www.karnatakatv.net : ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ, ಶ್ರೀಂಲಕಾದ ಜೋತೆಗೆ ಭರ್ಜರಿ ಗೆಲುವು ಸಾಧಿಸಿತ್ತು, ಯುವ ಆಟಗಾರರಾದ ಪೃಥ್ವಿ ಶಾ, ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ ಹಾಗೂ ನಾಯಕ ಶಿಖರ್ ಧವನ್ ತಾಳ್ಮೆಯ ಆಟದಿಂದಾಗಿ ಭಾರತ ಸುಲಭವಾಗಿ ಗೆಲುವು ಸಾಧಿಸಿತು. ಈ ಮೂಲಕ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಗೆಲುವಿನ ಬಳಿಕ ಭಾರತೀಯ ತಂಡದ ನಾಯಕ ಶಿಖರ್ ಧವನ್ ಪ್ರತಿಕ್ರಿಯಿಸಿದರು. ಭಾರತ ತಂಡದ ಯುವ ಆಟಗಾರರಾದ ಪೃಥ್ವಿ
ಶಾ ಹಾಗೂ ಇಶಾನ್ ಕಿಶನ್ ಈ ಪಂದ್ಯವನ್ನು ಮೊದಲ 15 ಓವರ್‌ಗಳಲ್ಲಿಯೇ ಮುಗಿಸಿದ್ದರು ಎಂದು ಶಿಖರ್ ಧವನ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾ ನೀಡಿದ್ದ 263 ರನ್‌ಗಳ ಗುರಿಯನ್ನು ಭಾರತ ಇನ್ನೂ 80 ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿತ್ತು. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 262 ರನ್‌ಗಳನ್ನು ಗಳಿಸಿತ್ತು. ವೇಗಿ ದೀಪಕ್ ಚಾಹರ್ ಸ್ಪಿನ್ನರ್‌ಗಳಾದ ಯುಜುವೇಂದ್ರ ಚಾಹಲ್ ಹಾಗೂ ಕುಲ್‌ದೀಪ್ ಯಾದವ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದ್ದರು. ಶ್ರೀಲಂಕಾ ತಂಡ ನೀಡಿದ್ದ ಈ ಗುರಿಯನ್ನು ಭಾರತ ತಂಡ ಕೇವಲ 36.4 ಓವರ್‌ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತು.

