- Advertisement -
ದುಬೈ: ನಿಧಾನಗತಿಯ ಓವರ್ ಮಾಡಿದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ಥಾನ ತಂಡಗಳಿಗೆ ಐಸಿಸಿ ದಂಡ ವಿಧಿಸಿದೆ.
ಇಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ ಎ ಗುಂಪಿನ ಭಾರತ ಮತ್ತು ಪಾಕಿಸ್ಥಾನ ನಡುವಿನ ರೋಚಕ ಪಂದ್ಯದಲ್ಲಿ ಉಭಯ ತಂಡಗಳು ನಿಧಾನಗತಿಯ ಓವರ್ ಮಾಡಿದ್ದವು.
ಐಸಿಸಿ ಎಲೈಟ್ ಪ್ಯಾನೆಲ್‍ನ ಮ್ಯಾಚ್ ರೆಫರಿ ಜೆಫ್ ಕ್ರೋವ್ ನಾಯಕರಾದ ರೋಹಿತ್ ಶರ್ಮಾ ಮತ್ತು ಬಾಬರ್ ಅಜಾಮ್ ವಿರುದ್ಧ ಕ್ರಮಕೈಗೊಂಡಿದ್ದಾರೆ. ಎರಡೂ ತಂಡಗಳಿಗೂ ಶೇ40ರಷ್ಟು ದಂಡ ವಿಧಿಸಲಾಗಿದೆ.
ಐಸಿಸಿ 2.22 ನಿಯಮದ ಪ್ರಕಾರ ಕೊಟ್ಟ ಸಮಯದಲ್ಲಿ ಬೌಲಿಂಗ್ ಪೂರ್ಣಗೊಳಿಸದಿದ್ದರೆ ಆಟಗಾರರಿಗೆ ಶೇ.20ರಷ್ಟು ದಂಡ ವಿಧಿಸಲಾಗುತ್ತದೆ.
ಆನ್‍ಫೀಲ್ಡ್ ಅಂಪೈಯರ್‍ಗಳಾದ ಮಸೂದುರ ರೆಹಮಾನ್ ಮತ್ತು ರುಚಿರಾ ಪಿಲಿಯಾಗುರ್ಗೆ ಮೂರನೆ ಅಂಪೈಯರ್ ರವೀಂದ್ರ ವಿಮಾಲಾಸಿರಿ ಮತ್ತು ನಾಲ್ಕನೆ ಅಂಪೈಯರ್ ಗಾಜಿ ಸೋಹೆಲ್ ದಂಡ ವಿಧಿಸಿದ್ದಾರೆ.
- Advertisement -