಕ್ಷೆ ಸಾಗಿದೆ. ದಸರಾ ರಜೆಯಲ್ಲೂ ಜಾತಿ ಗಣತಿ ಕಾರ್ಯದಲ್ಲಿ ಶಿಕ್ಷಕರು ಭಾಗಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೆ 51,931 ಕುಟುಂಬಗಳ ಸಮೀಕ್ಷೆ ಮಾಡಲಾಗಿದ್ದು, ಮೊದಲ ಸ್ಥಾನ ಪಡೆದುಕೊಂಡಿದೆ. ಇನ್ನು, ಚಿತ್ರದುರ್ಗಕ್ಕೆ 2ನೇ ಸ್ಥಾನ, ಬಾಗಲಕೋಟೆ 3ನೇ ಸ್ಥಾನ ಪಡೆದುಕೊಂಡಿದೆ.
- Advertisement -