Tumakuru News: ತುಮಕೂರು: ತುಮಕೂರಿನಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮಾತನಾಡಿದ್ದು, ಡಿಕೆಶಿಯನ್ನು ಸಿಎಂ ಮಾಡಿ, ವಿಜಯೇಂದ್ರನನ್ನ ಡಿಸಿಎಂ ಮಾಡುವ ಚರ್ಚೆ ನಡೆಯುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ವಿಭಜನೆಯೂ ಆಗಲ್ಲ, ಡಿಸಿಎಂ ಡಿ.ಕೆ. ಶಿವಕುಮಾರ್ ಅಲ್ಲಿಂದ ಹೊರಗಡೆಯೂ ಬರಲ್ಲ. ಡಿ.ಕೆ. ಶಿವಕುಮಾರ್ ಅಲ್ಲೇ ಇದ್ದುಕೊಂಡು ಏನಾಗುತ್ತೆ ಎಂದು ನೋಡುತ್ತಾರೆ. ಯಾಕಂದ್ರೆ ಅಷ್ಟು ಸುಲಭವಿಲ್ಲ ಅಲ್ಲಿಂದ ಇಲ್ಲಿಗೆ ಬಂದು ಮುಖ್ಯಮಂತ್ರಿಯಾಗಿ ಮತ್ತೆ ಚುನಾವಣೆಗೋಗಿ ಗೆದ್ದು ಬರಬೇಕಲ್ಲ. ಜನ ಕೂಡ ಬುದ್ದಿವಂತರಿದ್ದಾರೆ ಈಗೆಲ್ಲಾ. ರಾಜಕಾರಣಿಗಳು ಏನು ಆಲೋಚನೆ ಮಾಡ್ತಿವೋ ಜನರ ಸಹಕಾರ ಬೇಕಾಗುತ್ತದೆ ಎಂದು ಸದಾನಂದಗೌಡರು ಹೇಳಿದ್ದಾರೆ.
ಇವತ್ತಿನ ವಾಸ್ತವಿಕ ಪರಿಸ್ಥಿತಿ ಡಿ.ಕೆ.ಶಿವಕುಮಾರ್ ಪಕ್ಷವನ್ನೂ ಬಿಡಲ್ಲ ನಾವು ಅವರ ಜೊತೆ ಬಂದು ಸರ್ಕಾರ ಮಾಡಲ್ಲ. ಬಾಹ್ಯ ಬೆಂಬಲದೊಂದಿಗೆ ಬಂದು ಸರ್ಕಾರ ರಚನೆಯಾಗಲ್ಲ. ನಾವು 65ರಲ್ಲಿದ್ದೇವೆ. ಮೊನ್ನೆ ಮೂರು ಸ್ಥಾನ ಅವರಿಗೆ ಬಂತು. ಇಂತಹ ಸಂದರ್ಭಗಳಲ್ಲಿ ನಾವು ಭಾರತೀಯ ಜನತಾ ಪಾರ್ಟಿ ಜನರ ಬಳಿ ಹೋಗುತ್ತೆ. ಕಾಂಗ್ರೆಸ್ ಮಾಡದನ್ನ ನಾವು ಮಾಡಿ ತೋರಿಸುತ್ತವೆ. ಆ ಆಶೀರ್ವಾದದಿಂದ ನಾವು ಸರ್ಕಾರ ರಚನೆ ಮಾಡುತ್ತೇವೆ.
ಇವತ್ತಿನ ಪರಿಸ್ಥಿತಿಯಲ್ಲಿ ಘನತೆ ಗೌರವ ಮಾನ ಮರ್ಯಾದೆ ಇದೆಲ್ಲಾ ಇದ್ರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸರ್ಕಾರ ವಿಸರ್ಜನೆ ಮಾಡಬೇಕು. ಚುನಾವಣೆ ಎದುರಿಸಿ ಹೊಸದಾಗಿ ಅಧಿಕಾರ ಪಡೆದುಕೊಂಡು ಬರಬೇಕು. ಆಗಲೇ ಅವರಿಗೆ ಗೌರವ ಬರೋದು. ಡಿಕೆಶಿ ಕಾಂಗ್ರೆಸ್ ನ ಸಿಎಂ ಆಗೋದಿಕ್ಕೆ ನಮ್ಮದ್ಯಾವುದೇ ಅಭ್ಯಂತರವಿಲ್ಲ. ಅದರೆ, ಬಿಜೆಪಿಯಿಂದ ಸಿಎಂ ಆಗಬೇಕು ಅಂದ್ರೆ ಆಲೋಚನೆ ಮಾಡಬೇಕು ಎಂದು ಸದಾನಂದಗೌಡರು ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಜೆಡಿಎಸ್ ಸೇರಿಕೊಂಡು 70 ಜನ ಕರಕೊಂಡು ಬಂದು ಡಿಕೆಸಿ ಸಿಎಂ ಆಗ್ತಾರಾ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದೌಡರು, 70 ಜನ ಶಾಸಕರ ಬೆಂಬಲವಿದ್ರೆ ಅವರ ಪಕ್ಷದಲ್ಲೇ ಅವರು ಸಿಎಂ ಆಗಬಹುದು. ಯಾಕಂದ್ರೆ ಕಾಂಗ್ರೆಸ್ ಶಾಸಕರಿಗೆ ಖಾತ್ರಿಯಾಗಿದೆ. ಎಲೆಕ್ಷನ್ ಗೆ ಹೋದ್ರೆ ಮತ್ತೆ ನಾವ್ಯಾರು ಗೆಲ್ಲಲ್ಲ ಎಂದು. ನೂರಮೂವತ್ತೈದು ಜನ ಶಾಸಕರಿಗೂ ಖಾತ್ರಿಯಾಗಿದೆ. ನಾವು ಎರಡೂವರೆ ವರ್ಷದಲ್ಲಿ ನಡೆದುಕೊಂಡ ರೀತಿ ನಮ್ಮಗೇ ಭವಿಷ್ಯವಿಲ್ಲ. ಐದು ವರ್ಷ ಪೂರೈಕೆ ಮಾಡೋಣ ಎನ್ನುವ ವಾತಾವರಣದಲ್ಲಿದ್ದಾರೆ ಎಂದು ಸದಾನಂದಗೌಡರು ಹೇಳಿದ್ದಾರೆ.
