- Advertisement -
www.karnatakatv.net: ಭಯೋತ್ಪಾದಕರಿಗೆ ಪಾಕಿಸ್ತಾನ ಬೆಂಬಲ ಮತ್ತು ಆಶ್ರಯ ನೀಡುತ್ತಿರುವ ಪರಿಣಾಮ ಇಡೀ ವಿಶ್ವ ನಲುಗಿ ಹೋಗುತ್ತಿದೆ. ತನ್ನ ನೆಲದಲ್ಲಿ ಭಯೋತ್ಪಾದಕರನ್ನು ಬೆಳೆಸುತ್ತಿರುವ ಪಾಕಿಸ್ತಾನ ಬೆಂಕಿ ಆರಿಸುವ ಸೋಗಿನಲ್ಲಿ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದೆ ಅಂತ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದ ಇಮ್ರಾನ್ ಖಾನ್ ಗೆ ಭಾರತ ತಿರುಗೇಟು ನೀಡಿದೆ.
ಪಾಕಿಸ್ತಾನ ಹೊರಜಗತ್ತಿಗೆ ತಾನು ಒಳ್ಳೆಯ ಗುಣ ಪ್ರದರ್ಶಿಸುತ್ತಿದೆ. ಆದರೆ ನೆರೆಯ ದೇಶಕ್ಕೆ ಹಾನಿ ಮಾಡುವ ಉದ್ದೇಶದಿಂದ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳನ್ನು ಮತ್ತು ಭಯೋತ್ಪಾದಕರನ್ನು ಪೋಷಿಸುತ್ತಲೇ ಬಂದಿದೆ. ಪಾಕಿಸ್ತಾನದ ಈ ನೀತಿಯಿಂದಾಗಿ ಭಾರತ ಸೇರಿದಂತೆ ಇಡೀ ವಿಶ್ವ ಸಾಕಷ್ಟು ಸಮಸ್ಯೆಗೀಡಾಗಿದೆ ಅಂತ ವಿಶ್ವಸಂಸ್ಥೆಯ ಭಾರತದ ಮೊದಲ ಕಾರ್ಯದರ್ಶಿ ಸ್ನೇಹ ದುಬೆ ಪಾಕ್ ಗೆ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
- Advertisement -