ದುಬೈ: ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಕಾಯುತ್ತಿರುವ ಭಾರತ ಮತ್ತು ಪಾಕಿಸ್ಥಾನ ನಡುವಿನ ಮಹಾ ಕದನ ಇಂದು ನಡೆಯಲಿದೆ.
ಏಷ್ಯಾಕಪ್ ಟೂರ್ನಿಯ ಎರಡನೆ ದಿನ ಕ್ರಿಕೆಟ್ ಜಗತ್ತಿನ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಇಲ್ಲಿನ ದುಬೈ ಮೈದಾನದಲ್ಲಿ ಗೆಲುವಿಗಾಗಿ ದೊಡ್ಡ ಹೋರಾಟವನ್ನೆ ಮಾಡಲಿದೆ. ಉಭಯ ತಂಡಗಳ ಕದನವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ನಾಯಕ ರೋಹಿತ್ ಶರ್ಮಾ ಮತ್ತು ರನ್ ಯಂತ್ರ ವಿರಾಟ್ ಕೊಹ್ಲಿ ಬಿಳಿ ಚೆಂಡಿನಲ್ಲಿ ಸಾಮ್ರಾಟರಾಗಿ ಮೆರೆದಿದ್ದಾರೆ. ಆದರೆ ಹತ್ತು ತಿಂಗಳ ಹಿಂದೆ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್‍ನಲ್ಲಿ ಸೋಲಿನ ರುಚಿ ಕಂಡಿದ್ದರು. ಇದೀಗ ಗೆಲುವನ್ನು ಹೇಗೆ ತಮ್ಮತ್ತ ತಿರುಗಿಸಿಕೊಳ್ಳಬೇಕೆನ್ನುವುದು ಲೆಕ್ಕಾಚಾರದಲ್ಲಿದ್ದಾರೆ. ಈ ಪಂದ್ಯ ರೋಹಿತ್ ಪಡೆಗೆ ಸೇಡಿನ ಪಂದ್ಯವಾಗಿದೆ.
ಏಷ್ಯಾ ತಂಡಗಳೆದುರು ನಾಯಕ ರೋಹಿತ್ ಬ್ಯಾಟಿಂಗ್ ತಾಕತ್ತು ಪ್ರದರ್ಶಿಸಲು ಸಜ್ಜಾದರೆ ಕಠಿಣ ಸಂದರ್ಭಗಳನ್ನು ಎದುರಿಸುತ್ತಿರುವ ವಿರಾಟ್ ಕೊಹ್ಲಿಗೆ ಲಯಕ್ಕೆ ಮರಳಲು ಈ ಟೂರ್ನಿ ಸೂಕ್ತ ವೇದಿಕೆಯಾಗಿದೆ.
ಈ ಟೂರ್ನಿಯ ಅಂತ್ಯದ ವೇಳೆಗೆ ತಂಡವನ್ನು ಮುಮಬರುವ ಟಿ20 ವಿಶ್ವಕಪ್‍ಗೆ ಆಯ್ಕೆ ಮಾಡಲು ನೆರವಾಗಲಿದೆ. ಕಳೆದ 10 ವರ್ಷಗಳಿಂದ ರಾಜಕೀಯ ಕಾರಣಕ್ಕಾಗಿ ಭಾರತ ಮತ್ತು ಪಾಕಿಸ್ಥಾನ ತಂಡಗಳ ನಡುವೆ ಉಭಯ ಸರಣಿ ನಡೆದಿಲ್ಲ.
ಗೆಲ್ಲುವ ತಂತ್ರದ ಬಗ್ಗೆ ವರ್ಷಕ್ಕೆ ಒಮ್ಮೆ ಮುಖಾಮುಖಿಯಾಗುವ ತಂಡದ ವಿರುದ್ಧ ಹೆಚ್ಚು ರಣತಂತ್ರ ರೂಪಿಸಲು ಸಾಧ್ಯವಿಲ್ಲ. ಕಳೆದ ವರ್ಷ ಪಾಕಿಸ್ಥಾನ ವಿರುದ್ಧ ಭಾರತ ಸೋತಿತ್ತು.ಪಾಕ್ ವೇಗಿ ಶಾಹೀನ್ ಅಫ್ರೀದಿ ದಾಳಿಯಿಂದ ಭಾರತ 10 ವಿಕೆಟ್‍ಗಳ ಅಂತರದಿಂದ ಹೀನಾಯವಾಗಿ ಸೋಲುತ್ತದೆ ಎಂದು ಯಾರೂ `ಊಹಿಸಿರಲಿಲ್ಲ.
ರೋಹಿತ್ ಪಡೆಗಿಲ್ಲ ಶಾಹೀನ್ ಭಯ..!
ಈ ಬಾರಿಯ ಮುಖಾಮುಖಿಯಲ್ಲಿ ವೇಗಿ ಶಾಹೀನ್ ಅಫ್ರೀದಿ ಆಡುತ್ತಿಲ್ಲ ಹೀಗಾಗಿ ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಪ್ರಯೋಗ ನಡೆಯವುದಿಲ್ಲ.
ಅಭ್ಯಾಸದ ವೇಳೆ ರೋಹಿತ್, ರಿಷಬ್ ಜೋಡಿ ಸಾಕಷ್ಟು ಭರವಸೆ ಮೂಡಿಸಿದೆ. ಸೂರ್ಯ ಕುಮಾರ್ ಯಾದವ್ ಮೈದಾನದ ಎಲ್ಲಾ ದಿಕ್ಕುಗಳಿಗೆ ಹೊಡೆದು ಚೆಂಡಿನ ಪರಿಚೆಯ ಮಾಡಿಸಿದರು.
