- Advertisement -
ಕರ್ನಾಟಕ ಟಿವಿ : ಲಾಕ್ ಡೌನ್ 3ನೇ ಹಂತ ಶುರುವಾದಾಗಿನಿಂದ ದೇಶಧಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗ್ತಿದೆ. ಕಳೆದೊಂದು ವಾರದಿಂದ ಮೂರು ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗ್ತಿದೆ. ಇಂದು ಒಂದೇ ದಿನ 3320 ಜನರಲ್ಲಿ ಸೋಂಕು ಪತ್ತೆಯಾಗಿದ್ದು 95 ಸೊಂಕಿತರು ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಈ ಕ್ಷಣದ ವರೆಗೆ 59,801 ಜನರಲ್ಲಿ ಸೋಂಕು ಪತ್ತೆಯಾಗಿದ್ದು 1986 ಸೊಂಕಿತರು ಸಾವನ್ನಪ್ಪಿದ್ದಾರೆ.. 17,900 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದು 39,911 ಚಿಕಿತ್ಸೆ ಪಡೀತಿದ್ದಾರೆ.. ಇದೇ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಕಂಡು ಏರಿಕೆಯಾಗ್ತಿದ್ರೆ, ಮೇ 17ರ ಮೂರನೇ ಹಂತದ ಲಾಕ್ ಡೌನ್ ಮುಗಿಯುವ ವೇಳೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ತಲುಪುವ ಸಾಧ್ಯತೆ ಇದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದ್ರೆ ಸೋಂಕಿತರು ಹಾಗೂ ಸಾವಿನ ಪ್ರಮಾಣ ಭಾರತದಲ್ಲಿ ಏರಿಕೆ ಕಾಣ್ತಿರೋದು ಆತಂಕಕ್ಕೆ ಕಾರಣವಾಗಿದೆ.

- Advertisement -