Sunday, September 8, 2024

Latest Posts

Tokyo olympics 2020: ಹಾಕಿಯಲ್ಲಿ ಸ್ಪೇನ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

- Advertisement -

www.karnatakatv.net : ಪಂದ್ಯ ಆರಂಭವಾದ 14ನೇ ನಿಮಿಷದಲ್ಲಿ ಸಿಮ್ರಂಜಿತ್ ಸಿಂಗ್ ಗೋಲು ಬಾರಿಸುವ ಮೂಲಕ ಭಾರತದ ಖಾತೆ ತೆರೆದರು. ಇದಾದ ಮುಂದಿನ ನಿಮಿಷದಲ್ಲೇ ರುಪಿಂದರ್ ಪಾಲ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಮತ್ತೊಂದು ಗೋಲು ಸಿಡಿಸಿದರು. ಮೊದಲನೇ ಕ್ವಾರ್ಟರ್​ನಲ್ಲೇ ಭಾರತ 2-0 ಮುನ್ನಡೆ ಸಾಧಿಸಿತು. ನಂತರ ರುಪಿಂದರ್ ಪಾಲ್ ಪೆನಾಲ್ಟಿ ಕಾರ್ನರ್ ಮೂಲಕ ಮತ್ತೊಂದು ಗೋಲು ಬಾರಿಸಿ ಭಾರತ 3-0 ಮುನ್ನಡೆ ಸಾಧಿಸುವಂತೆ ಮಾಡಿದರು. ಅಂತಿಮವಾಗಿ ಭಾರತ 3-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಒಲಂಪಿಕ್ಸ್ನಲ್ಲಿ ಮೊದಲ ಪಂದ್ಯದಲ್ಲಿ

ನ್ಯೂ ಜಿಲ್ಯಾಂಡ್ ವಿರುದ್ಧ 3-2 ಅಂತರದಲ್ಲಿ ಗೆಲುವು ಸಾಧಿಸಿತ್ತು ನಂತರ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 7 -1 ಅಂತರದ ಹೀನಾಯ ಸೋಲನ್ನು ಅನುಭವಿಸಿತ್ತು ಇದೀಗ ಮತ್ತೆ ಗೆಲುವಿನ ಹಾದಿಗೆ ಮರಳಿರುವ ಭಾರತ ಹಾಕಿ ತಂಡ ಸ್ಪೇನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

- Advertisement -

Latest Posts

Don't Miss