ಮತ್ತೋರ್ವ ಬ್ಯಾಟರ್ ದೀಪಕ್ ಹೂಡಾ ಐರ್ಲೆಂಡ್ ವಿರುದ್ಧ ಸರಣಿಯಲ್ಲಿ ಆರಂಭಿಕರಾಗಿ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಆದರೆ ಅನುಭವಿಗಳಾದ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಇರುವುದರಿಂದ ಈ ಜೋಡಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಉಪನಾಯಕ ಕೆ.ಎಲ್.ರಾಹುಲ್ ಶಸಚಿಕಿತ್ಸೆ ನಂತರ ಒಂದೇ ಒಂದು ಟಿ20 ಪಂದ್ಯ ಆಡಿಲ್ಲ. ತಂಡ ತ್ರಿವಳಿಗಳಾದ ಸೂರ್ಯ ಕುಮಾರ್, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವಲಂಭಿಸಿದೆ. ಪಾಕ್ ದಾಳಿಯನ್ನು ಈ ಬ್ಯಾಟರ್‍ಗಳು ಧ್ವಂಸ ಮಾಡಬೇಕಿದೆ.
ಬಾಬರ್ ಅಜಿಂರನ್ನು ಅವಲಂಭಿಸಿದ ಪಾಕ್
ಇನ್ನು ಪಾಕಿಸ್ಥಾನ ತಂಡದ ನಾಯಕ ಬಾಬರ್ ಅಜಂ ಈ ಹಿಂದಿನ ಎಲ್ಲಾ ಪಾಕ್ ನಾಯಕರಿಗಿಂತ ವಿಭಿನ್ನರಾಗಿ ಕಾಣುತ್ತಾರೆ. ಬಾಬರ್ ಅಜಂ ತಂಡದ ನಾಯಕತ್ವ ವಹಿಸಿಕೊಂಡ ನಂತರ ತಮ್ಮ ಪ್ರತಿಭೆ ಹಾಗು ಶಾಂತ ಸ್ಥಿತಿ ಯಶಸ್ಸನ್ನು ತಂದುಕೊಟ್ಟಿದೆ.
ತಂಡದ ಮತ್ತೊರ್ವ ತಾರಾ ಬ್ಯಾಟರ್ ಮೊಹ್ಮದ್ ರಿಜ್ವಾನ್ 130 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಫಾಕಾರ್ ಜಮಾನ್ ಮೂರನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಉಳಿದ ಬ್ಯಾಟರ್‍ಗಳು ಇತ್ತೀಚೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.
ಏಷ್ಯಾಕಪ್‍ಗೆ ಪಾಕ್ ತಂಡ ಗಾಯದ ಸಮಸ್ಯೆ ಎದುರಿಸಿದೆ. ತಾರಾ ಬೌಲರ್‍ಗಳಾದ ಶಾಹೀನ್ ಅಫ್ರೀದಿ ಮತ್ತು ಮೊಹ್ಮದ್ ವಾಸೀಂ ಅವರ ಸೇವೆಯನ್ನು ಕಳೆದುಕೊಂಡು ಪರದಾಡುವಂತಾಗಿದೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿಘಿ, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಯಜ್ವಿಂದರ್ ಚಾಹಲ್, ರವಿ ಬಿಷ್ಣೊಯಿ, ಭುವನೇಶ್ವರ್ ಕುಮಾರ್, ಆರ್ಷದೀಪ್ ಸಿಂಗ್, ಆವೇಶ್ ಖಾನ್.
ಪಾಕಿಸ್ಥಾನ : ಬಾಬರ್ ಅಜಂ (ನಾಯಕ), ಶಾದಾಬ್ ಖಾನ್, ಆಸೀಫ್ ಅಲಿ,ಫಾಕಾರ್ ಜಮಾನ್, ಹೈದರ್ ಅಲಿ, ಹ್ಯಾರಿಸ್ ರೌಫ್, ಇಫ್ತಿಕಾರ್ ಅಹ್ಮದ್, ಖುಶ್ದಿಲ್ ಶಾ, ಮೊಹ್ಮದ್ ನವಾಜ್, ಮೊಹ್ಮದ್ ರಿಜ್ವಾನ್, ನಸೀಮ್ ಶಾ, ಶಾಹನಾವಾಜ್ ದಾಹಾನಿ, ಉಸ್ಮಾನ್ ಕಾದಿರ್, ಮೊಹ್ಮದ್ ಹಸನೈನ್, ಹಸನ ಅಲಿ.
ಪಂದ್ಯ : ಸಂಜೆ 7.30
ಟಿ20 ಭಾರತ – ಪಾಕ್ ಮುಖಾಮುಖಿ
ಪಂದ್ಯಗಳು 9
ಭಾರತ ಗೆಲುವು 6
ಪಾಕ್ ಗೆಲುವು 2
ಟೈ 1
ಏಷ್ಯಾಕಪ್‍ನಲ್ಲಿ ಭಾರತದ ಸಾಧಾನೆ
ಪಂದ್ಯಗಳು 14
ಭಾರತ ಗೆಲುವು 8
ಪಾಕಿಸ್ಥಾನ ಗೆಲುವು 5
ಟೈ 1