Tuesday, May 6, 2025

Latest Posts

ಭಯೋತ್ಪಾದಕರಿಗೆ ಶಿಕ್ಷೆ ಆಗಬೇಕು, ಆದ್ರೆ ಮಿಲಿಟರಿ ಪರಿಹಾರವಲ್ಲ : ಭಾರತ – ಪಾಕ್‌ಗೆ ಗುಟೆರೆಸ್‌ ಶಾಂತಿ ಪಾಠ..!

- Advertisement -

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ, ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧಗಳು ಉದ್ವಿಗ್ನತೆಯ ಸ್ವರೂಪವನ್ನು ಪಡೆದುಕೊಂಡಿವೆ. ಈ ಮಧ್ಯೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮಿಲಿಟರಿ ಪರಿಹಾರವು ಪರಿಹಾರವಲ್ಲ ಎಂದು ಹೇಳಿದ್ದಾರೆ.

ಮಿಲಿಟರಿ ಪರಿಹಾರವಲ್ಲ..

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಪ್ಪನ್ನು ಮಾಡಬೇಡಿ, ಮಿಲಿಟರಿ ಪರಿಹಾರವು ಪರಿಹಾರವಲ್ಲ, ಮತ್ತು ಶಾಂತಿಯುತವಾಗಿ ಎರಡೂ ದೇಶಗಳಿಗೆ ನನ್ನ ಉತ್ತಮ ಸಲಹೆಗಳನ್ನು ನೀಡುತ್ತೇನೆ. ಪಾಕಿಸ್ತಾನದ ತುರ್ತು ಸಭೆಯ ವಿನಂತಿಯ ಮೇರೆಗೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಪರಿಹರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ರಹಸ್ಯ ಸಭೆ ನಡೆಸಿದೆ.

ಭಯೋತ್ಪಾದಕರನ್ನು ನ್ಯಾಯದ ಕಟಕಟೆಗೆ ತರಬೇಕು..

ಪಹಲ್ಗಾಮ್ ದಾಳಿಯನ್ನು ಖಂಡಿಸಿದ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು, ಭಯೋತ್ಪಾದಕರನ್ನು ನ್ಯಾಯದ ಕಟಕಟೆಗೆ ಒಳಪಡಿಸಬೇಕು. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿದೆ. ಎರಡೂ ರಾಷ್ಟ್ರಗಳ ಸರ್ಕಾರಗಳಿಗೆ ಅಥವಾ ವಿಶ್ವಸಂಸ್ಥೆಯ ಶಾಂತಿಪಾಲನೆಗೆ ಅವರ ಕೊಡುಗೆಗೆ ನಾನು ಕೃತಜ್ಞನಾಗಿದ್ದೇನೆ, ಆದ್ದರಿಂದ ಸಂಬಂಧಗಳು ಗಂಭೀರ ಹಂತ ತಲುಪುವುದನ್ನು ನೋಡಲು ನನಗೆ ಬೇಸರವಾಗುತ್ತದೆ. ಈಗ ಹೆಚ್ಚಿನ ತಾಳ್ಮೆ ಹಾಗೂ ಸಂಯಮದ ಅವಶ್ಯಕತೆ ಇದೆ. ಅಲ್ಲದೆ ಇದು ಯುದ್ಧೋನ್ಮಾದದಿಂದ ಹಿಂದೆ ಸರಿಯುವ ಸಮಯ. ಎರಡೂ ದೇಶಗಳೊಂದಿಗೆ ನಾನು ನಿರಂತರ ಸಂಪರ್ಕ ಹೊಂದಿದ್ದೇನೆ, ಆ ಎರಡೂ ದೇಶಗಳಿಗೆ ಅದು ನನ್ನ ಶಾಂತಿ ಸಂದೇಶವಾಗಿದೆ ಎಂದು ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.

ಯುದ್ಧವನ್ನು ತಪ್ಪಿಸಬೇಕಿದೆ..

