ಪೋರ್ಟ್ ಆಫ್ ಸ್ಪೇನ್: ವೆಸ್ಟಿಂಡೀಸ್‍ನ ವಿರುದ್ಧ ಸರಣಿ ಜಯಿಸುವ ಮೂಲಕ ಭಾರತವು ಹೊಸದೊಂದು ದಾಖಲೆ ಬರೆದಿದೆ. ತಂಡವೊಂದರ ವಿರುದ್ಧ ನಿರಂತರವಾಗಿ ಅತ್ಯಕ ಸರಣಿ ಜಯ ದಾಖಲಿಸಿದ ಹೆಸರು ಭಾರತದ್ದಾಗಿದೆ.
ಇದರೊಂದಿಗೆ ಭಾರತವು ವೆಸ್ಟ ಇಂಡೀಸ್ ವಿರುದ್ಧ ನಿರಂತರವಾಗಿ 12ನೇ ಸರಣಿ ಜಯ ದಾಖಲಿಸಿದಂತಾಗಿದೆ. 2007ರಿಂದ 2022ರವರೆಗಿನ ಅವಯಲ್ಲಿ ಈ 12 ಸರಣಿ ಜಯಗಳು ದಾಖಲಾಗಿವೆ.
ಇದರಿಂದ ಸತತ 11 ಸರಣಿ ಜಯ ದಾಖಲಿಸಿದ ಪಾಕಿಸ್ಥಾನದ ಸಾಧನೆಯನ್ನು ಭಾರತವು ಮೀರಿಸಿದಂತಾಗಿದೆ. ಪಾಕಿಸ್ಥಾನವು ಜಿಂಬಾಬ್ವೆ ವಿರುದ್ಧ ಸತತ 11 ಸರಣಿ ಜಯ ದಾಖಲಿಸಿದೆ.
ವಿವಿಧ ದೇಶಗಳ 5 ಉನ್ನತ ಸತತ ಸರಣಿ ಜಯಗಳು ಇಂತಿವೆ:
12: ಭಾರತ – ವೆಸ್ಟ್ ಇಂಡೀಸ್ (2007-2022)
11: ಪಾಕಿಸ್ಥಾನ – ಜಿಂಬಾಬ್ವೆ (1996-2021)
10: ಪಾಕಿಸ್ಥಾನ – ವೆಸ್ಟಿಂಡೀಸ್ (1999-2022)
9: ದ.ಆಫ್ರಿಕಾ- ಜಿಂಬಾಬ್ವೆ (1995-2018)
9: ಭಾರತ – ಶ್ರೀಲಂಕಾ (2007-2021)
https://www.youtube.com/channel/UCkFTCCDcbf0ghiPO6uJe4aw
ಅಕ್ಷರ್ ವಿಶೇಷ ದಾಖಲೆ
ಅಕ್ಷರ್ ಪಟೇಲ್ ಅವರು ವಿಶೇಷ ದಾಖಲೆಯೊಂದನ್ನೂ ಬರೆದರು. ಅವರು `ಧೋನಿಯ ಹೆಸರಲ್ಲಿದ್ದ ದಾಖಲೆಯೊಂದನ್ನು ಮುರಿದರು.
7ನೇ ಕ್ರಮಾಂಕದಲ್ಲಿ ಬಂದ ಅಕ್ಷರ್ 3 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿದ್ದರು. ರನ್ ಚೇಸ್ ಮಾಡುವ ಇನ್ನಿಂಗ್ಸ್‍ನಲ್ಲಿ 7ಕ್ಕಿಂತ ಮೇಲಿನ ಕ್ರಮಾಂಕದಲ್ಲಿ ಬಂದು ಮೂರಕ್ಕಿಂತ ಅಕ ಸಿಕ್ಸರ್ ಬಾರಿಸಿದ ಸಾಧನೆ ಅವರದ್ದಾಯಿತು. ಈ ಹಿಂದೆ ಯುಸುಫ್ ಪಠಾಣ್ ಮತ್ತು ಧೋನಿ ಈ ರೀತಿ ಮೂರು ಸಿಕ್ಸರ್ ಬಾರಿಸಿದ್ದರು.
`ಧೋನಿ ಜಿಂಬಾಬ್ವೆ ವಿರುದ್ಧ ಹಾಗೂ ಯೂಸುಫ್ ದ. ಆಫ್ರಿಕಾ ಮತ್ತು ಐರ್ಲೆಂಡ್ ವಿರುದ್ಧ 3 ಸಿಕ್ಸರ್‍ಗಳನ್ನು ಬಾರಿಸಿದ್ದರು.
ಐಪಿಎಲ್ ಕಾರಣ ಎಂದ ಆಲ್ರೌಂಡರ್ ಅಕ್ಷರ್
ಅಜೇಯ ಅರ್ಧ ಶತಕ ಬಾರಿಸಿ ಭಾರತದ ಗೆಲುವಿಗೆ ಕಾರಣರಾದ ಅಕ್ಷರ್ ಪಟೇಲ್ ತನ್ನ ಈ ಆಟಕ್ಕೆ ಐಪಿಎಲ್ ಕಾರಣ ಎಂದು ಹೇಳಿದ್ದಾರೆ.ನಾನು ಬ್ಯಾಟಿಂಗಿಗೆ ಹೋದಾಗ 39 ಓವರು ಮುಗಿದಿತ್ತು. 11 ಓವರುಗಳಲ್ಲಿ 105 ರನ್ ಬೇಕಾಗಿತ್ತು. ಐಪಿಎಲ್‍ನಲ್ಲಿ ಇಂತಹ ಸವಾಲುಗಳನ್ನು ಎದುರಿಸಿ ಗೊತ್ತಿದ್ದುದರಿಂದ ಇಲ್ಲಿ ಕೂಡಾ ತೀವ್ರ ಗತಿಯಲ್ಲಿ ರನ್ ಗಳಿಸುವುದು ಅಸಾಧ್ಯವಾಗಲಿಲ್ಲ ಎಂದು ಅವರು ನುಡಿದಿದ್ದಾರೆ.