Saturday, July 20, 2024

Latest Posts

ವಿವಿಧ ಕಾಮಗಾರಿ ಉದ್ಘಾಟನೆ

- Advertisement -

www.karnatakatv.net : ಕರೋನಾದಿಂದ ಇಡೀ ಪ್ರಪಂಚವೇ ತಲ್ಲಣವಾಗಿದ್ದು ಪ್ರತಿಯೊಬ್ಬರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಸ್ಥಿತಿ ಎದುರಾಗಿದೆ ಎಂದು ಶಾಸಕ ಎಂ.ವಿ.ವೀರಭಧ್ರಯ್ಯ ತಿಳಿಸಿದರು.

ವಿವಿಧ ಕಾಮಗಾರಿಗಳ ಚಾಲನೆ ನೀಡಿದ ಶಾಸಕರು, ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಅಣ್ಣೇನಹಳ್ಳಿ, ಸಿ ವೀರಾಪುರ ಗ್ರಾಮದಲ್ಲಿ ಸುಮಾರು 25 ಲಕ್ಷ ವೆಚ್ಚದ ಸರ್ಕಾರಿ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ,  ಸರ್ಕಾರಿ ಶಾಲೆಗಳ ಅಭಿವೃದ್ಧಿ ನಮ್ಮೆಲ್ಲರ ಹೊಣೆ, ಶಾಲಾ ಮಕ್ಕಳಿಗೆ ತೊಂದರೆಯಾಗಬಾರದು, ಎರಡು ಕಡೆ ನೂತನ ಕೊಠಡಿಗಳನ್ನು ಉದ್ಘಾಟಿಸಲಾಗಿದೆ ಎಂದು ವೀರಭದ್ರಯ್ಯ ತಿಳಿಸಿದರು.

ಇನ್ನು ಕೆಲವರು ಮಧುಗಿರಿಯಲ್ಲಿ ರಸ್ತೆಗಳು ಅಭಿವೃದ್ದಿಯಾಗಿಲ್ಲ ಎಂದು ಪ್ರಚಾರ ಮಾಡಿದ್ದಾರೆ, ಹದಗೆಟ್ಟ ರಸ್ತೆಗಳಿಗೆ ತಾತ್ಕಾಲಿಕವಾಗಿ ನನ್ನ ಹಣದಿಂದ ರಿಪೇರಿ ಮಾಡಿಸಿದ್ದೀನಿ. ಇದೀಗ ಟೆಂಡರ್ ಕರೆದು ಡಾಂಬಾರ್ ಹಾಕಿಸುವ ಕೆಲಸವನ್ನ ಶೀಘ್ರವಾಗಿ ಮಾಡ್ತೀವಿ ಎಂದು ಹೆಳಿದ್ರು. ಕ್ಷೇತ್ರದ ಅಭಿವೃದ್ದಿ ನನ್ನ ಪ್ರಮುಖ ಗುರಿ ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಸಿಡಿಪಿಓ ಅನಿತಾ, ಇಓ ದೊಡ್ಡಸಿದ್ದಪ್ಪ, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ-  ತುಮಕೂರು

- Advertisement -

Latest Posts

Don't Miss