ಇವತ್ತು ನಾವು ಇರುವೆಗಳ ಬಗ್ಗೆ ಕೆಲ ವಿಚಿತ್ರ ಸಂಗತಿಯನ್ನ ಹೇಳಲಿದ್ದೇವೆ. ಜೊತೆಗೆ ಟ್ರಾಫಿಕ್ ಜಾಮ್, ವಿಶ್ವದಲ್ಲಿ ಹೆಚ್ಚು ಬಳಸುವ ಭಾಷೆ ಮಮತ್ತು ಕಿರು ಬೆರಳಿನ ಬಗ್ಗೆ ಕೆಲ ಸಂಗತಿಗಳನ್ನ ನಿಮ್ಮ ಜೊತೆ ಶೇರ್ ಮಾಡಲಿದ್ದೇವೆ.
ಮೊದಲನೆಯದಾಗಿ ಇರುವೆಯ ಬಗ್ಗೆ ಕೆಲ ಸಂಗತಿಗಳನ್ನ ತಿಳಿಯೋಣ. ಪ್ರಪಂಚದಲ್ಲಿರುವ ಮಮನುಷ್ಯರನ್ನ ಸೇರಿಸಿ ತೂಕ ಹಾಕಿದ್ರೆ ಎಷ್ಟು ತೂಕ ಆಗುತ್ತದೆಯೋ, ಅದಕ್ಕಿಂತ ಜಾಸ್ತಿ ಪ್ರಪಂಚದಲ್ಲಿರುವ ಇರುವೆಗಳನ್ನ ಕೂಡಿಸಿ ತೂಕ ಹಾಕಿದ್ರೆ ಹೆಚ್ಚು ತೂಕ ಆಗತ್ತೆ. ಯಾಕಂದ್ರೆ ಇರುವೆಗಳ ಸಂಖ್ಯೆ ಅಷ್ಟು ಹೆಚ್ಚಿದೆ. ಅಲ್ಲದೇ ಸಾಮಾನ್ಯ ಮನುಷ್ಯ, ತನ್ನ ದೇಹದ ತೂಕದಷ್ಟು ಭಾರ ಎತ್ತುತ್ತಾನೆ. ವೇಯ್ಟ್ ಲಿಫ್ಟರ್‌ಗಳು ತಮಗಿಂತ ಮೂರು ಪಟ್ಟು ಹೆಚ್ಚು ಭಾರವನ್ನು ಎತ್ತಬಲ್ಲರು. ಆದ್ರೆ ಇರುವೆ ತನಗಿಂತ 10- 15 ಪಟ್ಟು ಹೆಚ್ಚು ಭಾರವನ್ನು ಎತ್ತುತ್ತದೆ. ಇದು ವಿಚಿತ್ರ ಆದ್ರೂ ಸತ್ಯ ಸಂಗತಿ.
ಎರಡನೇಯದಾಗಿ ಟ್ರಾಫಿಕ್ ಜಾಮ್. ಬೆಂಗಳೂರಿನಲ್ಲಿ ವಾಸಿಸುವರಿಗೆ ಟ್ರಾಫಿಕ್ ಜಾಮ್ ಅನ್ನೋದು ಕಾಮನ್. ಆದ್ರೆ ಪ್ರಪಂಚದ ದೊಡ್ಡ ಟ್ರಾಫಿಕ್ ಜಾಮ್ ಬಗ್ಗೆ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಚೈನಾದ ಬೀಜಿಂಗ್ ಡಿಬೆಟ್ ಹೈವೆಯಲ್ಲಿ ಬರೊಬ್ಬರಿ 12 ದಿನಗಳ ಕಾಲ ಟ್ರಾಫಿಕ್ ಜಾಮ್ ಆಗಿತ್ತಂತೆ.
ಮೂರನೇಯದಾಗಿ ಪ್ರಪಂಚದಲ್ಲಿ ಹೆಚ್ಚು ಬಳಸುವ ಭಾಷೆ ಯಾವುದು ಗೊತ್ತಾ..? ನೀವು ಇಂಗ್ಲೀಷ್ ಎಂದು ಊಹಿಸಿರುತ್ತೀರಿ. ಆದ್ರೆ ನಿಮ್ಮ ಊಹೆ ತಪ್ಪು. ವಿಶ್ವದಲ್ಲಿ ಹೆಚ್ಚು ಬಳಕೆಯಾಗುವ ಭಾಷೆ ಮ್ಯಾಂಡರಿನ್ ಭಾಷೆ. ಅಥವಾ ಚೈನೀಸ್ ಭಾಷೆ. ಇಡೀ ಪ್ರಪಂಚದಲ್ಲಿ ಒಂದು ಪಾಯಿಂಟ್ ಒಂದು ಬಿಲಿಯನ್ ಜನರು ಮ್ಯಾಂಡರಿನ್ ಭಾಷೆ ಮಾತಾಡ್ತಾರಂತೆ.
ಇನ್ನು ಕಿರು ಬೆರಳ ಬಗ್ಗೆ ಹೇಳೋದಾದ್ರೆ, ನಮ್ಮ ಕಿರು ಬೆರಳಿನಲ್ಲಿ ಶೇ 50ರಷ್ಟು ಶಕ್ತಿ ಇದೆಯಂತೆ. ಮನುಷ್ಯ ತನ್ನ ಕಿರುಬೆರಳನ್ನು ಕಳೆದುಕೊಂಡ್ರೆ, ಅವನ ಕೈಯಿಂದ ಅರ್ಧದಷ್ಟು ಶಕ್ತಿ ಕುಂದುತ್ತದೆ. ಹಾಗಾಗಿ ಕಿರು ಬೆರಳು ನೋಡಲಷ್ಟೇ ಚಿಕ್ಕದಾಗಿದೆ. ಆದ್ರೆ ಅದರ ಶಕ್ತಿ ಅಪಾರ.