Monday, September 9, 2024

Latest Posts

ಕೆರಿಬಿಯನ್ ರ ಮೇಲೆ ಕೊಹ್ಲಿ ಪಡೆ ಸವಾರಿ, ಟೀಮ್ ಇಂಡಿಯಾ ಮಡಿಲಿಗೆ ಟಿ-ಟ್ವೆಂಟಿ ಸರಣಿ..!

- Advertisement -


ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ನಡೆದ ಅಂತಿಮ ಟಿ-ಟ್ವೆಂಟಿ ಪಂದ್ಯದಲ್ಲೂ ವಿರಾಟ್ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಕೆರೆಬಿಯನ್ ರ ಎದುರು ಅವರದ್ದೇ ನೆಲದಲ್ಲಿ 3 ಪಂದ್ಯಗಳ ಟಿ-ಟ್ವೆಂಟಿ ಸರಣಿಯನ್ನು 3-0 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ಎದುರಾಳಿ ಪಡೆಗೆ ಬ್ಯಾಟಿಂಗ್ ಅವಕಾಶ ನೀಡಿತು.

ದೊಡ್ಡ ಮೊತ್ತ ಕಲೆಹಾಕುವ ಕನಸಿನಲ್ಲಿ ಬ್ಯಾಟಿಂಗ್ ಆರಂಭಿಸಿದ ದೈತ್ಯ ಪಡೆ ಆರಂಭದಲ್ಲೇ ಆಘಾತ ಎದುರಿಸಬೇಕಾಯಿತು. ತಂಡದ ಮೊತ್ತ 14 ಅಗುವಷ್ಟರಲ್ಲೇ, ಮೂವರು ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿದ್ರು. ನಂತರ ಮಿಡಲ್ ಆರ್ಡರ್ ನಲ್ಲಿ ಕಣಕ್ಕಿಳಿದ ಪೊಲಾರ್ಡ್, ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದ್ರು. ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡ ವಿಂಡೀಸ್, 146 ರನ್ ಕಲೆ ಹಾಕಿತು. ಈ ಮೂಲಕ ವಿರಾಟ್ ಪಡೆ ಗೆಲುವಿಗೆ, 147 ರನ್ ಟಾರ್ಗೆಟ್ ನೀಡಿತು.


ಕೊಹ್ಲಿ- ಪಂತ್ ಆರ್ಭಟ
ವಿಂಡೀಸ್ ನೀಡಿದ್ದ 147 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ನಾಯಕ ವಿರಾಟ್ ಕೊಹ್ಲಿ 59 ಹಾಗೂ ರಿಷಬ್ ಪಂತ್ ಸಿಡಿಸಿದ ಅಜೇಯ 65 ರನ್ ಗಳ ಅದ್ಭುತ ಆಟದ ನ್ಬೆರವಿನಿಂದ 19.1 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತ್ತು. ಭಾರತದ ಆರಂಭವು ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ಕೆ. ಎಲ್. ರಾಹುಲ್‌ ಜೊತೆಯಾಟ 10 ರನ್ ಗಳಿಸುವಷ್ಟರಲ್ಲೇ ಮುರಿದು ಬಿತ್ತು. ನಂತರ 3ನೇ ವಿಕೆಟಿಗೆ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಜೋಡಿ, ನೀಡಿದ ಶತಕದ ಜೊತೆಯಾಟ, ತಂಡದ ಗೆಲುವನ್ನು ಖಚಿತ ಪಡಿಸಿತು. ಈ ನಡುವೆ ತಂಡ ಗೆಲುವಿನ ಸನಿಹ ದಲ್ಲಿದ್ದಾಗ ವಿರಾಟ್, ಪೆವಿಲಿಯನ್ ಸೇರಿದ್ರು. ಆದ್ರೆ ಮತ್ತೊಂದು ತುದಿಯಲ್ಲಿ ಬ್ಯಾಟ್ ಬೀಸುತ್ತಿದ್ದ ಪಂತ್, ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದ್ರು.

- Advertisement -

Latest Posts

Don't Miss