ಹೊಸದಿಲ್ಲಿ:ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭರ್ಜರಿಯಾಗಿ ಪದಕ ಬೇಟೆಯಾಡಿ ಬಂದ ಭಾರತೀಯ ಅಥ್ಲೀಟ್ ಗಳಿಗೆ ತವರಿನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ.
ಪದಕ ಗೆದ್ದು ಬಂದ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಸಾಯ್ ಕೇಂದ್ರ ಗಳಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕುಸ್ತಿಪಟುಗಳಾದ ಭಜರಂಗ್ ಪುನಿಯಾ, ದೀಪಕ್ ಪೂನಿಯಾ, ರವಿ ದಹಿಯಾ,ಸಾಕ್ಷಿ ಮಲ್ಲಿಕ್ ಅವರನ್ನು ಸಾಯ್ ಅಧಿಕಾರಿಗಳು ಸ್ವಾಗತಿಸಿದರು.
ಕುಸ್ತಿಪಟು ಭಜರಂಗ್ ಗೆ ಅಭಿಮಾನಿಗಳು ನೋಟಿನ ಹಾರ ಹಾಕಿ ಸ್ವಾಗತಸಿ ಮೆರವಣಿಗೆ ಮಾಡಿಸಿದ್ದು ಎಲ್ಲರ ಗಮನ ಸೆಳೆಯಿತು.
ಜೋಡೋದಲ್ಲಿ ಗೆದ್ದ ತುಲಿಕಾ ಮಾನ್, ಬಾಕ್ಸಿಂಗ್ ಪದಕ ವಿಜೇತೆರಿಗೂ ಅದ್ದೂರಿ ಸ್ವಾಗತ ನೀಡಲಾಯಿತು. ವೇಗದ ನಡಿಗೆಯಲ್ಲಿ ಬೆಳ್ಳಿ ಗೆದ್ದ ಪ್ರಿಯಾಂಜ್ ಗೋಸ್ವಾಮಿಗೂ ಮೆರವಣಿಗೆ ಮಾಡಿ ಸ್ವಾಗತಿಸಲಾಯಿತು.