ಲಂಡನ್: ವಿವಿಧ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿಸದೆ ದೇಶ ಬಿಟ್ಟು ಲಂಡನ್ ನಲ್ಲಿ ವಾಸ್ತವ್ಯ ಹೂಡಿರುವ ಉದ್ಯಮಿ ವಿಜಯ್ ಮಲ್ಯ ಕ್ರಿಕೆಟ್ ಅಭಿಮಾನಿಗಳಿಂದ ತೀವ್ರ ಮುಜುಗರಕ್ಕೀಡಾಗಿದ್ದಾರೆ.
ನಿನ್ನೆ ನಡೆದ ಆಸ್ಟ್ರೇಲಿಯಾ- ಭಾರತ ವಿಶ್ವಕಪ್ ಪಂದ್ಯ ವೀಕ್ಷಣೆಗೆಂದು ಲಂಡನ್ ನ ಓವೆಲ್ ಮೈದಾನಕ್ಕೆ ಪುತ್ರ ಸಿದ್ಧಾರ್ಥ್ ಜೊತೆ ವಿಜಯ್ ಮಲ್ಯ ಬಂದಿದ್ದರು. ಪಂದ್ಯ ವೀಕ್ಷಣೆ ಬಳಿಕ ಹೊರಬಂದ ವಿಜಯ್ ಮಲ್ಯರನ್ನು ಕಂಡ ಭಾರತ ಮೂಲದ ಕ್ರಿಕೆಟ್ ಅಭಿಮಾನಿಗಳು, ‘ಚೋರ್ ಹೈ ಚೋರ್ ಹೈ’( ಕಳ್ಳ..ಕಳ್ಳ) ಅಂತ ಗಟ್ಟಿಯಾಗಿ ಕೂಗಲಾರಂಭಿಸಿದ್ರು. ಇದನ್ನು ಕೇಳಿ ವಿಜಯ್ ಮಲ್ಯ ತಬ್ಬಿಬಾದ್ರೂ ಸಹ ಸಾವರಿಸಿಕೊಂಡು ಮುಂದೆ ಸಾಗಿದ್ರು.
ಅಷ್ಟೇ ಅಲ್ಲದೆ ಅಲ್ಲಿ ಸೇರಿದ್ದ ಜನರಲ್ಲಿ ಓರ್ವ ವ್ಯಕ್ತಿ, ನೀವು ಭಾರತದ ಪ್ರಜೆಯಾಗಿ ದೇಶದ ಕ್ಷಮೆ ಯಾಚಿಸಬೇಕು ಅಂತಲೂ ಕೂಗಿ ಹೇಳಿದ್ದಾನೆ. ಇದರಿಂದ ಮಲ್ಯಗೆ ತೀವ್ರ ಮುಜುಗರವುಂಟಾಗಿದ್ದು ಸುಳ್ಳಲ್ಲ.
ನಾಪತ್ತೆಯಾದ ಸೇನಾ ವಿಮಾನ ಏನಾಯ್ತು..??ಮಿಸ್ ಮಾಡದೇ ಈ ವಿಡಿಯೋ ನೋಡಿ