ಪಹಲ್ಗಾಮ್ ದಾಳಿಯನ್ನು ನಾನು ಮತ್ತೊಮ್ಮೆ ಬಲವಾಗಿ ಖಂಡಿಸುತ್ತೇನೆ ಮತ್ತು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ನಾಗರಿಕರನ್ನು ಗುರಿಯಾಗಿಸಿಕೊಂಡಿರುವುದು ನಿಜಕ್ಕೂ ಒಪ್ಪುವಂತದ್ದಲ್ಲ. ವಿಶ್ವಾಸಾರ್ಹ ಕಾನೂನು ವಿಧಾನಗಳ ಮೂಲಕ ಆ ಆರೋಪಿಗಳನ್ನು ಶಿಕ್ಷೆಗೆ ಗರಿಪಡಿಸಬೇಕು. ವಿಶೇಷವಾಗಿ ಈ ನಿರ್ಣಾಯಕ ಸಮಯದಲ್ಲಿ, ಉಭಯ ದೇಶಗಳ ನಡುವಿನ ಯುದ್ಧವನ್ನು ತಪ್ಪಿಸುವುದು ಮುಖ್ಯವಾಗಿದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ಒತ್ತಿ ಹೇಳಿದ್ದಾರೆ.

ಶಾಂತಿ ಸ್ಥಾಪನೆಯ ಯಾವುದೇ ಕಾರ್ಯ ಬೆಂಬಲಿಸುತ್ತೇವೆ..

ಪ್ರಮುಖವಾಗಿ ಶಾಂತಿಗಾಗಿ ವಿಶ್ವಸಂಸ್ಥೆಯ ಸಮರ್ಪಣೆ ಮಾಡುತ್ತಲೇ ಬಂದಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ನಮ್ಮ ಸಂಸ್ಥೆಯ ಕಚೇರಿ ಸದಾ ಕಾಲ ಇರುತ್ತದೆ. ಇಲ್ಲಿ ಮಾತುಕತೆ ನಡೆಸುವ, ಉದ್ವಿಗ್ನತೆಯನ್ನು ಕಡಿಮೆ ಮಾಡುವ ಮತ್ತು ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರವನ್ನು ಸಾಧಿಸುವುದಕ್ಕಾಗಿ ಯಾವುದೇ ಕ್ರಮವನ್ನು ಬೆಂಬಲಿಸಲು ವಿಶ್ವಸಂಸ್ಥೆಯ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ತಪ್ಪಾಗಿ ಭಾವಿಸಬೇಡಿ, ಮಿಲಿಟರಿಯ ಬಳಕೆ ಪರಿಹಾರವಲ್ಲ, ಹಾಗೂ ಶಾಂತಿಯುತ ಸೇವೆಯಲ್ಲಿ ಎರಡೂ ಸರ್ಕಾರಗಳಿಗೆ ನನ್ನ ಉತ್ತಮ ಸಲಹೆ ನೀಡುತ್ತಿದ್ದೇನೆ ಎಂದು ಗುಟೆರೆಸ್‌ ಮನವಿ ಮಾಡಿಕೊಂಡಿದ್ದಾರೆ.

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಮಾರಣಾಂತಿಕ ದಾಳಿ ನಡೆಸಿ 26 ಜನರನ್ನು ಕ್ರೂರವಾಗಿ ಕೊಂದಿದ್ದರು. ಈ ದಾಳಿಗೆ ಭಾರತ ಪಾಕಿಸ್ತಾನದ ನೇರ ಆರೋಪ ಮಾಡಿಸೆ. ಭಾರತ ಪಾಕಿಸ್ತಾನದ ವಿರುದ್ಧ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದು, ಪಹಲ್ಗಾಮ್ ಘಟನೆಯ ಅಪರಾಧಿಗಳಿಗೆ ತಕ್ಕ ಪಾಠ ಕಲಿಸುವುದಾಗಿ ಹೇಳಿದೆ. ಭಾರತ ನಮ್ಮ ಮೇಲೆ ದಾಳಿ ನಡೆಸುವ ಭಯದಿಂದ ಪಾಕಿಸ್ತಾನ ಪತರುಗುಟ್ಟಿದೆ. ಈ ಪರಿಸ್ಥಿತಿಯಲ್ಲಿ ರಕ್ಷಣೆಗಾಗಿ ಮೊರೆ ಹೋಗಿದ್ದು, ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಸಮುದಾಯ ಎರಡೂ ದೇಶಗಳು ತಾಳ್ಮೆಯಿಂದ ವರ್ತಿಸುವಂತೆ ಮನವಿ ಮಾಡಿಕೊಂಡಿವೆ.

- Advertisement -

Latest Posts

Don't Miss