Kasaragod News : ಜಿಲ್ಲೆಯದಾದ್ಯಂತ ವ್ಯಾಪಕವಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಅನಾಹುತಗಳುಂಟಾಗುತ್ತಿದ್ದು ಈ ನಡುವೆ ಉಳಿದೆಲ್ಲೆಡೆ ಶಾಲೆ ಕಾಲೇಜುಗಳಿಗೆ ರಜೆ ನೀಡಿ ಮಕ್ಕಳ ಸುರಕ್ಷತತೆ ಕಾಯ್ದುಕೊಳ್ಳುವ ನಡುವೆ ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ರಜೆ ಅಥವ ಅದಕ್ಕೆ ಸೂಕ್ತ ಕ್ರಮ ಘೋಷಿಸದೆ ಜಿಲ್ಲಾಧಿಕಾರಿಗಳು ಈ ಹೆಚ್ಚುವರಿ ಹೊಣೆಯನ್ನು ವಿಲೇಜ್ ಆಫೀಸರ್ ಹಾಗೂ ಪಂಚಾಯತು ಸದಸ್ಯರ ತಲೆಗೆ ಹೊರಿಸಿ ಜಾರಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ಕಂಡು ಬರುತ್ತಿದ್ದು ಮಕ್ಕಳ ಸುರಕ್ಷತತೆಯ ಬಗ್ಗೆ ಪೋಷಕರು ಗೊಂದಲಕ್ಕೀಡಾಗಿದ್ದಾರೆ.
ಈ ಹಿಂದೆ ಇದ್ದದ್ದು: ರಾಜ್ಯ ಶಿಕ್ಷಣ ಇಲಾಖೆಯು ಮಳೆ ಅರ್ಭಟ ಖಚಿತಪಡಿಸಿ ರಜೆ ನೀಡುವ ಹೊಣೆಗಾರಿಕೆಯನ್ನು ಆಯಾಯ ಜಿಲ್ಲಾಧಿಕಾರಿಗಳಿಗೆ ನೀಡಿದ್ದು ಮಕ್ಕಳು ಶಾಲೆಗೆ ಹೊರಡುವ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ರಜೆ ಘೋಷಣೆ ಆದೇಶ ನಡೆಯಬೇಕೆಂದು ಸೂಚಿಸಿತ್ತು. ಇದರಂತೆ ಕಳೆದ ವಾರಗಳ ಹಿಂದೆ ಜಿಲ್ಲೆಯ ಕುಂಬಳೆ ಸಮೀಪದ ಅಂಗಡಿಮೊಗರು ಶಾಲೆಯಲ್ಲಿ ಮರ ಮೈಮೇಲೆ ಬಿದ್ದು ವಿದ್ಯಾರ್ಥಿನಿಯೋರ್ವೆ ದಾರುಣ ಅಂತ್ಯ ಕಂಡ ವಿಷಯವಾಗಿ ಹಾಗೂ ನಿರಂತರವಾಗಿ ಸುರಿದ ಮಳೆಯ ಹಿನ್ನಲೆ ಸತತ ಐದು ದಿನ ರಜೆ ಘೋಷಿಸಲಾಗಿತ್ತು. ಅ ಬಳಿಕ ಮಳೆಯ ಅರ್ಭಟ ಕಡಮೆಯಾಗುತ್ತಿದ್ದಂತೆ ಶಾಲೆ ಆರಂಭಗೊಂಡಿತ್ತು.
ಮಳೆ ಬಿರುಸು : ಇದೀಗ ಶನಿವಾರದಿಂದ ಮಳೆ ಬಿರುಸುಗೊಂಡಿದ್ದು ಅಲ್ಲಲ್ಲಿ ವ್ಯಾಪಕ ಹಾನಿ ನಾಶ ನಷ್ಟಗಳುಂಟಾಗುತ್ತಿರುವುದಾಗಿ ವರದಿಯಾಗುತ್ತಿದೆ.ಜಿಲ್ಲೆಯ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಕರಾವಳಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಈ ನಡುವೆ ಮಂಗಳವಾರ ಜಿಲ್ಲೆಯ ಹೊಸದುರ್ಗ ಹಾಗೂ ವೆಳ್ಳರಿಕುಂಡು ತಾಲೂಕುಗಳಿಗೆ ಮಾತ್ರ ಆನ್ವಯಿಸಿ ಜಿಲ್ಲಾಧಿಕಾರಿಗಳು ರಜೆ ಘೋಷಿಸಿ ದ್ವಂದ ನೀತಿ ಸಾರಿದ್ದಾರೆಂದು ಮಂಜೇಶ್ವರ ಕಾಸರಗೋಡು ತಾಲೂಕು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಆದೇಶ: ಬುಧವಾರವೂ ಮಳೆ ಮುಂದುವರಿದಿದ್ದು ಇದೀಗ ಮಂಗಳವಾರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಶಾಲೆಗೆ ಹೋಗುವ ಮಕ್ಕಳ ಸುರಕ್ಷಿತತೆ ಹೆತ್ತವರ ಹಾಗೂ ಶಿಕ್ಷಕರು ಖಚಿತಪಡಿಸಬೇಕಾಗಿದ್ದು ಮಕ್ಕಳು ಸುರಕ್ಷಿತವಾಗಿ ಶಾಲೆಗೆ ತಲುಪಲು ಸ್ಥಳೀಯ ಪಂಚಾಯತು ಸದಸ್ಯರು,ಪಂಚಾಯತು ಕಾರ್ಯದರ್ಶಿ, ವಿಲೇಜು ಆಫೀಸರ್ ಅಗತ್ಯವಾದ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಜಾರಿ ಇಂಪ ಶೇಖರ್ ಕೆ. ಸೂಚಿಸಿದ್ದಾರೆ.
