Saturday, July 27, 2024

Latest Posts

ವಿಧಾನ ಪರಿಷತ್ ಚುನಾವಣೆ : ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ

- Advertisement -

ರಾಯಚೂರು :ವಿಧಾನ ಪರಿಷತ್ ಚುನಾವಣೆ ಮತದಾನಕ್ಕೆ ಕ್ಷಣಗಣನೆ, ಅಂತಿಮ ಸಿದ್ದತೆಯಾಗಿದೆ .ಇಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಮತದಾನ ರಾಯಚೂರು- ಕೊಪ್ಪಳ ಕ್ಷೇತ್ರದ 6497 ಮತದಾರರಿಂದ ಹಕ್ಕು ಚಲಾವಣೆ ಹಾಕಬಹುದು .
ರಾಯಚೂರು ಜಿಲ್ಲೆ 181 ಮತಗಟ್ಟೆ,ಕೊಪ್ಪಳ ಜಿಲ್ಲೆಯ 151 ಮತಗಟ್ಟೆಗಳಲ್ಲಿ ಮತದಾನ ಇದೆ . ಜಿಲ್ಲೆಯಲ್ಲಿ 52 ಅತಿಸೂಕ್ಷ್ಮ, 64 ಸೂಕ್ಷ್ಮ, 65 ಸಾಮಾನ್ಯ ಮತಗಟ್ಟೆ ಗುರುತಿಸಲಾಗಿದೆ . ಪ್ರತಿ ಮತಗಟ್ಟೆಯಲ್ಲಿ ಐದು ಜನ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ,
ಕೋವಿಡ್ ನಿಯಮದಂತೆ ಮತದಾನಕ್ಕೆ ವ್ಯವಸ್ಥೆ
ಮಾಡಿದೆ , ಚುನಾವಣಾ ಭದ್ರತಾ ಕಾರ್ಯಕ್ಕೆ 3 ಡಿಎಸ್ ಪಿ , 13 ಸಿಪಿಐ, 30 ಪಿಎಸ್‌ಐ , 88 ಎಎಸ್ ಐ, 646 ಕಾನ್ಸಟೇಬಲ್ ಹಾಗೂ 7 ಡಿಎಆರ್ ತುಕಡಿ, 3 ಕೆಎಸ್ ಆರ್ ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ .

- Advertisement -

Latest Posts

Don't Miss