www.karnatakatv.net : ಬೆಳಗಾವಿ: ನಗರದಲ್ಲಿ ಕೆಲ ದಿನಗಳಿಂದ ಸತತವಾಗಿ ಸುರಿದ ಮಳೆಗೆ ಜಿಲ್ಲಾಧಿಕಾರಿ ಕಚೇರಿ ಬಳಿಯ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಡರ್ ಪಾಸ್ ನೇರವಾಗಿ ಸಿವಿಲ್ ನ್ಯಾಯಾಲಯಕ್ಕೆ ಸೇರುತ್ತದೆ. ಈ ಅಂಡರ್ ಪಾಸನಲ್ಲಿ ಸರಿ ಸುಮಾರು 5 ಅಡಿಗಳಿಗಿಂತ ಹೆಚ್ಚು ನೀರು ನಿಂತು ಸಂಚಾರ ಸ್ಥಗಿತಗೊಂಡಿದೆ. ಸಂಚಾರ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಅಂಡರ್ ಪಾಸ್ ನಿರ್ಮಿಸಿದ್ದು, ಪ್ರಸ್ತುತ ಈ ಅಂಡರ್ ಪಾಸ್ ನಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳ ತವರು ಮನೆಯಾಗಿ ಪರಿವರ್ತನೆಯಾಗುತ್ತಿದೆ.
ವಕೀಲರ ಮನವಿಯ ಮೇರೆಗೆ ನಿರ್ಮಾಣವಾದ ಅಂಡರ್ ಪಾಸ್ ಪ್ರಸ್ತುತ ಬಳಕೆಯಾಗುತ್ತಿಲ್ಲ. ಬಳಕೆಯಿಲ್ಲದ ಕಾರಣ ಈ ಅಂಡರ್ ಪಾಸ್ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತು. ಧೂಮಪಾನ ಹಾಗೂ ಮಧ್ಯಪಾನಗಳ ಅಡ್ಡವಾಗಿದ್ದ ಈ ಅಂಡರ ಪಾಸ್ ಪ್ರಸ್ತುತ ಕೆರೆಯಾಗಿ ಪರಿವರ್ತನೆ ಹೊಂದಿದೆ. ಟ್ರಾಫಿಕ್ ಸಮಸ್ಯೆ ತಪ್ಪಿಸಿಕೊಳ್ಳಲು ಅಂಡರ್ ಪಾಸ್ ನಿರ್ಮಿಸಿದರೇ ಅದು ಬಳಕೆಯಾಗುತ್ತಿಲ್ಲ. ಜನರ ತೆರಿಗೆ ಹಣ ವ್ಯರ್ಥಗೊಳಿಸಲು ಇದನ್ನು ನಿರ್ಮಿಸಿದ್ದಾರೆ ಎಂದು ಭಾಸವಾಗುತ್ತಿದೆ.
ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರತಿಭಟನೆ ನಡೆಸುವ ಜನರು ಮೂಗು ಮುಚ್ಚಿಕೊಂಡು ಪ್ರತಿಭಟನೆ ನಡೆಸುವ ಪರಿಸ್ಥಿತಿ ಎದುರಾಗಿದೆ. ಕೆಲದಿನಗಳಿಂದ ನೀರು ನಿಂತು ಗಬ್ಬೇದ್ದು ನಾರುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಈ ಕುರಿತು ನಿರ್ಲಕ್ಷ್ಯವಹಿಸಿದ್ದಾರೆ. ಮಹಾನಗರ ಪಾಲಿಕೆಯು ಈ ಅಂಡರ ಪಾಸ್ ನಲ್ಲಿ ನಿಂತ ನೀರನ್ನು ಶುಚಿಗೊಳಿಸಿ ನಿರ್ವಹಿಸಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಇವರು ಮಾತನಾಡಿ ಕೋಟ್ಯಾಂತರ ರೂ.ಗಳ ವೆಚ್ಚ ಮಾಡಿ ನಿರ್ಮಿಸಿರುವ ಅಂಡರ್ ಪಾಸ್ ಬಳಕೆಯಿಲ್ಲದೆ, ಸರಿಯಾದ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಇದರಿಂದ ವ್ಯವಸ್ಥಿತವಾಗಿ ಎನಾದರು ಮಾಡಿ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕ್ರಮ ಕೈಗೋಳ್ಳಿ. ಹಾಗೇಯೆ ಅಂಡರ್ ಪಾಸ್ ನಲ್ಲಿ ಕೆಟ್ಟ ಚಟುವಟಿಕೆಗಳು ನಡುಮೆಯುತ್ತವೆ ಇದರಿಂದ ಯಾರು ಕ್ರಮ ತೆಗೆದುಕೊಳ್ಳುತ್ತಿಲ್ಲ ಹಾಗಾಗಿ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.