ಗ್ರಾಮೀಣ ಜನತೆಯ ಸಮಸ್ಯೆ: ಈ ನಡುವೆ ಎಡೆಬಿಡದೆ ಸುರಿಯುವ ಮಳೆಯ ಕಾರಣ ಹೆಚ್ಚಿನ ಗ್ರಾಮೀಣ ಪ್ರದೇಶದ ಮಕ್ಜಳು ಶಾಲೆಗೆ ಹೋಗುವುದರ ಬಗ್ಗೆ ಆತಂಕವ್ಯಕ್ತಪಡಿಸಿದ್ದು ಶಾಲಾ ಅಧಿಕೃತರಿಗೆ ಪೋನಾಯಿಸಿ ಕೇಳಿದಾಗ ರಜೆ ಇಲ್ಲವೆಂದು ತಿಳಿಸಿದ್ದು ಜಿಲ್ಲಾಧಿಕಾರಿಗಳ ಈ ದೀಢೀರ್ ಆದೇಶದಿಂದ ಗ್ರಾಮಾಧಿಕಾರಿಗಳು ಹಾಗೂ ಸ್ಥಳೀಯ ಪಂಚಾಯತು ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಗ್ರಾಮೀಣ ಪ್ರದೇಶಗಳು ಕಾಡು ಮೇಡು ಪರ್ವತಗಳಿಂದ ಅವೃತ್ತವಾಗಿದ್ದರೆ ಹೊಳೆ ತೋಡುಗಳು ಉಕ್ಕಿ ಹರಿಯುವುದು,ಕಡಲ್ಕೊರೆತ ಸರ್ವೆ ಸಾಮಾನ್ಯವಾಗಿದೆ.
ಈ ಬಗ್ಗೆ ಪೆಸ್ಬುಕ್ ಪೇಜಿನ ಆದೇಶ ಮಾತ್ರ…ಗ್ರಾಮಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತು ಅಧಿಕಾರಿಗಳು ಸುರಿಯುತ್ತಿರುವ ಮಳೆಯ ನಡುವೆ ಪ್ರಾಕೃತಿಕ ವಿಕೋಪದ ನಾಶ ನಷ್ಟ ಅಂದಾಜಿಸಲು ಹಾಗೂ ಸರಕಾರಕ್ಕೆ ಲೆಕ್ಕಪತ್ರ ಸಲ್ಲಿಸಲು ಇರುವ ಕರ್ತವ್ಯದ ನಡುವೆ ಇದೀಗ ಶಾಲಾ ಮಕ್ಕಳ ಸುರಕ್ಷಿತತೆಯ ಹೆಚ್ಚುವರಿ ಹೊಣೆಗಾರಿಕೆಯ ಬಗ್ಗೆ ಜಿಲ್ಲಾಧಿಕಾರಿ ಆದೇಶಿಸಿದ್ದು ಅಧಿಕಾರಿಗಳು ಗೊಂದಲ ತಾಳುವಂತಾಗಿದೆ. ಇದರ ನಿಭಾವಣೆ ಬಗ್ಗೆ ವಿಲೇಜ್ ಆಫಿಸರ್ ಗೆ ಆಗಲಿ ,ಪಂಚಾಯತು ಕಾರ್ಯದರ್ಶಿಗೆ ಆಗಲಿ ಯಾವುದೇ ಮಾರ್ಗಸೂಚಿ ನೀಡದೆ ಕೇವಲ ಪೆಸ್ಬುಕ್ ಪೋಸ್ಟ್ ಹಾಕಿ ಜವಾಬ್ದಾರಿಯಿಂದ ಜಾರಿಕೊಂಡ ಜಿಲ್ಲಾಧಿಕಾರಿಗಳ ನಡೆಯ ಬಗ್ಗೆ
ಈ ನಡುವೆ ಪೋಷಕರು ಜಿಲ್ಲಾಧಿಕಾರಿಗಳ ಪೆಸ್ಬುಕ್ ಪೇಜಿನಲ್ಲಿ ಹಲವರು ಪರ ಹಾಗೂ ವಿರುದ್ಧ ಪೋಸ್ಟುಗಳನ್ನು ಹಾಕುತ್ತಿರುವುದು ಕಂಡು ಬರುತ್ತಿದೆ.
Inba Sekhar : ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ
Siddaramaiah : ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಸೌಜನ್ಯ ಕುಟುಂಬಸ್ಥರು: ಮರು ತನಿಖೆಗೆ ಮನವಿ
Santosh Lad: ರಾಜ್ಯಾದ್ಯಂತ ರೈತರ ಆತ್ಮಹತ್ಯೆಗಳು ಆಗದಂತೆ ತಡೆಗಟ್ಟವುದು ನಮ್ಮ ಉದ್ದೇಶ : ಸಂತೋಷ್ ಲಾಡ್