ಅಗ್ನಿಹೋತ್ರ ಹೋಮದ ಮಹತ್ವ: ಯಾಕೆ ಈ ಹೋಮ ಮಾಡಬೇಕು..?

ಗಣಹೋಮ, ಚಂಡಿಕಾ ಹೋಮ, ಹೀಗೆ ಇತ್ಯಾದಿ ಹೋಮಗಳ ಬಗ್ಗೆ ನಾವು ಕೇಳಿದ್ದೇವೆ. ಇಂದು ನಾವು ಅಗ್ನಿಹೋತ್ರ ಹೋಮ ಅಂದ್ರೇನು..? ಯಾಕೆ ಇದನ್ನ ಮಾಡಲಾಗುತ್ತದೆ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಯಾವುದಾದರೂ ಪೂಜೆ ಮಾಡಿದ ಮೇಲೆ ನೈವೇದ್ಯಕ್ಕಿಟ್ಟ ಪ್ರಸಾದವನ್ನ ನಾವು ತಿನ್ನುತ್ತೇವೆ. ತೆಂಗಿನಕಾಯಿಯನ್ನ ಅಡುಗೆಗೆ ಬಳಸುತ್ತೇವೆ. ಆದ್ರೆ ಯಜ್ಞ, ಹೋಮ ಹವನಗಳಲ್ಲಿ ಎಲ್ಲವನ್ನೂ ಅಗ್ನಿಗೇ ಅರ್ಪಿಸುತ್ತೇವೆ. ಹೋಮವೆಂದರೆ ತ್ಯಾಗವಿದ್ದಂತೆ. ತೆಂಗು, ತುಪ್ಪ, ಹಣ್ಣು ಹಂಪಲುಗಳನ್ನೆಲ್ಲ ಅರ್ಪಿಸುವುದು. ಹೋಮಕ್ಕೆ ಬಳಸುವ ವಸ್ತುವೆಲ್ಲವೂ ಅಗ್ನಿದೇವನದ್ದೇ ಆಗಿರುತ್ತದೆ. ಅದರಿಂದ ಸಿಗುವ ರಕ್ಷೆ ನಮ್ಮದಾಗಿರುತ್ತದೆ. ಅದು ಅಗ್ನಿಯ ಆಶೀರ್ವಾದವಾಗಿದೆ.

ಹಿಂದೂ ಧರ್ಮದಲ್ಲಿ ಹೋಮ ಹವನ, ಯಜ್ಞ ಯಾಗ, ಪೂಜೆ ಪುನಸ್ಕಾರಗಳಿಗೆ ತನ್ನದೇ ಆದ ಮಹತ್ವವಿದೆ. ಮೊದಲೆಲ್ಲ ಋಷಿಮುನಿಗಳು ಲೋಕಕಲ್ಯಾಣಕ್ಕಾಗಿ ಹೋಮ ಹವನಗಳನ್ನ ಮಾಡುತ್ತಿದ್ದರು. ಹೀಗೆ ಹಿರಿಯರಿಂದ ಪದ್ಧತಿ ಪ್ರಕಾರವಾಗಿ ರೂಢಿಯಲ್ಲಿರುವ ಹೋಮವೆಂದರೆ ಅಗ್ನಿಹೋತ್ರ ಹೋಮ.

ಅಗ್ನಿಹೋತ್ರ ಹೋಮವನ್ನ ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಮಾಡಿಕೊಳ್ಳಬಹುದು. ಇದಕ್ಕೆ ಪುರೋಹಿತರ ಸಹಾಯ ಬೇಕಂತಿಲ್ಲ. ಬೇಕಾದಲ್ಲಿ ಒಮ್ಮೆ ಪುರೋಹಿತರ ಬಳಿ, ಅಗ್ನಿಹೋತ್ರ ಹೋಮ ಮಾಡುವ ವಿಧವನ್ನ ತಿಳಿದುಕೊಂಡರೆ ಸಾಕು. ನಂತರ ನೀವೇ ಈ ಹೋಮವನ್ನ ಮನೆಯಲ್ಲೇ ಮಾಡಬಹುದು.

ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಈ ಹೋಮವನ್ನು ಮಾಡಲಾಗುತ್ತದೆ. ಈ ಹೋಮಕ್ಕೆ ತಾಮ್ರದ ಹೋಮಕುಂಡ, ಬೆರಣಿ, ಶುದ್ಧ ತುಪ್ಪ, ಪಾಲಿಶ್ ಮಾಡಿರದ ಕೆಂಪು ಬಣ್ಣದ ಅಕ್ಕಿ ಬೇಕಾಗುತ್ತದೆ. ಅಗ್ನಿಹೋತ್ರ ಮಾಡಲು ಗೊತ್ತಿರುವ ಪುರೋಹಿತರನ್ನ ಮನೆಗೆ ಕರೆಸಿ, ಹೋಮ ಮಾಡುವ ಕ್ರಮ ತಿಳಿದುಕೊಳ್ಳುವುದು ಉತ್ತಮ.

ಇನ್ನು ಈ ಹೋಮ ಮಾಡುವುದರಿಂದ ಏನು ಪ್ರಯೋಜನ ಎಂಬ ಪ್ರಶ್ನೆಗೆ ಉತ್ತರ, ದುಷ್ಟಶಕ್ತಿಗಳ ಪ್ರಭಾವ ನಾಶವಾಗುತ್ತದೆ. ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿಯ ಪ್ರಭಾವ ತುಂಬಿರುತ್ತದೆ. ಎಲ್ಲರ ಆರೋಗ್ಯ ಉತ್ತಮವಾಗಿರುತ್ತದೆ. ಅನಾರೋಗ್ಯ ಪೀಡಿತರು. ಈ ಹೋಮದಲ್ಲಿ ಭಾಗಿಯಾದರೆ, ಅವರ ಆರೋಗ್ಯ ಸುಧಾರಿಸುತ್ತದೆ. ಏಕಾಗೃತೆ, ನೆಮ್ಮದಿ, ಸುಖ ಶಾಂತಿ ಹೆಚ್ಚುತ್ತದೆ. ನಿಮ್ಮ ಜೀವನದಲ್ಲಿ ಏನಾದರೂ ದುರಂತ ಸಂಭವಿಸುವ ಸಾಧ್ಯತೆ ಇದ್ದಲ್ಲಿ, ಅದು ಕೂಡ ತಪ್ಪುತ್ತದೆ. ಅಷ್ಟು ಶಕ್ತಿ ಅಗ್ನಿಹೋತ್ರ ಹೋಮದಲ್ಲಿದೆ.

About The Author