ಅಮಿತ್ ಮತ್ತು ಮೋದಿ ಚರ್ಚೆ ಮಾಡುತ್ತಾರೆ ದೇವೇಗೌಡರು ಜೊತೆ ಸೇರಿ ಕರ್ನಾಟಕದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬ ವಿಚಾರದ ಬಗ್ಗೆ ಮಾತನಾಡಿರುವ ಸದಾನಂದಗೌಡರು, ಮೋದಿ ಮತ್ತು ಅಮಿತ್ ಶಾ ಏನ್ ಹೇಳ್ತಾರೋ ಅದನ್ನು ಕೇಳ್ತೇವೆ. ಆದರೆ, ಮೋದಿ ಮತ್ತು ಅಮಿತ್ ಕೂಡ ಆಲೋಚನೆ ಮಾಡುತ್ತಾರೆ. ಬಿಜೆಪಿಗೆ ಸ್ವಂತ ಶಕ್ತಿಯಲ್ಲಿಯೇ ಅಧಿಕಾರಕ್ಕೆ ಬರುವ ವಾತಾವರಣ ಇರುವಾಗ. ಇನ್ನೊಮ್ಮೆ ಅವರ ಜೊತೆ ಸೇರಿಕೊಂಡು ಇರುವ ಹೆಸರು ಯಾಕೆ ಕೆಡಿಸಿಕೊಬೇಕು ಎಂಬುದು ಅವರ ತಲೆಯಲ್ಲಿರಬಹುದು. ಆದರೆ, ಅವರು ಏನ್ ಮಾತಾಡಿದಾರೋ ಗೊತ್ತಿಲ್ಲ ಎಂದಿದ್ದಾರೆ.
ಸೋಮಣ್ಣ ಹೈಕಮಾಂಡ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಬೇಕಾಗಿರುವ ಕಾರಣ ಸತ್ಯ ಇರಬಹುದು ನನಗೆ ಮಾಹಿತಿ ಇಲ್ಲ. ಮಧ್ಯಂತರ ಚುನಾವಣೆ ಆಗಬಾರದು. ರಾಜ್ಯದ ಜನರಿಗೆ ಹೊರ ಆಗುವ ಕೆಲಸ ಆಗಬಾರದು. ಚುನಾವಣೆ ಹೆಸರಲ್ಲಿ ಅಭಿವೃದ್ಧಿ ಆಗದೆ ಇರುವಂತದ್ದು ಆಗಬಾರದು. ಡಿಕೆ ಶಿವಕುಮಾರ್ ಅವರು ನಮಗೆ ಬಂದು ಬಾಹ್ಯ ಬೆಂಬಲ ಕೊಡುವುದಾದರೆ ಒಪ್ಕೋಬಹುದು. ಅವರೇ ಮುಖ್ಯಮಂತ್ರಿ ಆಗೋದು ಅನ್ನೋದಾದ್ರೆ ಅದನ್ನ ಕೇಂದ್ರದವ್ರು ನಿರ್ಧಾರ ಮಾಡುತ್ತಾರೆ. ಅವರು ನಮ್ಮಲ್ಲಿ ಬಂದಾಗ ಬಾಹ್ಯ ಬೆಂಬಲ ಕೊಡ್ತಾರೆ, ಅವರಿಗೆ ಬೆಂಬಲ ಕೇಂದ್ರದವರು ಹೇಳಿದರೆ 100% ಪರ್ಸೆಂಟ್ ಬೆಂಬಲ ಕೊಡ್ತೀವಿ.
ಕೇಂದ್ರದ ವರಿಷ್ಠರ ಮಾತನ್ನು ನಾವು ಅಲ್ಲಗಳದಿಲ್ಲ. ಇವತ್ತು ಅಲ್ಲಗಳದಿಲ್ಲ ಮುಂದೆಯೂ ಅಲ್ಲಗಳಿಯೋದಿಲ್ಲ. ಕೇಂದ್ರದವರು ಹೇಳ್ತಾರೆ ಡಿಕೆ ಶಿವಕುಮಾರ್ ಅವರಿಗೆ ಕರ್ನಾಟಕ ಬಿಜೆಪಿಯವರು ಬೆಂಬಲ ಕೊಡಿ ಸರ್ಕಾರ ಮಾಡ್ಲಿಕ್ಕೆ ಅಂತ ಹೇಳಿದ್ರೆ ನಾವು ಕೊಡ್ತೀವಿ. ನನ್ನ ಅಭಿಪ್ರಾಯ ಅವರು ಒಪ್ಪಲ್ಲ ಎಂದು ಸದಾನಂದಗೌಡರು ಹೇಳಿದ್ದಾರೆ.

