Thursday, April 25, 2024

Latest Posts

2nd ODI : ವಿಂಡೀಸ್ ಎದುರು ಭಾರತಕ್ಕೆ 59 ರನ್ ಗೆಲುವು

- Advertisement -


ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಿಡಿಸಿದ ಅಬ್ಬರದ ಶತಕ ಹಾಗೂ ಶ್ರೇಯಸ್ ಅಯ್ಯರ್ ಬಾರಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ ವಿಂಡೀಸ್ ಎದುರು ಭಾರತ 59 ರನ್ ಗಳ ಗೆಲುವು ದಾಖಲಿಸಿತು. ನಿನ್ನೆ ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವೆಲ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ, ಆರಂಭದಲ್ಲೇ ಆಘಾತ ಎದುರಾಯಿತು. ಧವನ್ 2 ,ರೋಹಿತ್ 18 ಬಹುಬೇಗನೆ ಪೆವಿಲಿಯನ್ ಸೇರಿದ್ರು. ಈ ವೇಳೆ ನಾಯಕ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ಸ ಅಯ್ಯರ್ ತಂಡಕ್ಕೆ ಆಸರೆಯಾದ್ರು. ಪರಿಣಾಮವಾಗಿ ಭಾರತ, ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 279 ರನ್ ಕಲೆ ಹಾಕಿತು.

ಭಾರತ ತಂಡ ನೀಡಿದ್ದ 280 ರನ್​ ಗುರಿ ಬೆನ್ನತ್ತಿದ ವೆಸ್ಟ್​ ಇಂಡೀಸ್​ ತಂಡ 42 ಓವರ್​ಗಳಲ್ಲಿ 210 ರನ್​ಗಳಿಗೆ ಆಲೌಟಾಯಿತು. ಮಳೆಯಿಂದಾಗಿ ಪಂದ್ಯಕ್ಕೆ ಸ್ವಲ್ಪ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ವೆಸ್ಟ್​ ಇಂಡೀಸ್​ ತಂಡಕ್ಕೆ ಡಕ್ವರ್ಥ್​ ಲೂಯಿಸ್​ ನಿಯಮದ ಅನ್ವಯ 46 ಓವರ್​ಗಳಲ್ಲಿ 270 ರನ್​ ಗಳಿಸುವ ಗುರಿ ನೀಡಲಾಗಿತ್ತು. ವಿಂಡೀಸ್​ ಪರ ಎವಿನ್​ ಲೂಯಿಸ್​ ಮತ್ತು ನಿಕೋಲಸ್​ ಪೂರನ್​ ಮಾತ್ರ ಭಾರತೀಯ ಬೌಲಿಂಗ್ ಪಡೆಗೆ ಪ್ರತಿರೋಧ ಒಡ್ಡಿದರು. ಉಳಿದಂತೆ ಇತರ ಬ್ಯಾಟ್ಸ್​ಮನ್​ಗಳು ರನ್​ ಗಳಿಸಲು ಪರದಾಡಿದರು. ಟೀಮ್​ ಇಂಡಿಯಾ ಪರ ಭವನೇಶ್ವರ್​ ಕುಮಾರ್​ 4, ಮೊಹಮದ್​ ಶಮಿ 2 ಮತ್ತು ಕುಲದೀಪ್​ ಯಾದವ್​ 2 ವಿಕೆಟ್​ ಪಡೆದು ಗೆಲುವಿನ ರುವಾರಿ ಯಾದ್ರು. ಈ ಮೂಲಕ ಭಾರತ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತು.

- Advertisement -

Latest Posts

Don't Miss