ಶಾಕಿಂಗ್ ನ್ಯೂಸ್ : ಚೀನಾಗಿಂತ ಕಠಿಣವಾಗ್ತಿದೆ ಭಾರತದ ಸನ್ನಿವೇಶ.!

ಕರ್ನಾಟಕ ಟಿವಿ : ಕೊರೊನಾ ತವರೂರು ಚೀನಾ.. ಇಲ್ಲಿ 82,926 ಜನರಿಗೆ ಸೋಂಕು ತಗುಲಿತ್ತು, 4633 ಸೋಂಕಿತರು ಸಾವಿಗೀಡಾಗಿದ್ರು. 78,189 ಸೋಂಕಿತರು ಗುಣಮುಖರಾಗಿದ್ರು.. ಇನ್ನೆರಡು ದಿನಗಳಲ್ಲಿ ಭಾರತದಲ್ಲಿ ಸೋಂಕಿತರ ಸಂಖ್ಯೆ ಚೀನಾವನ್ನ ಮೀರಿಸಲಿದೆ. ಯಾಕಂದ್ರೆ ಭಾರತದಲ್ಲಿ ಸೋಂಕಿತರ ಸಂಖ್ಯೆ 75 ಸಾವಿರ ಗಡಿಗೆ ಬಂದು ನಿಂತಿದೆ. ಇನ್ನೆರಡು ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಚೀನಾ ವನ್ನ ಹಿಂದಿಕ್ಕಲಿದೆ. ಇದು ಕೂಡ ಒಂದು ಅಪಾಯಕಾರಿ ಮಟ್ಟವನ್ನ ಮೀರಿ ಹೋಗ್ತಿರೋದು ಆತಂಕಕ್ಕೆ ಕಾರಣವಾಗಿದೆ. ಇದೀಗ ಸೋಂಕಿತರ ಪಟ್ಟಿಯಲ್ಲಿ ಭಾರತ 12 ನೇ ಸ್ಥಾನದಲ್ಲಿದೆ.

About The Author