ಧರ್ಮಸ್ಥಳ ಪ್ರಕರಣದ ದೂರುದಾರ ಚಿನ್ನಯ್ಯ ಆರೋಪಿಯಾಗಿ ಜೈಲಿನಲ್ಲಿದ್ದಾನೆ. ಈಗ ಚಿನ್ನಯ್ಯ ಎರಡು ವರ್ಷಗಳ ಹಿಂದೆ ತಿಮರೋಡಿ ಮನೆಯಲ್ಲಿ ಮಾತನಾಡಿರುವ ವಿಡಿಯೋಗಳ ಸಿರೀಸ್ ದಿನಾ ಬಿಡುಗಡೆಯಾಗುತ್ತಲೇ ಇದೆ. ಅದರಲ್ಲಿ ಈಗಾಗಲೇ 11 ಪಾರ್ಟ್ ಗಳು ಬಿಡುಗಡೆಯಾಗಿದೆ. ಸದ್ಯ ಚಿನ್ನಯ್ಯ ಸೌಜನ್ಯ ಪ್ರಕರಣದ ಕುರಿತಂತೆ ಇಂಚಿಂಚೂ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಸೌಜನ್ಯ ಹೋರಾಟಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದು ಹೇಳಲಾಗಿದೆ.
2023 ರ ಆಗಸ್ಟ್ ನಲ್ಲಿ ಈ ವಿಡಿಯೋ ಮಾಡಲಾಗಿದೆ. ತಿಮರೋಡಿ ಮನೆಗೆ ಮೊದಲ ಭಾರೀ ಭೇಟಿ ನೀಡಿದ್ದ ಚಿನ್ನಯ್ಯ, ಈ ವೇಳೆ ಚಿನ್ನಯ್ಯನ ಎರಡನೇ ಹೆಂಡತಿ ಕೂಡ ಇದ್ದರು. ರೀಲಿಸ್ ಆಗಿರುವ 9ನೇ ಪಾರ್ಟ್ ವಿಡಿಯೋದಲ್ಲಿ ವೇಲಿನಿಂದ ರವಿ ಪೂಜಾರಿಯನ್ನು ನೇತು ಹಾಕಿ ಕೊಂದಿದ್ದಾರೆ. ಪೊಲೀಸರು ಬರುವ ಮೊದಲೇ ರವಿ ಪೂಜಾರಿಯನ್ನು ಇಳಿಸಿದ್ದಾರೆ ಎಂದು ಚಿನ್ನಯ್ಯ ವಿಡಿಯೋದಲ್ಲಿ ಹೇಳಿದ್ದಾನೆ.
ನೇತ್ರಾವತಿಯ ನ್ಯಾಚುರೋಪತಿ ಬಳಿ ಒಂದು ಬಸ್ ಸ್ಟಾಪ್ ಇತ್ತು. ಆ ಬಸ್ ಸ್ಟಾಪ್ ನಲ್ಲಿ ಒಂದು ಡೂಮ್ ಸಿಸಿಟಿವಿ ಇತ್ತು. ಅದರಲ್ಲಿ ಸೌಜನ್ಯ ಕೇಸ್ ನ ಸಾಕ್ಷ್ಯ ಇತ್ತು. ಆ ಬಸ್ ಸ್ಟಾಪ್ ಸಮೇತ ಎತ್ತಿಕೊಂಡು ಹೋಗಿದ್ದಾರೆ.
ನೇತ್ರಾವತಿ ಬಳಿ ಸೌಜನ್ಯ ಕೊಲೆ ಆಗಿದೆ. ಆದ್ರೆ ಲೀಕ್ ಔಟ್ ಆಗಿದ್ದು ಮಾತ್ರ ಉಜಿರೆಯಲ್ಲಿ ಇದು ಹೇಗೆ ಅಂತಾ ಅರ್ಥ ಆಗಲಿಲ್ಲ ಅಂತ ಚಿನ್ನಯ್ಯ ಬಹಿರಂಗಪಡಿಸಿದ್ದಾನೆ.
ಚಿನ್ನಯ್ಯ ತಿಮರೋಡಿಯಲ್ಲಿ ಮಾತನಾಡುವ ವೇಳೆ, ನೂರಾರು ಶವಗಳನ್ನು ಹೂತಿದ್ದೇನೆ ಅಂತ ಹೇಳಿದ್ದ. ಇದೇ ರೀತಿಯ ಹೇಳಿಕೆಯನ್ನು ಬೆಳ್ತಂಗಡಿ ಕೋರ್ಟಿನಲ್ಲಿ 164 ಅಡಿ ನೀಡಿದ್ದಾನೆ. ಸುಪ್ರೀಂ ಕೋರ್ಟ್ ವಕೀಲರಿಗೂ ಈ ಹೇಳಿಕೆ ನೀಡಲಾಗಿದೆ. ಆದರೆ ನಂತರದ ವರ್ತನೆಗಳು ಈ ಹೇಳಿಕೆಯ ವಿರುದ್ಧವಾಗಿರುವುದರಿಂದ, ಆತ ಹೇಳಿದ ಮಾತು ನಿಜವೋ ಸುಳ್ಳೋ ಎಂಬ ಗೊಂದಲ ಮುಂದುವರಿದಿದೆ.
ಚಿನ್ನಯ್ಯ ನೀಡಿದ ವಿಡಿಯೋದಲ್ಲಿ ವಿವರಿಸಿರುವ ಸ್ಥಳಕ್ಕೆ ಬದಲು ಎಸ್‌ಐಟಿ ಇತರ ಸ್ಥಳಗಳಲ್ಲಿ ಶೋಧ ನಡೆಸಿದ ಆರೋಪವೂ ಕೇಳಿಬಂದಿದೆ. ಇದರಿಂದ ತನಿಖೆಯ ನಿಖರತೆ ಮೇಲೂ ಪ್ರಶ್ನೆ ಎದ್ದಿದೆ. ಈ ವೀಡಿಯೋ ಸಿರೀಸ್ ಸೌಜನ್ಯ ಹೋರಾಟಗಾರರಿಗೆ ಮತ್ತಷ್ಟು ಉತ್ಸಾಹವನ್ನು ನೀಡಿದೆ. ಪ್ರಕರಣಕ್ಕೆ ಹೊಸ ಬೆಳಕು ಚೆಲ್ಲುತ್ತಿದೆ ಎನ್ನಲಾಗಿದೆ. ಮುಂದಿನ ಭಾಗಗಳು ಇನ್ನೂ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಬಹುದೆಂದು ನಿರೀಕ್ಷೆ ಮೂಡಿದೆ.
ವರದಿ : ಲಾವಣ್ಯ ಅನಿಗೋಳ




