Sunday, December 22, 2024

Latest Posts

ಸಂಜು, ಶಾರ್ದೂಲ್ ಮಿಂಚು: ರಾಹುಲ್ ಪಡೆಗೆ  ಸರಣಿ ಜಯ

- Advertisement -

ಹರಾರೆ: ಸಂಜು ಸ್ಯಾಮ್ಸನ್ (ಅಜೇಯ 43) ಅವರ ಅಮೋಘ ಬ್ಯಾಟಿಂಗ್ ಹಾಗೂ ಶಾರ್ದೂಲ್ ಠಾಕೂರ್ ಅವರ ಅದ್ಬುತ ಬೌಲಿಂಗ್ ದಾಳಿಯ ನೆರೆವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧ ಎರಡನೆ ಏಕದಿನ ಪಂದ್ಯದಲ್ಲಿ 5 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ರಾಹುಲ್ ಪಡೆ 2-0 ಅಂತರದಿಂದ ಸರಣಿ ಕೈವಶಪಡಿಸಿಕೊಂಡಿದೆ.

ಇಲ್ಲಿನ ಹರಾರೆ ಸ್ಪೋಟ್ರ್ಸ್ ಕ್ಲಬ್ ಮೈದಾನದಲ್ಲಿ ನಡೆದ ಟಾಸ್ ಗೆದ್ದ  ಭಾರತ ಫಿಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 38.1ಓವರ್‍ಗಳಲ್ಲಿ 161 ರನ್‍ಗಳಿಗೆ ಸರ್ವಪತನ ಕಂಡಿತು. ಭಾರತ ತಂಡ 25.4 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.

162 ರನ್‍ಗಳ ಸವಾಲನ್ನು ಬೆನ್ನತ್ತಿದ ಭಾರತ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಎಡವಿತು. ನಾಯಕ ಕೆ.ಎಲ್.ರಾಹುಲ್ 1ರನ್‍ಗೆ ವಿಕ್ಟರ್ ನ್ಯುಚಿಗೆ ವಿಕೆಟ್ ಒಪ್ಪಿಸಿದರು.ಧವನ್ ಜೊತೆಗೂಡಿದ ಶುಭಾಮನ್ ಗಿಲ್ ಎಚ್ಚರಿಕೆಯ ಆಟವಾಡಿದರು. ಆದರೆ 33 ರನ್‍ಗಳಿಸಿದ್ದ  ಧವನ್ ವೇಗಿ ಚಿಚಂಗಾಗೆ ವಿಕೆಟ್ ಒಪ್ಪಿಸಿದರು.

ಈ ವೇಳೆ ದಾಳಿಗಿಳಿದ ಲ್ಯೂಕ್ ಜೊಂಗ್ವೆಘಿ ಇಶಾನ್ ಕಿಶನ್ (6 ರನ್) ಮತ್ತು ಶುಭಾಮನ್ ಗಿಲ್ (33 ರನ್) ಅವರುಗಳನ್ನು ಬಲಿತೆಗೆದುಕೊಂಡರು.

97 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ದೀಪಕ್ ಹೂಡಾ ಜೊತೆಗೂಡಿದ ಸಂಜು ಸ್ಯಾಮ್ಸನ್ ಎಚ್ಚರಿಕೆಯ ಆಟವಾಡಿದರು. ಈ ಜೋಡಿ  56 ರನ್‍ಗಳ ಉಪಯುಕ್ತ  ಆಟವಾಡಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕೊಂಡೊಯ್ದರು.  ದೀಪಕ್ ಹೂಡಾ 25 ರನ್, ಸಂಜು ಸ್ಯಾಮ್ಸನ್ ಅಜೇಯ 43  (39 ಎಸೆತ, 3 ಬೌಂಡರಿ 4 ಸಿಕ್ಸರ್), ಅಕ್ಷರ್ ಪಟೇಲ್ ಅಜೇಯ 6 ರನ್ ಗಳಿಸಿದರು.

ಜಿಂಬಾಬ್ವೆ ಪರ ಲ್ಯೂಕ್ ಜೊಂಗ್ವೆ  2 ವಿಕೆಟ್, ತನಕಾ ಚಿಚಂಗಾ ತನಕಾ ಚಿಚಂಗಾ ಹಾಗೂ ಸಿಖಂದರ್ ರಜಾ ತಲಾ 1 ವಿಕೆಟ್ ಪಡೆದರು

ಶಾರ್ದೂಲ್ ದಾಳಿಗೆ ನಲುಗಿದ ಜಿಂಬಾಬ್ವೆ 

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ವೇಗಿ ಶಾರ್ದೂಲ್ ಠಾಕೂರ್ ದಾಳಿಗೆ ತತ್ತರಿಸಿ ಹೋಯಿತು. ತಕುಸ್ಜ್ವಾನಾಶೆ ಕೈಟಾನೊ 20, ಇನೋ ಸೆಂಟ್ ಕೈಯಾ 16, ವೆಸ್ಲಿ ಮಾಧವೆರೆ 2, ನಾಯಕ ರೆಗಿಸ್ ಚಕಬ್ವ  2, ಸಿಖಂದರ್ ರಜಾ 16 ರನ್ ಗಳಿಸಿದರು.  42 ರನ್ ಗಳಿಸಿ ಮುನ್ನಗುತ್ತಿದ್ದ ಸೀಯಾನ್ ವಿಲಿಯಮ್ಸ್ ಹೂಡಾಗೆ ವಿಕೆಟ್ ಒಪ್ಪಿಸಿದರು. ರಿಯಾನ್ ಬರ್ಲ ಅಜೇಯ 39 ರನ್ ಗಳಿಸಿದರು. ಲ್ಯೂಕ್ ಜೊಂಗ್ವೆಘಿ 6, ಬ್ರಾಡ್ ಇವನ್ಸ್ 9 ಮತ್ತು ತನಕಾ ಚಿಚಂಗಾ 0 ರನ್ ಗಳಿಸಿದರು. ಭಾರತ ಪರ ಶಾರ್ದೂಲ್ ಠಾಕೂರ್ 38ಕ್ಕೆ 3 ವಿಕೆಟ್, ಮೊಹ್ಮದ್ ಸೀರಾಜ್, ಪ್ರಿಸಿದ್ಧ ಕೃಷ್ಣ, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಹಾಗೂ ದೀಪಕ್ ಹೂಡಾ ತಲಾ 1 ವಿಕೆಟ್  ಪಡೆದರು.

ಸಂಕ್ಷಿಪ್ತ ಸ್ಕೋರ್

ಜಿಂಬಾಬ್ವೆ   161 (38.1 ಓವರ್) 

ಸೀಯಾನ್ ವಿಲಿಯಮ್ಸ್ 42, ರಿಯಾನ್ ಬರ್ಲ 39

ಶಾರ್ದೂಲ್ ಠಾಕೂರ್ 38ಕ್ಕೆ 3, ದೀಪಕ್ ಹೂಡಾ 6ಕ್ಕೆ 1 

ಭಾರತ 167/5 ( 25.4 ಓವರ್) 

ಸಂಜು ಸ್ಯಾಮ್ಸನ್ ಅಜೇಯ 43, ಧವನ್ 33

ಲ್ಯೂಕ್ ಜೊಂಗ್ವೆ 33ಕ್ಕೆ 2,  ಸಿಖದರ್ ರಜಾ 16ಕ್ಕೆ 1

- Advertisement -

Latest Posts

Don't Miss