Thursday, June 13, 2024

Latest Posts

ಇಂದು ಆತಿಥೇಯರ ವಿರುದ್ಧ 2ನೇ ಕದನ- ಸರಣಿ ಗೆಲುವಿನ ಮೇಲೆ ಭಾರತ ಚಿತ್ತ

- Advertisement -

ಹರಾರೆ: ಮೊದಲ ಪಂದ್ಯ ಗೆದ್ದು ಬೀಗಿರುವ ಭಾರತ ಕ್ರಿಕೆಟ್ ತಂಡ ಇಂದು ಎರಡನೆ ಪಂದ್ಯದಲ್ಲಿ  ಆತಿಥೇಯ ಜಿಂಬಾಬ್ವೆ ತಂಡವನ್ನು ಎದುರಿಸಲಿದ್ದು  ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಇಲ್ಲಿನ ಹರಾರೆ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಕೆಲವು ಸವಾಲುಗಳನ್ನು ಹಾಕಿಕೊಂಡು ಪ್ರಯೋಗಗಳನ್ನು ಮಾಡಲು ನಿರ್ಧರಿಸಿದರೆ ಇತ್ತ ಆತಿಥೇಯ ಜಿಂಬಾಬ್ವೆ ತಂಡ ಸರಣಿ ಉಳಿಸಿಕೊಳ್ಳಲು ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ.

ನಾಯಕ ಕೆ.ಎಲ್. ರಾಹುಲ್‍ಗೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ತೆಗೆದುಕೊಂಡು ತಂಡವನ್ನು ಪರೀಕ್ಷೆಗೆ ಒಳಪಡಿಸಲಿದ್ದಾರೆ. ಮಧ್ಯಾಹ್ನಕ್ಕಿಂತ ಬೆಳಗ್ಗೆ ಬ್ಯಾಟಿಂಗ್ ಮಾಡುವುದು ತುಂಬ ಕಠಿಣವಾಗಿದೆ.

ಏಷ್ಯ ಕಪ್ ದೃಷ್ಟಿಯಿಂದ ನಾಯಕ ಕೆ.ಎಲ್. ರಾಹುಲ್‍ಗೆ ಅವಕಾಶ ಸಿಗಬೇಕಿದೆ.  ಪಾಕ್ ವೇಗಿ ಶಾಯಿನ್ ಅಫ್ರೀದಿ ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಲಿದ್ದಾರೆ. ಇವರೊಂದಿಗೆ ದೀಪಕ್ ಹೂಡಾಗೂ ಅವಕಾಶ ಕೊಟ್ಟು  ಆತ್ಮವಿಶ್ವಾಸ ಹೆಚ್ಚಿಸಬೇಕಿದೆ.  ನಂ.4ರಲ್ಲಿ ಸಂಜು ಸ್ಯಾಮ್ಸನ್ ಆಡಿದರೆ ಇನ್ನಿಂಗ್ಸ್ ಕಟ್ಟಲು ಅವಕಾಶ ಕೊಟ್ಟು ಪ್ರಯೋಗ ಮಾಡಬಹುದು.

ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್‍ಗೆ ಸರಣಿ ಗೆಲ್ಲುವುದು ದೊಡ್ಡ ವಿಷಯವಲ್ಲ ಆದರೆ ಆಟಗಾರರಿಗೆ ವಕಾಶ ಕೊಟ್ಟು ಪರೀಕ್ಷೆ ಮಾಡಬಹುದು.

ಶಿಖರ್ ಧವನ್ ಗಾಯಗೊಂಡಿದ್ದರಿಂದ ಇಂದಿನ ಪಂದ್ಯದಲ್ಲಿ  ಇಶಾನ್ ಕಿಶನ್ ಮತ್ತುಕೆ.ಎಲ್.ರಾಹುಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಬಹುದಾಗಿದೆ. ಸರಣಿ ಗೆಲ್ಲುವುದು ಮುಖ್ಯ ಆದರೆ ಸಂದರ್ಭಗಳನ್ನು ಸೃಷ್ಟಿಸುವುದು ಮುಖ್ಯವಾಗಿದೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ದೀಪಕ್ ಚಾಹರ್ ಏಳು ಓವರ್‍ಗಳಲ್ಲಿ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಮತ್ತೋರ್ವ ವೇಗಿ ಕನ್ನಡಿಗ ಪ್ರಸಿದ್ಧ ಕೃಷ್ಣ ಇನ್ನಷ್ಟು ಏರಿಳಿತಗಳನ್ನು ಪ್ರಯೋಗ ಮಾಡಬೇಕಿದೆ.

ಸಂಭಾವ್ಯ ತಂಡಗಳು

ಭಾರತ ತಂಡ : ಕೆ.ಎಲ್.ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ಶುಭಮನ್ ಗಿಲ್, ದೀಪಕ್ ಹೂಡಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಪ್ರಸಿದ್ಧ ಕೃಷ್ಣಘಿ, ಮೊಹ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಯಾದವ್. 

ಜಿಂಬಾಬ್ವೆ :  ರೆಗಿಸ್ ಚಕಬ್ವ (ನಾಯಕ), ರಿಯಾನ್ ಬರ್ಲ, ಬ್ರಾಡ್ಲಿ ಇವಾನ್ಸ್‍ಘಿ, ಲ್ಯೂಕ್ ಜೊಂಗ್ವೆ, ಇನೋಸೆಂಟ್ ಕೈಯಾ, ವೆಸ್ಲಿ ಮಾಧವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರ ಅಥವಾ ರಿಚರ್ಡ್ ನಾಗರವ, ವಿಕ್ಟರ್ ನ್ಯುಚಿ, ಸಿಖಂದರ್ ರಜಾ, ಮಿಲ್ಟನ್ ಶುಂಬಾ.

- Advertisement -

Latest Posts

Don't Miss