Thursday, December 12, 2024

Latest Posts

Narendra Modi : 77ರ ಸ್ವಾತಂತ್ರ್ಯ ಸಂಭ್ರಮಕ್ಕೆ ಪ್ರಧಾನಿ ವಿಭಿನ್ನ ಶೈಲಿ ಉಡುಪು …!

- Advertisement -

Dehali News : ಪ್ರಧಾನಿ ನರೇಂದ್ರ ಮೋದಿ 77ನೇ ಸ್ವಾತಂತ್ರೋತ್ಸವ ಸಂಭ್ರಮಕ್ಕೆ ಬಹಳ ವಿಭಿನ್ನವಾಗಿಯೇ ಬಟ್ಟೆ ಧರಿಸಿ ದೇಶದ ಜನತೆ ಮುಂದೆ ಗೌರವದಿಂದ ಕಂಡುಬಂದರು. ಎಲ್ಲರ ಚಿತ್ತ ಮೋದಿ ಬಟ್ಟೆಯ  ಮೇಲೆ ನೆಟ್ಟಿತ್ತು ಎನ್ನಲಾಗಿದೆ.

ಕೆಂಪುಕೋಟೆ ತಲುಪಿದ ಪ್ರಧಾನಿ ಮೋದಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಆರಾಮ್ನೆ ಸ್ವಾಗತಿಸಿದರು.

ನರೇಂದ್ರ ಮೋದಿಯವರು ದೆಹಲಿಯ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ 77ನೇ ಸ್ವಾತಂತ್ರ್ಯೋತ್ಸವ ಆಚರಿಸಿದರು. ಇದು ಅವರ 10ನೇ ಬಾರಿಯ ಧ್ವಜಾರೋಹಣ. ಈ ಹಿಂದೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಪ್ರಧಾನಿ ಮನ್​ಮೋಹನ್ ಸಿಂಗ್ ಅವರು ಕೂಡ ಸತತ 10 ಬಾರಿ ಧ್ವಜಾರೋಹಣ ಮಾಡಿದ್ದರು ಎಂಬ ಮಾಹಿತಿಯೂ ಇದೆ.

ಆಗಸ್ಟ್ 15 2023 ರ 77ನೇ ಸ್ವಾತಂತ್ರೋತ್ಸವ ಸಂಭ್ರಮಕ್ಕೆ ಪ್ರಧಾನಿ ಮೋದಿ  ಬಹು ವರ್ಣದ ರಾಜಸ್ಥಾನಿ ಶೈಲಿಯ ಪೇಟದ ಜೊತೆ ಬಿಳಿ ಕುರ್ತಾ ಹಾಗು ಕಪ್ಪು ನೀಲಿ ಬಣ್ಣದ  ಕೋಟ್ ನಲ್ಲಿ ಕಂಗೊಳಿಸಿದರು. ಪ್ರತಿ ವರ್ಷವೂ ಪ್ರಧಾನಿ ವಿಭಿನ್ನ ಶೈಲಿಯ ಉಡುಪಿನೊಂದಿಗೆ ಸ್ವಾತಂತ್ರೋತ್ಸವದಲ್ಲಿ ಕಾಣಿಸಿಕೊಳ್ಳುವುದು ವಿಶೇಷ.

Narendra Modi Speech : ಪ್ರಧಾನಿ ನರೇಂದ್ರ ಮೋದಿ ಭಾಷಣದ  ಪ್ರಮುಖ ಅಂಶಗಳು

Narendra Modi : ಪ್ರಧಾನಿ ಭಾಷಣದಲ್ಲಿ ಬದಲಾದ ಮೊದಲ ಸಂಬೋಧನಾ ಪದ ..!

Narendra Modi : ಕೆಂಪುಕೋಟೆಯಲ್ಲಿ 10ನೇ ಬಾರಿಗೆ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ

- Advertisement -

Latest Posts

Don't Miss