ಅಷ್ಟ ಲಕ್ಷ್ಮೀಯರ ಬಗ್ಗೆ ಚಿಕ್ಕ ಮಾಹಿತಿ: ಇವರನ್ನು ಪೂಜಿಸಿದರೆ ಅಷ್ಟೈಶ್ವರ್ಯವೂ ಪ್ರಾಪ್ತಿ..

ಲಕ್ಷ್ಮೀ ಅಂದ ಮೇಲೆ ಎಲ್ಲರಿಗೂ ನೆನಪಿಗೆ ಬರುವ, ಎಲ್ಲರಿಗೂ ಪ್ರಿಯಳಾಗಿರುವ ಲಕ್ಷ್ಮೀ ಅಂದರೆ ಧನ ಲಕ್ಷ್ಮೀ. ಆದ್ರೆ ಅಷ್ಟ ಲಕ್ಷ್ಮೀಯರೂ ಕೂಡ ಲಾಭದಾಯಕ ಆಶೀರ್ವಾದ ನೀಡುವವರೇ. ಹಾಗಾದ್ರೆ ಅಷ್ಟಲಕ್ಷ್ಮೀಯರು ಯಾರು ಯಾರು ಅಂತಾ ನೋಡೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಆದಿ ಲಕ್ಷ್ಮೀ: ಆದಿ ಎಂದರೆ ಮೊದಲು ಎಂದರ್ಥ. ಈಕೆ ಸಮುದ್ರ ಮಥನದ ವೇಳೆ ಜನಿಸಿದ ಲಕ್ಷ್ಮೀಯಾಗಿದ್ದಾಳೆ. ಈಕೆ ಎಲ್ಲರಿಗಿಂತ ಮೊದಲು ಹುಟ್ಟಿದ ಕಾರಣ, ಈಕೆಯನ್ನು ಎಲ್ಲ ದೇವತೆಯರೂ ಕೂಡ ಪೂಜಿಸುತ್ತಾರೆ.

ಧನ ಲಕ್ಷ್ಮೀ: ಎರಡನೇಯದಾಗಿ ಧನಲಕ್ಷ್ಮೀ. ಈಕೆ ಸಂಪತ್ತಿನ ಅಧಿದೇವತೆ. ಈಕೆಯನ್ನು ಪೂಜಿಸಿದರೆ ಬಡತನ ನಿವಾರಿಸಿ, ಸಿರಿತನ ತರುತ್ತಾಳೆ ಎಂಬ ನಂಬಿಕೆ ಇದೆ. ಕೆಂಪು ಸೀರೆಯುಟ್ಟು, ಕಮಲದ ಮೇಲೆ ಆಸೀನಳಾಗಿದ್ದಾಳೆ.

ಧಾನ್ಯ ಲಕ್ಷ್ಮೀ: ಈಕೆ ರೈತರಿಗೆ ಅಚ್ಚುಮೆಚ್ಚಾದ ಲಕ್ಷ್ಮೀ. ಈಕೆಯನ್ನು ಪೂಜಿಸಿದರೆ, ಧಾನ್ಯ ಅಭಿವೃದ್ಧಿಯಾಗುವಂತೆ ಮಾಡುತ್ತಾಳೆ. ಈಕೆಗೆ ಪೂಜಿಸಿ, ಧಾನ್ಯವನ್ನು ದಾನ ಮಾಡಿದ್ರೆ, ಮನುಷ್ಯ ಅಭಿವೃದ್ಧಿ ಕಾಣುತ್ತಾನೆ ಎಂಬ ನಂಬಿಕೆ ಇದೆ. ಹಸಿರು ಸೀರೆಯುಟ್ಟ ಈಕೆ ತನ್ನ ಕೈಗಳಲ್ಲಿ ಧಾನ್ಯಗಳನ್ನ ಹಿಡಿದಿದ್ದಾಳೆ.

