Sunday, September 8, 2024

Latest Posts

ಮಹಾಕಾಳಿ ಸೇತುವೆ ನಿರ್ಮಾಣಕ್ಕಾಗಿ ಭಾರತ ನೇಪಾಳ ತಿಳುವಳಿಕೆ ಒಪ್ಪಂದಕ್ಕೆ ಸಂಪುಟ ಅನುಮೋದನೆ

- Advertisement -

ಮಹಾಕಾಳಿ ಸೇತುವೆಯನ್ನು ನಿರ್ಮಾಣ ಮಾಡಿದರೆ, ಉತ್ತರಖಂಡದ ದರ್ಚುಲಾ ಮತ್ತು ನೇಪಾಳ ಪ್ರದೇಶದಲ್ಲಿ ವಾಸಿಸುವ ಜನರಿಗೆ ಈ ಸೇತುವೆ ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕುರ್ ಹೇಳಿದ್ದಾರೆ. ಅದೇ ರೀತಿ ಕೇಂದ್ರದ ಸಚಿವ ಸಂಪುಟದಲ್ಲಿ ಈ ಸೇತುವೆಗೆ ಅನುಮೋದನೆಯೂ ದೊರೆತಿದೆ.
ಈ ಯೋಜನಾ ವೆಚ್ಚವು ಸುಮಾರು 10.750 ಸರ್ಕ್ಯೂಟ್ ಕಿಲೋಮೀಟರ್ ಪ್ರಸರಣ ಮತ್ತು ಸುಮಾರು 27.500 ಮೆಗಾ ವೋಲ್ಟ್ -ಆಂಪೆರಸ್ ಉಪಕೇಂದ್ರಗಳ ಪರಿವರ್ತನಾ ಸಾಮರ್ಥ್ಯವನ್ನು ಸೇರಿಸುತ್ತದೆ. ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು .
ಈ ಯೋಜನೆಯ ವೆಚ್ಚವು ಶೇ.33ರಷ್ಟು ಕೇಂದ್ರ ಆರ್ಥಿಕ ನೆರವು ಹೊಂದಿದ್ದು, ಯೋಜನೆಯ
2 ನೇ ಹಂತದ ಒಟ್ಟು ಅಂದಾಜು ವೆಚ್ಚ 12,031 ಕೋಟಿ , ಗುಜರಾತ್ ಹಿಮಾಚಲ್ ಪ್ರದೇಶ, ಕರ್ನಾಟಕ, ಕೇರಳ, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರ ಪ್ರದೇಶ ಈ ಹಂತದ ವ್ಯಾಪ್ತಿಗೆ ಒಳಪಡಲಿದೆ.
ಅದೇ ರೀತಿ ಮಹಾಕಾಳಿ ನದಿಯ ಮೇಲೆ ಸೇತುವೆ ನಿರ್ಮಿಸಲು ಭಾರತ ಮತ್ತು ನೇಪಾಳ ನಡುವೆ ಸಹಿ ಹಾಕಲಾಗುವ ತಿಳುವಳಿಕಾ ಒಡಂಬಡಿಕೆಗೆ ಅನುಮೋದನೆ ನೀಡುವ ಬಗ್ಗೆಯೂ ಠಾಕೂರ್ ಮಾಹಿತಿ ನೀಡಿದರು.
ಉತ್ತರಾಖಂಡದ ಧರ್ಚುಲಾ ಮತ್ತು ನೇಪಾಳ ಪ್ರದೇಶದಲ್ಲಿ ವಾಸಿಸುವ ಜನರಿಗೆ ಈ ಸೇತುವೆ ಸಹಾಯ ಮಾಡುತ್ತದೆಂದು ಸಚಿವರು ಒತ್ತಿ ಹೇಳಿದರು.

- Advertisement -

Latest Posts

Don't Miss