Uttara Pradesh News: ಮದುವೆಯ ಹಳದಿ ಶಾಸ್ತ್ರದ ದಿನ ಖುಷಿ ಖುಷಿಯಾಗಿ ಕುಣಿದು ಕುಪ್ಪಳಿಸುತ್‌ತಿದ್ದ ವಧು, ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಬದೌನ್‌ನಲ್ಲಿ ಈ ಘಟನೆ ನಡೆದಿದ್ದು, ವಧು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. 22 ವರ್ಷದ ಯುವತಿಗೆ ಮದುವೆ ಫಿಕ್ಸ್ ಆಗಿದ್ದು, ಅರಿಶಿನ ಶಾಸ್ತ್ರಕ್ಕಾಗಿ ಎಲ್ಲ ತಯಾರಿ ನಡೆದಿತ್ತು, ಹಳದಿ ಬಣ್ಣದ ಸೀರೆಯುಟ್ಟು, ಮೈಗೆ ಅರಿಶಿನ ಹಚ್ಚಿಕ“ಂಡು ಯುವತಿ ಖುಷಿಯಾಗಿದ್ದಳು. ಮನೆಯಲ್ಲಿ ಪಾತ್ರೆ ತುಂಬ ಗುಲಾಬ್ ಜಾಮೂನ್, ಸ್ನ್ಯಾಕ್ಸ್ ಎಲ್ಲವೂ ತಯಾರಿಸಿ ಇಡಲಾಗಿತ್ತು.
ಅಪ್ಪ ಅಮ್ಮ ಸಂಬಂಧಿಕರೆಲ್ಲಾ, ತಮ್ಮ ಮನೆಯ ಮಗಳನ್ನು ಗಂಡನ ಮನೆಗೆ ಪಲ್ಲಕ್ಕಿಯಲ್ಲಿ ಕಳುಹಿಸಿಕ“ಡಲು ಎಲ್ಲ ತಯಾರಿ ನಡೆಸಿದ್ದರು. ಆದರೆ, ವಧುವಿಗೆ ಹೃದಯಾಘಾತವಾಗಿ, ವಧು ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕ“ಂಡ“ಯ್ದರೂ, ಚಿಕಿತ್ಸೆ ಫಲಿಸದೇ, ಆಕೆ ಸಾವನ್ನಪ್ಪಿದ್ದಾಳೆ. ಪಲ್ಲಕ್ಕಿಯಲ್ಲಿ ಗಂಡನ ಮನೆಗೆ ಹೋಗಬೇಕಿದ್ದ ಮಗಳನ್ನು, ಅಪ್ಪ- ಅಮ್ಮ ಹೆಗಲಮೇಲಿರಿಸಿ, ಸ್ಮಶಾನಕ್ಕೆ ಕರೆದೋಯ್ಯುವಂತಾಗಿದೆ.
ಈ ಘಟನೆ ಮೇ 4ರ ಭಾನುವಾರದಂದು ನಡೆದಿದ್ದು, ಮೇ 5ನೇ ತಾರೀಖಿಗೆ ಆಕೆಯ ಮದುವೆ ನಡೆಯಬೇಕಿತ್ತು. ಪತಿಯ ಮನೆಯಲ್ಲೂ ಯುವತಿಯ ಮನೆಗೆ ದಿಬ್ಬಣ ತೆಗೆದುಕxಡು ಬರಲು ಎಲ್ಲ ಸಿದ್ಧತೆ ನಡೆದಿತ್ತು. ಆದರೆ ವಧುವಿನ ಜೀವ ಹೋಗಿ, ಸಂತೋಷದಿಂದಿದ್ದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ.
ಈ ಬಗ್ಗೆ ಅಲ್ಲಿನ ಸ್ಥಳೀಯ ನಿವಾಸಿಯ“ಬ್ಬರು ಮಾತನಾಡಿದ್ದು, ವಧು ಆರಾಮವಾಗಿಯೇ ಇದ್ದಳು. ಆದರೆ ಆಕೆಗೆ ಸಡನ್ ಆಗಿ ಈ ರೀತಿ ಹೃದಯಾಘಾತವಾಗಿದೆ. ಇದು ಸತ್ಯಕ್ಕೂ ಬೇಸರದ ಸಂಗತಿ ಎಂದಿದ್ದಾರೆ.