ಮಹಾಭಾರತದಲ್ಲಿ ಅತೀ ಬಲಶಾಲಿ, ಪರಾಕ್ರಮಿಯಾಗಿದ್ದ ಭೀಷ್ಮರು, ಸಕಲ ವಿದ್ಯೆಯಲ್ಲಿ ಪಾರಂಗತರಾಗಿದ್ದರು. ಕೃಷ್ಣನ ಅಣತಿಯಂತೆ ಪಾಂಡವರು ಭೀಷ್ಮರನ್ನು ಸೋಲಿಸಲು ಶಿಖಂಡಿನಿಯನ್ನು ತರದಿದ್ದರೆ, ಭೀಷ್ಮರಿಗೆ ಸೋಲೇ ಇರುತ್ತಿರಲಿಲ್ಲ, ಸಾವು ಬರುತ್ತಿರಲಿಲ್ಲ. ಇನ್ನು ಭೀಷ್ಮರೇಕೆ ವಿವಾಹವಾಗಲಿಲ್ಲ ಎಂಬ ಬಗ್ಗೆಯೂ ಕಥೆ ಇದೆ . ಆ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಶಂತನು ರಾಜ ಮತ್ತು ಗಂಗೆಗೆ ಜನಿಸಿದ ಪುತ್ರನೇ ಭೀಷ್ಮ. ಭೀಷ್ಮರಿಗೆ ದೇವವ್ರತನೆಂಬ ಹೆಸರಿತ್ತು. ಗಂಗೆಯ ಪುತ್ರನಾಗಿದ್ದರಿಂದ ಗಾಂಗೇಯ ಅಂತಲೂ ಕರೆಯುತ್ತಿದ್ದರು. ಇಂತಿಪ್ಪ ಭೀಷ್ಮರು ಯವ್ವನಕ್ಕೆ ಬಂದಾಗ, ಶಂತನು ಮಹಾರಾಜ ವಾಯುವಿಹಾರಕ್ಕೆಂದು ನದಿಯ ಬಳಿ ಬರುತ್ತಾನೆ. ಆಗ ಬೆಸ್ತರ ಮಗಳನ್ನು ಕಂಡು ಆಕೆಯೆಡೆಗೆ ಆಕರ್ಷಿತನಾಗುತ್ತಾನೆ. ಆಕೆಯ ಬಳಿ ಬಂದು ತನ್ನನ್ನು ವಿವಾಹವಾಗುವಂತೆ ಕೇಳುತ್ತಾನೆ.
ಆಗ ಆಕೆಯ ತಂದೆ ಬೆಸ್ತರಾಜನು, ನನ್ನ ಮಗಳಿಗೆ ಒಳ್ಳೆಯ ವರನಿಗೆ ಕೊಟ್ಟು ಮದುವೆ ಮಾಡಬೇಕೆಂಬುದು ನನ್ನ ಆಸೆಯಾಗಿತ್ತು. ನೀವು ನನ್ನ ಅಳಿಯನಾಗಿ ಬರುವುದು ನನಗೆ ಹೆಮ್ಮೆಯ ವಿಷಯವೇ ಆದರೆ, ನನ್ನ ಮಗಳಿಗೆ ಹುಟ್ಟುವ ಪುತ್ರನು ಮುಂದೆ ರಾಜ್ಯದ ಚಕ್ರವರ್ತಿಯಾಗಬೇಕು ಎಂದು ಷರತ್ತು ಹಾಕುತ್ತಾನೆ. ಈ ಬಗ್ಗೆ ಚಿಂತಿಸುತ್ತ ರಾಜ ಅರಮನೆಗೆ ಬರುತ್ತಾನೆ.