ಗಜಲಕ್ಷ್ಮೀ: ಈಕೆಯೂ ಕೂಡ ಅದೃಷ್ಟ ಲಕ್ಷ್ಮೀಯಾಗಿದ್ದಾಳೆ. ಕಳೆದುಹೋದ ಇಂದ್ರನ ಸಂಪತ್ತನ್ನು ಹುಡುಕಿ ಕೊಡುವಲ್ಲಿ ಗಜಲಕ್ಷ್ಮೀ ಸಹಾಯ ಮಾಡಿದ್ದಳೆಂದು ಹೇಳಲಾಗುತ್ತದೆ. ಸಮುದ್ರ ಮಥನದ ವೇಳೆ ಈಕೆ ಆನೆಗಳೊಂದಿಗೆ ಪ್ರತ್ಯಕ್ಷಳಾಗಿದ್ದಳು. ಆದ್ದರಿಂದ ಈಕೆಯನ್ನ ಗಜಲಕ್ಷ್ಮೀ ಎಂದು ಕರೆಯಲಾಗುತ್ತದೆ.

ಸಂತಾನ ಲಕ್ಷ್ಮೀ: ಸಂತಾನ ಭಾಗ್ಯ ಕರುಣಿಸುವ ಲಕ್ಷ್ಮೀ ಅಂದ್ರೆ ಸಂತಾನ ಲಕ್ಷ್ಮೀ. ಆರೋಗ್ಯವಂತ ಮತ್ತು ದೀರ್ಘಾಯಸ್ಸು ಹಚ್ಚಿರುವ ಮಕ್ಕಳು ಬೇಕೆಂದರೆ ಈಕೆಯನ್ನು ಪೂಜಿಸಲಾಗುತ್ತದೆ. ಹಳದಿ ಬಣ್ಣದ ಸೀರೆಯುಟ್ಟ ಈಕೆ ತೊಡೆಯ ಮೇಲೆ ಮಗುವನ್ನು ಕೂರಿಸಿಕೊಂಡಿದ್ದಾಳೆ.

ಧೈರ್ಯ ಲಕ್ಷ್ಮೀ: ಧೈರ್ಯವನ್ನು ಹೆಚ್ಚಿಸುವ ಲಕ್ಷ್ಮೀಯೇ ಧೈರ್ಯ ಲಕ್ಷ್ಮೀ ಅಥವಾ ವೀರ ಲಕ್ಷ್ಮೀ. ಜೀವನದಲ್ಲಿ ಏನಾದರೂ ಗುರಿ ಸಾಧಿಸಬೇಕು ಎಂದಿದ್ದರೆ ಈಕೆಯನ್ನು ಭಕ್ತಿಯಿಂದ ಪೂಜಿಸಿದರೆ, ಕೆಲಸ ಈಡೇರುತ್ತದೆ.

ವಿಜಯ ಲಕ್ಷ್ಮೀ: ವಿಜಯವನ್ನು ಕರುಣಿಸುವ ದೇವಿಯೇ ವಿಜಯಲಕ್ಷ್ಮೀ. ಈಕೆ ಅಷ್ಟಭುಜಗಳನ್ನು ಹೊಂದಿದ್ದು, ಪ್ರತಿ ಕೈಗಳಲ್ಲಿಯೂ ಯುದ್ಧಾಸ್ತ್ರವನ್ನ ಹಿಡಿದಿದ್ದಾಳೆ.

ವಿದ್ಯಾ ಲಕ್ಷ್ಮೀ: ಸರಸ್ವತಿ ಹೇಗೆ ವಿದ್ಯೆಯ ಅಧಿದೇವತೆಯೋ, ಅದೇ ರೀತಿ ವಿದ್ಯಾ ಲಕ್ಷ್ಮೀ ಕೂಡ ವಿದ್ಯೆಯ ಅಧಿದೇವತೆ. ಈಕೆಯೂ ಕೂಡ ಬಿಳಿ ಬಣ್ಣದ ಸೀರೆಯುಟ್ಟು ಕಮಲದ ಮೇಲೆ ಆಸೀನಳಾಗಿದ್ದಾಳೆ.ಈಕೆಯನ್ನ ಪೂಜಿಸಿದರೆ, ವಿದ್ಯೆಯ ಜೊತೆ, ಬಡತನ ಕೂಡ ನಿವಾರಿಸುತ್ತಾಳೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author