Tuesday, April 15, 2025

Latest Posts

ಸರಣಿ ಸೋಲಿನ ಭೀತಿಯಲ್ಲಿ ಟೀಮ್ ಇಂಡಿಯಾ

- Advertisement -

ವಿಶಾಖಪಟ್ಟಣ: ಸತತ ಸೋಲುಗಳಿಂದ ಕಂಗೆಟ್ಟಿರುವ ಟೀಮ್ ಇಂಡಿಯಾ ಇಂದು ನಿರ್ಣಾಯಕ ಪಂದ್ಯದಲ್ಲಿ ದ.ಆಫ್ರಿಕಾ ತಂಡವನ್ನು ಮೂರನೆ ಟಿ20 ಪಂದ್ಯದಲ್ಲಿ ಎದುರಿಸಲಿದೆ.

ಮಂಗಳವಾರ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಈಗಾಗಲೇ ರಿಷಭ್ ಪಂತ್ ನೇತೃಥ್ವದ ಭಾರತ ತಂಡ ಆಡಿದ 2 ಪಂದ್ಯಗಳನ್ನು ಕೈಚೆಲ್ಲಿ ಸರಣಿ ಸೋಲಿನ ಭೀತಿಯಲ್ಲಿದೆ.

ಈ ಪಂದ್ಯವನ್ನು ಒಂದು ವೇಳೆ ಗೆದ್ದರೆ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿ ಇಂದು ವಿಶಾಖಪಟ್ಟದಲ್ಲಿ ನಡೆಯುವ ಪಂದ್ಯ ಹಲವಾರು ಕಾರಣಗಳಿಂದ ಕುತೂಹಲ ಮೂಡಿಸಿದೆ.

ಭಾರತ ತಂಡದ ವೈಫಲ್ಯಕ್ಕೆ ಬೌಲಿಂಗ್ ಕಾರಣವಾಗಿದೆ. ಆದರೆ ಕಳೆದ ಪಂದ್ಯದಲ್ಲಿ ವೇಗಿ ಭುವನೇಶ್ವರ್ ಕುಮಾರ್ ಕೇವಲ 13 ರನ್ ಕೊಟ್ಟು 4 ವಿಕೆಟ್ ಪಡೆದು ಮಿಂಚಿದರು.ಬೌಲಿಂಗ್ ಅಸ್ಥಿರತೆಯಿಂದ ಕೂಡಿದೆ. ಒತ್ತಡದಲ್ಲಿ ಹೇಗೆ ಆಡಬೇಕೆಂಬುದನ್ನು ಆಟಗಾರರು ಅರಿತುಕೊಳ್ಳಬೇಕಿದೆ.

ಕಳೆದ ಪಂದ್ಯದಲ್ಲಿ ಸೋಲಿಗೆ ಬ್ಯಾಟಿಂಗ್ ಕೂಡ ಕಾರಣವಾಯಿತು. ಮುಖ್ಯವಾಗಿ ತಂಡದ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡಿತು.

ದ.ಆಫ್ರಿಕಾ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಕಳೆದ ಪಂದ್ಯದಲ್ಲಿ ಕ್ವಿಂಟಾನ್ ಡಿಕಾಕ್ ಆಡಿರಲಿಲ್ಲ.

ಇದೀಗ ನಾಯಕ ಟೆಂಬಾ ಬಾವುಮೆ ಕೂಡ ಗಾಯದ ಸಮಸ್ಯೆಗೆ ಗುರಿಯಾಗಿ ಆಡಿದಿರುವ ಸಾಧ್ಯತೆ ಹೆಚ್ಚಾಗಿದೆ. ಆದರೂ ದ.ಆಫ್ರಿಕಾ ತಂಡದಲ್ಲಿ ಪಂದ್ಯ ಗೆಲ್ಲಿಸುವ ಆಟಗಾರರಿದ್ದು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.

- Advertisement -

Latest Posts

Don't Miss