ಅಪ್ಪನ ಬೇಸರವನ್ನು ಕಂಡ ಭೀಷ್ಮ, ಬೇಸರಕ್ಕೆ ಕಾರಣವೇನೆಂದು ಕೇಳುತ್ತಾರೆ. ಆದ್ರೆ ಶಂತನು ಮದುವೆಯ ಕಾರಣಗಳನ್ನು ಮುಚ್ಚಿಟ್ಟು, ಬೇರೆ ಕಾರಣಗಳನ್ನ ಕೊಟ್ಟು ಸುಮ್ಮನಾಗುತ್ತಾನೆ. ಅಪ್ಪ ಸುಳ್ಳು ಹೇಳುತ್ತಿರುವ ವಿಷಯ ಮನಗಂಡ ಭೀಷ್ಮರು, ಮಂತ್ರಿಗಳ ಬಳಿ ಅಪ್ಪನ ಬೇಸರಕ್ಕೆ ಕಾರಣ ಕೇಳುತ್ತಾರೆ. ಆಗ ಮಂತ್ರಿ ನಡೆದ ವಿಷಯವನ್ನು ಹೇಳುತ್ತಾರೆ.
ಅಪ್ಪನ ಏಕಾಂಗಿತನ ಕಳೆದು ಹಾಕಿ, ಅಪ್ಪನನ್ನು ಸಂತೋಷವಾಗಿರಿಸಬೇಕೆಂಬ ಕಾರಣಕ್ಕೆ ಭೀಷ್ಮರು, ಬೆಸ್ತನ ಬಳಿ ಹೋಗಿ, ನಿಮ್ಮ ಎಲ್ಲ ಷರತ್ತುಗಳಿಗೆ ನಮ್ಮ ಒಪ್ಪಿಗೆ ಇದೆ. ನಿಮ್ಮ ಮಗಳ ಮಗನಾಗಿ ಜನಿಸುವವನೇ ಮುಂದೆ ರಾಜ್ಯದ ಚಕ್ರವರ್ತಿಯಾಗುತ್ತಾನೆ. ನಾನು ಹಸ್ತಿನಾವತಿಯ ಉದ್ಧಾರಕ್ಕಾಗಿ ಕೊನೆತನಕ ಅವಿವಾಹಿತನಾಗಿ, ರಾಜ್ಯಕ್ಕಾಗಿ ದುಡಿಯುತ್ತೇನೆ, ರಾಜನ ಪಟ್ಟದ ಆಸೆ ನನಗಿಲ್ಲವೆಂದು ಹೇಳುತ್ತಾರೆ. ಆಗ ಬೆಸ್ತ ಶಂತನುವಿನ ಜೊತೆ ತನ್ನ ಮಗಳ ಮದುವೆ ಮಾಡಲು ಒಪ್ಪಿಕೊಳ್ಳುತ್ತಾನೆ.
ವಿಷಯ ತಿಳಿದ ರಾಜ ಹರ್ಷ ವ್ಯಕ್ತಪಡಿಸುತ್ತ, ನಿನ್ನನ್ನು ನನ್ನ ಪುತ್ರನೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಈ ನಿನ್ನ ಕಾರ್ಯಕ್ಕೆ ನಾನು ನಿನಗೆ ಇಚ್ಛಾಮರಣದ ವರವನ್ನು ನೀಡುತ್ತೇನೆ. ನೀನು ಯಾವಾಗ ನಿಧನನಾಗಲು ಬಯಸುತ್ತಿಯೋ, ಅಂದೇ ಮರಣ ನಿನ್ನನ್ನು ಸಮೀಪಿಸುತ್ತದೆ. ಇಲ್ಲವಾದಲ್ಲಿ ಮರಣ ನಿನ್ನ ಬಳಿ ಸುಳಿಯುವುದಿಲ್ಲವೆಂದು ವರ ನೀಡುತ್ತಾನೆ. ಆದ್ದರಿಂದ ಭೀಷ್ಮ ಇಚ್ಛಾಮರಣಿ ಎನ್ನಿಸಿಕೊಳ್ಳುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




