ಭಾರತ ವನಿತೆಯರಿಗೆ ಸರಣಿ ಜಯ 

ಪಲ್ಲಿಕಲ್ಲೆ: ರೇಣುಕಾ ಸಿಂಗ್ ಅವರ ಅಮೋಘ ಬೌಲಿಂಗ್ ಪ್ರದರ್ಶನದ ನೆರೆವಿನಿಂದ ಭಾರತ ವನಿತೆಯರ ತಂಡದ ಶ್ರೀಲಂಕಾ ವಿರುದ್ಧ 10 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿ ಸರಣಿ 2-0 ಅಂತರದಿಂದ ಕೈವಶ ಮಾಡಿಕೊಂಡಿದೆ.

ಸೋಮವಾರ ನಡೆದ ಎರಡನೆ ಏಕದಿನ ಪಂದ್ಯದಲ್ಲಿ  ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಲಂಕಾ ಪರ ನಾಯಕಿ ಚಾಮರಿ ಅಟಪಟ್ಟು 27, ಅನುಷ್ಕಾ ಸಂಜೀವಾಣಿ 25, ನೀಲಾಕ್ಷಿ ಡಿಸಿಲ್ವಾಘಿ 32,  ಅಮಾ ಕಾಂಚನಾ ಅಜೇಯ 47 ರನ್ ಗಳಿಸಿದರು. ಶ್ರೀಲಂಕಾ ನಿಗದಿತ 50 ಓವರ್‍ಗಳಲ್ಲಿ 173 ರನ್ ಗಳಿಗೆ ಆಲೌಟ್ ಆಯಿತು.

174 ರನ್ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕರಾದ ಶಫಾಲಿ ವರ್ಮಾ ಅಜೇಯ 71, ಸ್ಮತಿ ಮಂಧಾನ ಅಜೇಯ 94 ರನ್ ಹೊಡೆದು ತಂಡಕ್ಕೆ 10 ವಿಕೆಟ್‍ಗಳ ಭರ್ಜರಿ ಗೆಲುವು ತಂದುಕೊಟ್ಟರು. ಭಾರತ 25.4 ಓವರ್‍ಗಳಲ್ಲಿ 174 ರನ್ ಕಲೆ ಹಾಕಿತು. ಭಾರತ ಪರ  ರೇಣುಕಾ ಸಿಂಗ್ 28ಕ್ಕೆ 4ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

About The Author