Sunday, September 8, 2024

Latest Posts

ದೀಪಕ್ ಚಮತ್ಕಾರಕ್ಕೆ ಒಲಿದ ಭರ್ಜರಿ ಗೆಲುವು

- Advertisement -

ಹರಾರೆ: ವೇಗಿ ದೀಪಕ್ ಚಾಹರ್ ಅದ್ಭುತ ದಾಳಿಯ ನೆರೆವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧ  ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ.

ಇಲ್ಲಿನ ಹರಾರೆ ಸೋಟ್ರ್ಸ್ ಕ್ಲಬ್‍ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ  ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಜಿಂಬಾಬ್ವೆ ತಂಡಕ್ಕೆ ವೇಗಿ ದೀಪಕ್ ಚಾಹರ್ ಆಘಾತಗಳ ಮೇಲೆ ಆಘಾತ ನೀಡಿದರು. ಇನೋ ಸೆಂಟ್ ಕೈಯಾ (4 ರನ್), ತಡಿವಾನಾಶೆ ಮರುಮಣಿ (8 ರನ್) ಹಾಗೂ ವೆಸ್ಲಿ ಮಾ ಬೆವೆರೆ (5ರನ್) ಅವರನ್ನು ದೀಪಕ್ ಆರಂಭದಲ್ಲೇ ಪೆವಿಲಿಯನ್‍ಗೆ ಅಟ್ಟಿದರು.

ನಾಲ್ಕನೆ ಕ್ರಮಾಂಕದಲ್ಲಿ ಬಂದ ಸೀಯಾನ್ ವಿಲಿಯಮ್ಸ್ (1) ಮೊಹ್ಮದ್ ಸಿರಾಜ್‍ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಸಿಖಂದರ್ ರಾಜಾ (12), ನಾಯಕ ರೆಗಿಸ್ ಚಕಬ್ವ 35 ರನ್ ಹೊಡೆದು ಅಕ್ಷರ್ ಪಟೇಲ್ ಎಸೆತದಲ್ಲಿ ಬೌಲ್ಡ್ ಆದರು. ರಿಯಾನ್ ಬರ್ಲ 11,  ಲ್ಯೂಕ್ ಜೊಂಗ್ವೆ 13 ರನ್ ಗಳಿಸಿದರು.

110ರನ್‍ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಗೂಡಿದ ಬ್ರಾಡ್ಲಿ ಇವಾನ್ಸ್‍ (ಅಜೇಯ 33), ರಿಚರ್ಡ್ ನಾಗರವ (34 ರನ್) 70 ರನ್‍ಗಳ ಜೊತೆಯಾಟ ನೀಡಿ ತಂಡ ಅಲ್ಪ ಮೊತ್ತಕ್ಕೆ ಕುಸಿಯುವದನ್ನು ತಡೆದರು. ಜಿಂಬಾಬ್ವೆ 40.3 ಓವರ್‍ಗಳಲ್ಲಿ 189ರನ್ ಗಳಿಗೆ ಆಲೌಟ್ ಆಯಿತು.

ಭಾರತ ಪರ ದೀಪಕ್ ಚಾಹರ್ 27ಕ್ಕೆ3, ಪ್ರಸಿದ್ಧ ಕೃಷ್ಣ 50ಕ್ಕೆ3, ಅಕ್ಷರ್ ಪಟೇಲ್ 24ಕ್ಕೆ 3 ವಿಕೆಟ್ ಪಡೆದರು.  ಸೀರಾಜ್ 36ಕ್ಕೆ 1 ವಿಕೆಟ್ ಪಡೆದರು.

190 ರನ್‍ಗಳ ಸುಲಭ ಗುರಿ ಬೆನ್ನತ್ತಿದ ಭಾರತ ತಂಡದ ಪರ ಶಿಖರ್ ಧವನ್ (ಅಜೇಯ 81) ಹಾಗೂ ಶುಭಮನ್ ಗಿಲ್ (ಅಜೇಯ 82) ಸುಲಭ ಗೆಲುವು ದಾಖಲಿಸಿತು. ಶುಭಮನ್ ಗಿಲ್ 72 ಎಸೆತ ಎದುರಿಸಿ 10 ಬೌಂಡರಿ 1 ಸಿಕ್ಸರ್ ಸಿಡಿಸಿ ಅಜೇಯ 82 ರನ್ ಗಳಿಸಿದರು. ಶಿಖರ್ ಧವನ್ 113 ಎಸೆತ ಎದುರಿಸಿ 9 ಬೌಂಡರಿಯೊಂದಿಗೆ ಅಜೇಯ 81 ರನ್ ಗಳಿಸಿದರು.  ಭಾರತ 30.5 ಓವರ್‍ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 192 ರನ್ ಕಲೆ ಹಾಕಿತು.

 

ಸಂಕ್ಷಿಪ್ತ ಸ್ಕೋರ್ 

ಜಿಂಬಾಬ್ವೆ 189 ಆಲೌಟ್ (30.5 ಓವರ್)

ರೆಗಿಸ್ ಚಕಬ್ವ 35, ರಿಚರ್ಡ್ ನಾಗರವ 34 

ದೀಪಕ್ ಚಾಹರ್ 27ಕ್ಕೆ3, ಅಕ್ಷರ್ ಪಟೇಲ್ 24ಕ್ಕೆ 3

ಭಾರತ 192/0  (30.5 ಓವರ್) 

ಶಿಖರ್ ಧವನ್  81*,  ಶುಭಮನ್ ಗಿಲ್ 82*

ರಿಚರ್ಡ್ ನಗರವ 40ಕ್ಕೆ 0, ಸಿಖಂದರ್ ರಜಾ 32ಕ್ಕೆ 0 

ಆರು ತಿಂಗಳ ಬಳಿಕ ದೀಪಕ್ ಕಣಕ್ಕೆ 

ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ  ವೇಗಿ ದೀಪಕ್ ಚಾಹರ್ ಮಿಂಚಿದ್ದಾರೆ. ಗಾಯದ ಸಮಸ್ಯೆ ಒಳಗಾಗಿ 6 ತಿಂಗಳ ಬಳಿಕ ತಂಡಕ್ಕೆ ಮರಳಿ ಆಡಿದ ಮೊದಲ ಪಂದ್ಯದಲ್ಲೇ ದೀಪಕ್ ಚಮತ್ಕಾರ ಮಾಡಿದ್ದಾರೆ. 7 ಓವರ್‍ನಿಂದ 27 ರನ್ ಕೊಟ್ಟು ಪ್ರಮುಖ 3 ವಿಕೆಟ್ ಪಡೆದು ಆತಿಥೇಯರಿಗೆ ಕಡಿವಾಣ ಹಾಕಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ `Áಜನರಾದರು. ಪಂದ್ಯದ ಆರಂ`Àದಲ್ಲಿ ತಳಮಳಗೊಂಡಿದ್ದೆ ಎಂದಿದ್ದಾರೆ.

 

 

- Advertisement -

Latest Posts

Don't Miss