ತ್ರಿಮೂರ್ತಿಗಳಲ್ಲಿ ಓರ್ವನಾದ ಪರಶಿವ ಇಡೀ ಲೋಕದ ಸೃಷ್ಟಿಕರ್ತನೆಂದು ಹೇಳಲಾಗುತ್ತದೆ. ಇಂಥ ಶಿವ ಹಲವಾರು ರೂಪವನ್ನು ತಾಳಿದ್ದಾನೆ. ಅಂಥ ರೂಪದಲ್ಲಿ ಅರ್ಧನಾರೀಶ್ವರ ರೂಪವೂ ಒಂದು. ಹಾಗಾದ್ರೆ ಶಿವ ಅರ್ಧನಾರೀಶ್ವರ ರೂಪ ತಾಳಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಶಿವನ ಅರ್ಧನಾರೀಶ್ವರ ರೂಪದ ಅರ್ಥವೇನೆಂದರೆ ಈ ಸಮಾಜದಲ್ಲಿ ಗಂಡು ಹೆಣ್ಣು ಸಮಾನರು ಎಂದರ್ಥ. ಈ ಎರಡು ಜೀವಗಳು ಸಮಾಜದ ಅಭಿವೃದ್ಧಿಗೆ ಸಮಾನವಾದ ಕೊಡುಗೆ ಕೊಡುತ್ತದೆ ಎಂದರ್ಥ. ಒಂದು ಜೀವದ ಸೃಷ್ಟಿಗೆ, ಅದರ ಬೆಳವಣಿಗೆಗೆ ಪುರುಷ ಕೊಡುವ ಕೊಡುಗೆಯಷ್ಟೇ ಹೆಣ್ಣು ಕೂಡ ಕೊಡುಗೆ ಕೊಡುತ್ತಾಳೆ ಎಂದರ್ಥ.

ಇನ್ನೊಂದು ಕಥೆಯ ಪ್ರಕಾರ ಶಿವ ಅರ್ಧನಾರೀಶ್ವರ ರೂಪ ಧರಿಸಲು ಕಾರಣವೇನೆಂದರೆ, ಭೃಂಗಿ ಎಂಬ ಋಷಿಯು ಶಿವನ ಪರಮ ಭಕ್ತನಾಗಿದ್ದನು. ಶಿವನಲ್ಲಿ ಅವನಿಗೆ ಎಷ್ಟು ಭಕ್ತಿ ಇತ್ತೆಂದರೆ, ಅವನು ಶಿವನನ್ನು ಬಿಟ್ಟು ಬೇರೆ ಯಾರನ್ನೂ ಪೂಜಿಸುತ್ತಿರಲಿಲ್ಲ. ತನ್ನ ಭಕ್ತನನ್ನು ಪರೀಕ್ಷಿಸಲು ಶಿವ ಪಾರ್ವತಿ ಸಮೇತನಾಗಿ ಭೂಲೋಕಕ್ಕೆ ಬರುತ್ತಾನೆ.

ತನ್ನ ದೇವರನ್ನು ಕಂಡ ಭೃಂಗಿ ಶಿವನಿಗೆ ಪ್ರದಕ್ಷಿಣೆ ಹಾಕಿ ಪೂಜಿಸುತ್ತಾನೆ. ಆದ್ರೆ ಪಾರ್ವತಿಗೆ ನಮಿಸುವುದಿಲ್ಲ. ಆಗ ಪಾರ್ವತಿ ಶಿವ ಶಕ್ತಿ ಒಂದೇ ಎಂದು ಹೇಳಿ ಶಿವನ ಸಮೀಪಕ್ಕೆ ಹೋಗಿ ಕೂರುತ್ತಾಳೆ. ಆಗ ಭೃಂಗಿ ಹಾವಿನ ರೂಪ ತಾಳಿ, ಪರಶಿವನನ್ನು ಸುತ್ತಿ ನಮಸ್ಕರಿಸುತ್ತಾನೆ.
ಆಗ ಶಿವ ಪಾರ್ವತಿಯ ಅರ್ಧ ಅಂಗ ಸೇರುತ್ತಾನೆ. ಆಗಲಾದರೂ ಭೃಂಗಿ ತನ್ನ ಜೊತೆ ಪಾರ್ವತಿಗೆ ಪ್ರದಕ್ಷಿಣೆ ಹಾಕುತ್ತಾನೆ ಎಂದುಕೊಳ್ಳುತ್ತಾನೆ ಶಿವ. ಆದ್ರೆ ಭೃಂಗಿ ಇಲಿ ರೂಪ ತಾಳಿ ಅವರಿಬ್ಬರನ್ನೂ ಬೇರೆಯಾಗಿಸಲು ಪ್ರಯತ್ನಿಸುತ್ತಾನೆ. ಇದರಿಂದ ಕೋಪಗೊಂಡ ಪಾರ್ವತಿ ಭೃಂಗಿಗೆ ನೀನು ನಿನ್ನ ತಾಯಿಯಿಂದ ಪಡೆದುಕೊಂಡ ಭಾಗ ಕಳೆದುಕೊಳ್ಳುವಂತಾಗಲಿ ಎಂದು ಶಾಪ ನೀಡುತ್ತಾಳೆ.
ಭೃಂಗಿಯ ದೇಹದ ಮಾಂಸ ಮತ್ತು ರಕ್ತ ಕಡಿಮೆಯಾಗಿ ಆತ ಕುಸಿದು ಬೀಳುತ್ತಾನೆ. ನಡೆದಾಡಲೂ ಆಗದಷ್ಟು ಶಕ್ತಿ ಕಳೆದುಕೊಳ್ಳುತ್ತಾನೆ. ಆಗ ಶಿವ ಮತ್ತು ಪಾರ್ವತಿಗೆ ಕರುಣೆ ಬಂದು ಭೃಂಗಿಗೆ ಮೂರು ಕಾಲು ಕೊಡುತ್ತಾರೆ. ಆಗ ಆತನಲ್ಲಿ ನಡೆಯಲು ಶಕ್ತಿ ಬರುತ್ತದೆ.
ಇದರ ಅರ್ಥವೇನೆಂದರೆ, ಒಂದು ಜೀವದ ಸೃಷ್ಟಿಯಾಗಬೇಕಾದರೆ, ಗಂಡು ಹೆಣ್ಣಿನ ಕೊಡುಗೆ ಸಮಾನವಾಗಿರುತ್ತದೆ. ಅಪ್ಪನಿಂದ ಮೂಳೆ ಮತ್ತು ಸ್ನಾಯು ಸಿಕ್ಕರೆ, ಅಮ್ಮನಿಂದ ರಕ್ತ ಮತ್ತು ಮಾಂಸ ಸಿಗುತ್ತದೆ. ಹೀಗೆ ಒಂದು ಜೀವ ಭೂಮಿಗೆ ಬರಲು ಕಾರಣವಾಗುತ್ತದೆ. ಹಾಗಾಗಿ ಅರ್ಧನಾರೀಶ್ವರ ತತ್ವದ ಅರ್ಥವೇನೆಂದರೆ ಗಂಡು ಹೆಣ್ಣು ಸಮಾನರು ಎಂದರ್ಥ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