ಕರೋನಾ ನಂತರ ಹಲವು ದೇಶಗಳು ಆರ್ಥಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ ನೆರೆಯ ದೇಶಗಳಾದ ಪಾಕಿಸ್ಥಾನ ಶ್ರೀಲಂಕಾ ಸೇರಿ ಹಲುವ ದೇಶಗಳು ಆರ್ಥೀಕ ಸಂಕಷ್ಟದಿAದಾಗಿ ಅಲ್ಲಿಯ ಜನ ಆಹಾರ ಸಿಗದೆ ಉಪವಾಸದಿಂದ ಬಳಲುತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಭಾರತ ಮಾತ್ರ ಇಲ್ಲವನ್ನೂ ಮೆಟ್ಟಿನಿಂತು ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯಲ್ಲಿ ಸದೃಡತೆಯನ್ನು ಸಾಧಿಸಿದೆ ಇದು ಭಾಋತೀಯರಿಗೆ ಹೆಮ್ಮೆಯ ಸಂಗತಿ. ಹಣಕಾಸು ಜಗತ್ತು 2022 ರಲ್ಲಿ ಕೂಡ ಅಸ್ಥಿರತೆಯಲ್ಲಿ ಕಳೆಯಿತು. ಕಳೆದ ಎರಡು ವರ್ಷದ ಕೊರೋನ ಆರ್ಥಿಕ ಸಮಯದಲ್ಲಿನ ನಷ್ಟವನ್ನ ತುಂಬಿಕೊಂಡು ಮುಂದಕ್ಕೆ ಅಡಿಯಿಟ್ಟದ್ದು 2022 ರಲ್ಲಿನ ಅತಿ ದೊಡ್ಡ ಸಾಧನೆ ಎನ್ನಬಹುದು. ಆದರೂ ಜಾಗತಿಕ ಮಟ್ಟದಲ್ಲಿ ಒಂದೇ ಸಮನೆ ಏರಿದ ಬಡ್ಡಿ ದರಗಳು ಹಣದುಬ್ಬರದ ಏರಿಕೆಗೆ ತಮ್ಮದೇ ಆದ ಕಾಣಿಕೆಯನ್ನ ನೀಡಿತು. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ರ‍್ಚಸ್ಸು ವ್ಯಾಪಾರ ಮತ್ತು ವಹಿವಾಟಿನ ಮೇಲೂ ಪ್ರಭಾವ ಬೀರುತ್ತಿವೆ.
ಭಾರತೀಯ ರೂಪಾಯಿಯನ್ನ ವಹಿವಾಟಿಗೆ ಅಂದರೆ ಸೆಟಲ್ಮೆಂಟ್ ಗೆ ಬಳಸಲು ಭಾರತದ ಸರಕಾರ ಮುಂದಾಗಿದೆ. ಜುಲೈ ೨೦೨೨ ರಲ್ಲಿ ಇದರ ಬಗ್ಗೆ ಕೇಂದ್ರ ಸರಕಾರ ಮತ್ತು ಭಾರತೀಯ ರಿರ‍್ವ್ ಬ್ಯಾಂಕ್ ಮುಚ್ಚಳಿಕೆಯನ್ನ ಹೊರಡಿಸಿದ್ದವು. ಅವುಗಳು ಇದೀಗ ಫಲವನ್ನ ನೀಡಲು ಪ್ರಾರಂಭಿಸಿವೆ. ರಷ್ಯಾ ದೇಶದ ೯ ಬ್ಯಾಂಕುಗಳು ಭಾರತದಲ್ಲಿ ವೊಸ್ಟ್ರೋ ಖಾತೆಯನ್ನ ಭಾರತೀಯ ರಿರ‍್ವ್ ಬ್ಯಾಂಕಿನ ಅನುಮತಿಯೊಂದಿಗೆ ತೆರೆದಿದೆ. ನಿಮಗೆಲ್ಲಾ ತಿಳಿದಿರಲಿ ಇಲ್ಲಿಯವರೆಗೆ ರಷ್ಯಾ ಮತ್ತು ಭಾರತದ ನಡುವಿನ ವ್ಯಾಪಾರ ಡಾರ‍್ನಲ್ಲಿ ಅಥವಾ ಯೂರೋನಲ್ಲಿ ನಡೆಯುತ್ತಿತ್ತು. ಈ ಎರಡು ದೇಶಗಳ ನಡುವಿನ ವ್ಯಾಪಾರದ ಲಾಭ ನಷ್ಟಗಳ ಕಥೆ ಬೇರೆಯದು, ಆದರೆ ಏನೂ ಮಾಡದೆ ತಮ್ಮ ಹಣವನ್ನ ವಿನಿಮಯವನ್ನಾಗಿ ಬಳಸಿದ ಕಾರಣ ವಿಶ್ವದ ದೊಡ್ಡಣ್ಣ ಒಂದಷ್ಟು ಪಾಲು ತನ್ನದಾಗಿಸಿಕೊಂಡು ಬಿಡುತ್ತಿತ್ತು. ಹಿಂದಿನ ಕಾಲದಲ್ಲಿ ಚಕ್ರಾಧಿಪತಿಗೆ ಸಾಮಂತರು ಕಪ್ಪ ನೀಡುವ ಕ್ರಿಯೆಯನ್ನ ನೆನಪಿಸಿಕೊಳ್ಳಿ, ವಿನಿಮಯ ದರವನ್ನ ಎರಡೂ ದೇಶಗಳು ಅಂದಿನ ಮಾರುಕಟ್ಟೆ ಬೆಲೆಗೆ ತಕ್ಕಂತೆ ಬದಲಯಿಸಬೇಕಾಗುತ್ತದೆ. ಹೀಗೆ ಒಪ್ಪಿಕೊಂಡ ವಿನಿಮಯದ ಒಪ್ಪಂದ ಮಾತ್ರ ರೂಪಾಯಿಯಲ್ಲಿ ಆಗುತ್ತದೆ. ಹೀಗೆ ಎಲ್ಲವೂ ಆಗಬೇಕಾದರೆ ಯಾವ ದೇಶ ಭಾರತದ ರೂಪಾಯಿಯಲ್ಲಿ ವಹಿವಾಟು ನಡೆಸಲು ಸಿದ್ಧವಿರುತ್ತದೆ, ಆ ದೇಶ ಭಾರತೀಯ ರಿಸರ‍್ವ್ ಬ್ಯಾಂಕ್ ಅನುಮತಿ ಪಡೆದು ವೊಸ್ಟ್ರೋ ಖಾತೆಯನ್ನ ತೆರೆಯಬೇಕಾಗುತ್ತದೆ. ಪ್ರಸ್ತುತ .