Saturday, March 22, 2025

Latest Posts

‘ನನ್ನ ಮುಖಕ್ಕೆ ಬಾರಿಸಿದಂತಾಗಿದೆ’- ನಟ ಪ್ರಕಾಶ್ ರಾಜ್

- Advertisement -

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್ ರಾಜ್ ಸೋಲುಂಡಿದ್ದಾರೆ.

ತಮ್ಮ ಸೋಲಿನ ಕುರಿತು ಟ್ವೀಟ್ ಮಾಡಿರೋ ಪ್ರಕಾಶ್ ರಾಜ್ ಫಲಿತಾಂಶವು ನನ್ನ ಮುಖಕ್ಕೆ ಜೋರಾಗಿ ಬಾರಿಸಿದಂತಾಗಿದೆ. ಹೆಚ್ಚು ಅವಹೇಳನ, ಅಪಮಾನ ನನ್ನ ದಾರಿಗೆ ಬಂದರೂ ನಾನು ಅದೆನ್ನೆಲ್ಲಾ ದೃಢವಾಗಿ ಮೆಟ್ಟಿನಿಲ್ಲುವೆ. ಜಾತ್ಯತೀತ ದೇಶಕ್ಕಾಗಿ ಹೋರಾಡುವೆ. ನನ್ನ ಕಠಿಣ ಪ್ರಯಾಣ ಈಗ ಶುರುವಾಗಿದೆ. ನನ್ನನ್ನು ಬೆಂಬಲಿಸಿ ನನ್ನ ಜೊತೆಗಿದ್ದವರಿಗೆಲ್ಲಾ ಧನ್ಯವಾದ. ಅಂತ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

- Advertisement -

Latest Posts

Don't Miss