Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದಾರೆ.
ಜನಸಂಖ್ಯೆಯನ್ನು ಸ್ಥಿರಗ“ಳಿಸಲು ಮತ್ತು ಜನಸಂಖ್ಯಾ ಕುಸಿತ ತಡೆಯಲು ಇದು ಅಗತ್ಯವೆಂದಿರುವ ಭಾಗವತ್, ದೇಶದಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿದೆ. ಹಾಗಾಗಿ ಹಿಂದೂ ಮುಸ್ಲಿಂ ಎಲ್ಲರೂ ಸೇರಿ ಜನಸಂಖ್ಯೆ ಹೆಚ್ಚಳಕ್ಕೆ ಬೆಂಬಲಿಸಬೇಕು. ಸೌಹಾರ್ದತೆ ಇದ್ದಲ್ಲಿ ಮಾತ್ರ ನಾವು ದೇಶವನ್ನು ಮುನ್ನಡೆಸಲು ಸಾಧ್ಯವೆಂದು ಭಾಗವತ್ ಕರೆ ನೀಡಿದರು.
ದೇಶದಲ್ಲಿ ಕಡಿಮೆ ಫಲವತ್ತೆಯ ದರ ಇರುವುದರಿಂದ ಕೆಲವು ಸಮುದಾಯಗಳು ನಶಿಸಿ ಹೋಗುತ್ತದೆ. ಆದರೆ ಭಾರತೀಯರು 3 ಮಕ್ಕಳನ್ನು ಹೆತ್ತರೆ, ಮಕ್ಕಳು ಪೋಷಕರೂ ಇಬ್ಬರೂ ಆರೋಗ್ಯವಾಗಿರುತ್ತಾರೆ. ಮತ್ತು ದೇಶದ ಜನಸಂಖ್ಯಾ ಕುಸಿತ ಕಡಿಮೆಯಾಗುತ್ತದೆ. ಇದು ದೇಶಕ್ಕೂ ಉತ್ತಮವೆಂದು ಭಾಗವತ್ ಹೇಳಿದ್ದಾರೆ.
ಆದರೆ ಮಕ್ಕಳನ್ನು ಹೆತ್ತರೆ ಸಾಲದು, ಅವರಿಗೆ ಸರಿಯಾದ ಆಹಾರ, ವಿದ್ಯಾಭ್ಯಾಸ ನೀಡಬೇಕು. ಮಕ್ಕಳ ಪಾಲನೆ ಪೋಷಣೆ ತುಂಬಾ ಮುಖ್ಯ. ಆರೋಗ್ಯ, ಬುದ್ಧಿವಂತಿಕೆ, ಶಿಕ್ಷಣ ಎಲ್ಲವೂ ಭಾರತೀಯ ಮಕ್ಕಳಿಗೆ ಸಿಗಬೇಕು. ಮುಂದೆ ಕೆಲಸಗಳು ಸಹ ನಮ್ಮ ದೇಶದ ಯುವಪೀಳಿಗೆಗೆ ಸಿಗಬೇಕು. ಬೇರೆ ದೇಶದವರ ಪಾಲಾಗಬಾರದು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.