Friday, August 29, 2025

Latest Posts

ಪರಮ ಶಿವನ 19 ಅವತಾರಗಳ ಬಗ್ಗೆ ಪುಟ್ಟ ಮಾಹಿತಿ- ಭಾಗ 5

- Advertisement -

ನಾವು ಭಾಗ ಕಳೆದ 4 ಭಾಗಗಳಲ್ಲಿ ಶಿವನ 19 ಅವತಾರದಲ್ಲಿ 16 ಅವತಾರಗಳ ಬಗ್ಗೆ ಹೇಳಿದ್ದೇವೆ. ಈಗ ಮುಂದುವರಿದ ಭಾಗವಾಗಿ ಇನ್ನೂ ಮೂರು ಅವತಾರಗಳ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಶಿವ ತಾಳಿದ ಆ ಅವತಾರಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಹದಿನೇಳನೇ ಅವತಾರ ಬ್ರಹ್ಮಚಾರಿ ಅವತಾರ. ದಕ್ಷನ ಮನೆಯಲ್ಲಿ ನಡೆಯ ಯಕ್ಷದ ಕುಂಡಕ್ಕೆ ಹಾರಿ ಸತಿ ಪ್ರಾಣತ್ಯಾಗ ಮಾಡಿದ ಬಳಿಕ, ಹಿಮಾಲಯನ ಮನೆಯಲ್ಲಿ ಜನ್ಮ ಪಡೆದಳು. ಈ ಜನ್ಮದಲ್ಲೂ ತನಗೆ ಶಿವನೇ ಪತಿಯಾಗಿ ಬರಬೇಕೆಂದು ಆಶಿಸಿ, ಘೋರ ತಪಸ್ಸು ಮಾಡಿದಳು. ಆಗ ಶಿವ ಬ್ರಹ್ಮಚಾರಿ ಅವತಾರದಲ್ಲಿ ಪಾರ್ವತಿಯ ಬಳಿ ಹೋದರು. ಪಾರ್ವತಿ ಅವರಿಗೆ ಉತ್ತಮವಾಗಿ ಉಪಚಾರ ಮಾಡಿದಳು. ಆಗ ಬ್ರಹ್ಮಚಾರಿ, ಪಾರ್ವತಿಯ ತಪಸ್ಸಿಗೆ ಕಾರಣವೇನೆಂದು ಕೇಳಿದರು. ಆಕೆ ಶಿವನನ್ನು ಪತಿಯಾಗಿ ಪಡಿಯುವುದೇ ನನ್ನ ತಪಸ್ಸಿನ ಕಾರಣವೆಂದಳು. ಆಗ ಬ್ರಹ್ಮಚಾರಿ ಶಿವನನ್ನು ನಿಂದಿಸಿದನು. ಪಾರ್ವತಿ ಕೋಪ ತೋರಿಸಿದಳು. ಆಕೆಯ ಪ್ರೀತಿಗೆ ಮೆಚ್ಚಿನ ಶಿವ ತನ್ನ ನಿಜರೂಪ ತೋರಿಸಿದರು.

ಹದಿನೆಂಟನೇ ಅವತಾರ ಸುನಟನರ್ತಕನ ಅವತಾರ. ಪಾರ್ವತಿಯ ತಂದೆ ಹಿಮಾಲಯನ ಬಳಿ ಹೆಣ್ಣು ಕೇಳಲು ಬಂದಾಗ, ಶಿವ ಈ ಅವತಾರವನ್ನು ಧರಿಸುತ್ತಾನೆ. ಢಮರುಗ ಹಿಡಿದು ಹಿಮಾಲಕ್ಕೆ ಹೋದ ಶಿವ, ನೃತ್ಯ ಮಾಡಿ ಎಲ್ಲರ ಗಮನ ಸೆಳೆದ. ನೃತ್ಯ ಕಂಡು ಸಂತೋಷನಾದ ಹಿಮಾಲಯ, ಭಿಕ್ಷೆಯ ರೂಪದಲ್ಲಿ ಏನಾದರೂ ಕೇಳು ಎಂದು. ಆಗ ಶಿವ ನಿಮ್ಮ ಮಗಳು ಪಾರ್ವತಿಯನ್ನು ನನಗೆ ವಿವಾಹ ಮಾಡಿಕೊಡಿ ಎಂದು ಕೇಳಿದ. ಹಿಮಾಲಯ ಕ್ರೋಧಿತನಾದ. ಶಿವ ತನ್ನ ನಿಜ ರೂಪ ತೋರಿಸಿ ಅಲ್ಲಿಂದ ಹೊರಟು ಹೋದ. ಆಗ ಹಿಮಾಲಯನಿಗೆ ದಿವ್ಯ ಜ್ಞಾನವಾಗಿ, ಶಿವ ಮತ್ತು ಪಾರ್ವತಿಯ ವಿವಾಹ ಮಾಡಿದರು.

ಹತ್ತೊಂಭತ್ತನೇ ಅವತಾರ ಯಕ್ಷ ಅವತಾರ. ದೇವತೆಗಳ ಮಿಥ್ಯಾಭಿಮಾನವನ್ನು ದೂರ ಮಾಡಲು ಶಿವ ಈ ರೂಪ ಧಾರಣೆ ಮಾಡಿದರು. ಅಮೃತ ಸೇವಿಸಿದ ನಂತರ, ದೇವತೆಗಳು ಅಮರರಾದರು. ಆಗ ದೇವತೆಗಳಿಗೆ ತಾವು ಎಲ್ಲರಿಗಿಂತ ಬಲಶಾಲಿ ಎಂದು ಗರ್ವ ಬಂದಿತು. ಆಗ ಶಿವ ಯಕ್ಷನ ರೂಪ ತಾಳಿ, ಒಂದು ಹುಲ್ಲಿನ ಕಡ್ಡಿ ತೋರಿಸಿ, ಅದನ್ನು ಗಾಳಿಯಲ್ಲಿ ತೇಲುವಂತೆ, ಸುಡುವಂತೆ, ಮುಳುಗಿಸುವಂತೆ, ಮಾಡಿ ಎಂದು ಹೇಳುತ್ತಾನೆ. ದೇವತೆಗಳು ಎಷ್ಟೇ ಪ್ರಯತ್ನ ಪಟ್ಟರೂ ಆ ಹುಲ್ಲು ಕಡ್ಡಿಯನ್ನು ಅಲ್ಲಾಡಿಸಲೂ ಆಗಲಿಲ್ಲ. ಆಗ ಶಿವ ತನ್ನ ನಿಜ ರೂಪ ತೋರಿಸಿ, ದೇವತೆಗಳ ಅಹಂಕಾರವನ್ನು ಮುರಿದ.

- Advertisement -

Latest Posts

Don't Miss