Monday, December 23, 2024

Latest Posts

Chinaದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಕೆ..!

- Advertisement -

ಕೊರೋನಾ (corona) ತವರೂರು ಚೀನಾದಲ್ಲಿ ಕೊರೋನಾ ಹಾಗುವ ಒಮಿಕ್ರಾನ್ ಪ್ರಕರಣಗಳ (Omicron cases) ಸಂಖ್ಯೆ ಏಕಾಏಕಿ ಹೆಚ್ಚಾಗುತ್ತಿದೆ. ಏಕಾಏಕಿ ಪ್ರಕರಣಗಳ ಸಂಖ್ಯೆ ಒಂದು ಮಿಲಿಯನ್ (Million) ಏರಿಕೆಯಾಗಿದೆ. ಆರೋಗ್ಯ ಅಧಿಕಾರಿಗಳ ಪ್ರಕಾರ ಶುಕ್ರವಾರ 20,079 ಜನರಿಗೆ ಸೋಂಕು ದೃಢಪಟ್ಟಿದೆ. ಈವರೆಗೆ ಹಾಂಗ್ ಕಾಂಗ್‌ನಲ್ಲಿ (Hong Kong) ಒಟ್ಟು 1,016,944 ಪ್ರಕರಣಗಳು ದಾಖಲಾಗಿವೆ. ಫೆಬ್ರವರಿ 9 ರಿಂದ ಸುಮಾರು 5,200 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಹಾಂಗ್ ಕಾಂಗ್‌ನಲ್ಲಿ ಒಟ್ಟು 5,401 ಜನ ಈವರೆಗೆ ಕೊರೊನಾ ವೈರಸ್ (corona virus) ಸೋಂಕಿಗೆ ಬಲಿಯಾಗಿದ್ದಾರೆ. ಚೀನಾದಲ್ಲಿ ದೃಢಪಟ್ಟ ಹೆಚ್ಚಿನ ಸೋಂಕಿತರಲ್ಲಿ ರೋಗಲಕ್ಷಣಗಳು ಕಂಡುಬಂದಿದೆ. ಸತ್ತವರಲ್ಲಿ ಹೆಚ್ಚಿನವರು ವಯಸ್ಸಾದ ರೋಗಿಗಳು, ಅವರಲ್ಲಿ ಹೆಚ್ಚಿನವರು ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿಲ್ಲ. ಕೊರೊನಾ ರೋಗಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಹಾಂಗ್ ಕಾಂಗ್ ಕಠಿಣ ಶೂನ್ಯ ಕೋವಿಡ್ ನಿರ್ಬಂಧಗಳನ್ನು ವಿಧಿಸಿದೆ. ತಾತ್ಕಾಲಿಕವಾಗಿ ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ. ಸಾರ್ವಜನಿಕ ಸಭೆಗಳಿಗೆ ಬ್ರೇಕ್ ಹಾಕಲಾಗಿದೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಹಾಂಗ್ ಕಾಂಗ್‌ಗೆ ಸಹಾಯ ಮಾಡಲು ತಜ್ಞರು ಮತ್ತು ವೈದ್ಯಕೀಯ ಸಂಪನ್ಮೂಲಗಳನ್ನು ಕಳುಹಿಸುವಂತೆ ಸಹಾಯವನ್ನು ಕೋರಲಾಗಿದೆ. ಪ್ರಸ್ತುತ ಕೋವಿಡ್‌ ಪ್ರಕರಣಗಳು ಏರಿಕೆ ಆಗುವ ಮೊದಲು ಡಿಸೆಂಬರ್ ಅಂತ್ಯದಲ್ಲಿ ಹಾಂಗ್ ಕಾಂಗ್‌ನಲ್ಲಿ ಕೇವಲ 12,000 ಕೋವಿಡ್‌ ಪ್ರರಕಣಗಳು ಮತ್ತು ಸುಮಾರು 200 ಸಾವುಗಳು ದಾಖಲಾಗಿದ್ದವು. ಜನವರಿ ನಂತರ ಏಕಾಏಕಿ 54,000 ಪ್ರಕರಣಗಳು ಮತ್ತು 145 ಸಾವುಗಳನ್ನು ಕಾಣಿಸಿಕೊಂಡವು. ಹಾಂಗ್ ಕಾಂಗ್ ವಿಶ್ವವಿದ್ಯಾಲಯವು ಮಾರ್ಚ್‌ನಲ್ಲಿ (march) ಸುಮಾರು 180,000 ದೈನಂದಿನ ಸೋಂಕುಗಳು ಮತ್ತು ದಿನಕ್ಕೆ ಸುಮಾರು 100 ಸಾವುಗಳು ದಾಖಲಾಗುವ ಮೂಲಕ ಹಾಂಗ್‌ ಕಾಂಗ್‌ನಲ್ಲಿ ಕೋವಿಡ್‌ ಉತ್ತುಂಗಕ್ಕೇರಲಿದೆ ಎಂದು ಅಂದಾಜಿಸಿತ್ತು. ಚೀನಾದ ಮಾಧ್ಯಮಗಳ ಪ್ರಕಾರ, ಚೀನಾ 2020 ರಿಂದ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬೀಜಿಂಗ್ (Beijing) ನಗರದಾದ್ಯಂತ ಲಾಕ್‌ಡೌನ್‌ಗಳು ಹಾಗೂ ಸಾಮೂಹಿಕ ಕೋವಿಡ್‌ ಪರೀಕ್ಷೆಯನ್ನು ಆರಂಭ ಮಾಡಲಾಗಿತ್ತು. ಆದರೆ ಹಾಂಗ್ ಕಾಂಗ್‌ನಲ್ಲಿ ಪ್ರಕರಣಗಳು ಮಾತ್ರ ನಿರಂತರವಾಗಿ ಏರಿಕೆ ಕಾಣುತ್ತಿದೆ. ಸಾಮೂಹಿಕ ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾದಾಗ ಸಾಕಷ್ಟು ಘಟಕಗಳು ಲಭ್ಯವಿರುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ.

- Advertisement -

Latest Posts

Don't Miss