ಪಾಕಿಸ್ತಾನಕ್ಕೆ ಬನ್ನಿ ಸಾರ್…. ಹಿಂಗಂತಾ ಆ ದೇಶ ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನ ಕೂಗಿ ಕೂಗಿ ಕರೆಯುತ್ತಿದೆ.. ಅದು ಯಾಕೆ ಹಾಗೆ ಕರೀತಿದ್ದಾರೆ?
2014ರಲ್ಲಿ ಮೊದಲ ಭಾರಿ ಪ್ರಧಾನಿ ಆಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ್ರು.. ಅವರ ಪದಗ್ರಹಣ ಸಮಾರಂಭಕ್ಕೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ರನ್ನೂ ಮೋದಿ ಆಹ್ವಾನಿಸಿದ್ರು. ಮೋದಿ ಪ್ರಮಾಣವಚನ ಸಮಾರಂಭಕ್ಕೆಂದು ಪಾಕ್ ಪ್ರಧಾನಿ ದೆಹಲಿಗೆ ಬಂದುಹೋಗಿದ್ರು. ಅದಾಗಿ ಒಂದೇ ವರ್ಷಕ್ಕೆ ಪ್ರಧಾನಿ ಮೋದಿ ಕೂಡ ಪಾಕಿಸ್ತಾನಕ್ಕೆ ಸರ್‌ಪ್ರೈಸ್ ವಿಸಿಟ್ ಕೊಟ್ಟಿದ್ರು. 2015ರಲ್ಲಿ ನವಾಜ್ ಷರೀಫ್, ಪಿಎಂ ಮೋದಿಯನ್ನ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿದ್ರು.. ಇಷ್ಟೆಲ್ಲಾ ಆದ್ಮೇಲೂ ಭಾರತ ಹಾಗೂ ಪಾಕ್ ಬಾಂಧವ್ಯ ಹದಗೆಟ್ಟಿತ್ತು.
ಭಾರತದ ಪ್ರಧಾನಿಗೆ 2015ರಲ್ಲಿ ಭವ್ಯ ಸ್ವಾಗತ ಏನೋ ಸಿಕ್ಕಿತ್ತು. ಆದ್ರೆ ಮೋದಿ ಜೊತೆಗೆ ಪಾಕ್ ಅಷ್ಟೇ ದ್ವೇಷವನ್ನೂ ಕಾರಿತ್ತು.. 10 ವರ್ಷದ ಬಳಿಕ ಭಾರತದ ಪ್ರಧಾನ ಮಂತ್ರಿಗೆ ಪಾಕಿಸ್ತಾನ ಈ ಬಾರಿ ವಿಶೇಷ ಆಮಂತ್ರಣ ನೀಡಿದೆ.. ಪಾಕಿಸ್ತಾನಕ್ಕೆ ಬನ್ನಿ ಸಾರ್ ಅಂತ ಮೋದಿಯವರನ್ನು ಕೂಗಿ ಕೂಗಿ ಕರೆದಿದೆ ಪಾಕಿಸ್ತಾನ..
ಪಾಕಿಸ್ತಾನದಲ್ಲಿ ಅಕ್ಟೋಬರ್ 15-16ರಂದು ಶಾಂಘೈ ಸಹಕಾರ ಒಕ್ಕೂಟದ ಸಭೆ ನಡೆಯಲಿದೆ. ಈ ಸಭೆಗೆ ಪ್ರಧಾನಿ ಮೋದಿ ಅವ್ರನ್ನ ಆಹ್ವಾನಿಸಲಾಗಿದೆ. ಶಾಂಘೈ ಸಹಕಾರ ಒಕ್ಕೂಟದಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ, ಚೀನಾ, ರಷ್ಯಾ, ತಜಕಿಸ್ತಾನ, ಕಜಕಿಸ್ತಾನ, ಉಜ್ಬೇಕಿಸ್ತಾನ, ಕಿರ್ಗಿಸ್ಥಾನ ರಾಷ್ಟ್ರಗಳು ಸದಸ್ಯರಾಗಿವೆ. ಕಳೆದ ಬಾರಿ ಕಜಕಿಸ್ತಾನದಲ್ಲಿ ಶೃಂಗಸಭೆ ನಡೆದಿತ್ತು.. ಈಗ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೀತಿದೆ.
ಆದರೆ ಈ ಸಭೆಗೆ ಪ್ರಧಾನಿ ಮೋದಿ ಹೋಗೋದು ಡೌಟ್.. ಭಾರತ ಹಾಗೂ ಪಾಕ್ ನಡುವಿನ ಸಂಬಂಧ ಹಳಸಿದೆ. ಜೊತೆಗೆ ಪ್ರಧಾನಿ ರಕ್ಷಣೆ ದೃಷ್ಟಿಯಿಂದಲೂ ಮೋದಿ ಪಾಕ್‌ಗೆ ಹೋಗೋದು ಅನುಮಾನ. ಕಳೆದ ಬಾರಿ ಕೂಡ ಪಾಕ್ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವ್ರೇ ಎಸ್‌ಸಿಒ ಸಭೆಯಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು. ಈ ಬಾರಿಯೂ ಪಾಕ್‌ನಲ್ಲಿ ನಡೆಯೋ ಸಭೆಗೂ ಜೈಶಂಕರ್ ಅವ್ರೇ ಹೋಗುವ ಸಾಧ್ಯತೆ ಇದೆ. ಆದರೂ ಪಾಕಿಸ್ತಾನ ಮಾತ್ರ ಮೋದಿಯರಿಗೆ ಆಮಂತ್ರಣ ಕೊಟ್ಟು ನೀವೇ ಬನ್ನಿ ಎಂದಿದೆ..