- Advertisement -
ದಂಬುಲಾ: ಜೆಮಿಮ್ಮಾ ರಾಡ್ರಿಗಸ್ ಅವರ ಸೋಟಕ ಬ್ಯಾಟಿಂಗ್ ನೆರೆವಿನಿಂದ ಭಾರತ ವನಿತೆಯರ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 34 ರನ್‍ಗಳ ಗೆಲುವು ದಾಖಲಿಸಿದೆ.
ಇಲ್ಲಿನ ರಂಗಿರಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು.
ಭಾರತ ಪರ ಶೆಫಾಲಿ ವರ್ಮಾ 31, ಹರ್ಮನ್‍ಪ್ರೀತ್ ಕೌರ್ 22, ಜೆಮಿಮ್ಮಾ ರಾಡ್ರಿಗಸ್ 36 ರನ್ ಗಳಿಸಿದರು. ಭಾರತ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 138 ರನ್ ಕಲೆ ಹಾಕಿತು.
139 ರನ್ ಗುರಿ ಬೆನ್ನತ್ತಿದ ಶ್ರೀಲಂಕಾ ಭಾರತದ ಸಂಘಟಿತ ದಾಳಿಗೆ ತತ್ತರಿಸಿತು. ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತು.
- Advertisement -