Friday, March 14, 2025

Latest Posts

ಶಿವನಿಗೆ ಬಿಲ್ವಪತ್ರೆ ಅಂದ್ರೆ ಯಾಕಷ್ಟು ಪ್ರೀತಿ..? ಬಿಲ್ವಪತ್ರೆ ಹೇಗೆ ಉದ್ಭವಿಸಿತು..?

- Advertisement -

ಗಣಪತಿಗೆ ಮೋದಕವಂದ್ರೆ ಇಷ್ಟ, ಲಕ್ಷ್ಮೀಗೆ ಕೆಂಪು ಹೂವಂದ್ರೆ ಇಷ್ಟ, ಶ್ರೀಕೃಷ್ಣನಿಗೆ ತುಳಸಿ ದಳವೆಂದ್ರೆ ಇಷ್ಟ, ಇನ್ನು ಶಿವನಿಗೆ ಬಿಲ್ವಪತ್ರೆ ಅಂದ್ರೆ ಬಲು ಇಷ್ಟ. ಶಿವನಿಗೆ ಬಿಲ್ವಪತ್ರೆ ಪ್ರಿಯವಾಗಲು ಕಾರಣವೇನು..? ಶಿವನಿಗೆ ಬಿಲ್ವ ಪತ್ರೆ ಅರ್ಪಿಸುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ..

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466

ಬ್ರಹ್ಮ ವಿಷ್ಣು ಮಹೇಶ್ವರರ ಸ್ವರೂಪವೆಂದೇ ಹೇಳಲಾಗುವ ಬಿಲ್ವ ಪತ್ರೆ, ಶಿವಪೂಜೆಗೆ ಸೂಕ್ತವೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಪುರಾಣದ ಪ್ರಕಾರ ತ್ರಿದಳ ಹೊಂದಿರುವ ಬಿಲ್ವಪತ್ರೆ ಮರ ಪಾರ್ವತಿಯ ಬೆವರ ಹನಿಯಿಂದ ಉದ್ಭವವಾಗಿದೆ ಎನ್ನಲಾಗಿದೆ. ಮಂದಾರ ಪರ್ವತದ ಮೇಲೆ ಪಾರ್ವತಿಯ ಬೆವರ ಹನಿ ಬಿದ್ದಾಗ ಬಿಲ್ವಪತ್ರೆ ಮರ ಉದ್ಭವಗೊಂಡಿತು.

ಇಡೀ ಬಿಲ್ವಪತ್ರೆ ಮರದಲ್ಲಿ ಪಾರ್ವತಿಯರು ನಾನಾ ರೂಪದಲ್ಲಿ ನೆಲೆಸಿದ್ದಾಳೆ ಎನ್ನಲಾಗಿದ್ದು, ಪಾರ್ವತಿಯ ಆವಾಸವಾಗಿರುವ ಕಾರಣಕ್ಕಾಗಿ ಶಿವನ ಪೂಜೆಗೆ ಬಿಲ್ವಪತ್ರೆ ಅತ್ಯುತ್ತಮ ಎನ್ನಲಾಗಿದೆ.

ಬಿಲ್ವಪತ್ರೆಯ ಬಗ್ಗೆ ಗುರು ಚರಿತ್ರೆಯಲ್ಲಿ ಒಂದು ಅದ್ಭುತವಾದ ಕಥೆಯಿದೆ. ಜೀವನದಲ್ಲಿ ಬರೀ ದುಷ್ಟ ಕೆಲಸಗಳನ್ನೇ ಮಾಡಿದ್ದ ಹೆಂಗಸೊಬ್ಬಳು, ತನ್ನ ಜೀವಮಾನದ ಕೊನೆಯ ದಿನಗಳಲ್ಲಿ ಹೊಟ್ಟೆಗೆ ಊಟವಿಲ್ಲದೇ, ಊರೂರು ಅಲೆಯುವ ಪರಿಸ್ಥಿತಿ ಬರುತ್ತದೆ. ಹೀಗೆ ಅಲೆಯುತ್ತ ಇನ್ನೇನು ಜೀವ ಹೋಗುವ ಸಂದರ್ಭದಲ್ಲಿ ಆಕೆ ಗೋಕರ್ಣಕ್ಕೆ ಬಂದು ತಲುಪುತ್ತಾಳೆ.

ಜೀವನಪೂರ್ತಿ ದುಷ್ಟ ಕೆಲಸಗಳನ್ನೇ ಮಾಡಿದ್ದ ಆ ಹೆಂಗಸು, ಸಾಯುವ ವೇಳೆ ಊಟ ತಿಂಡಿ ಸಿಗದೇ ಒಂದು ಇಡೀ ದಿನ ಉಪವಾಸವಿರುತ್ತಾಳೆ. ಇಡೀ ರಾತ್ರಿ ಊರೂರು ಅಲೆದ ಕಾರಣ ನಿದ್ದೆಯೂ ಇರುವುದಿಲ್ಲ. ಹೀಗಿರುವಾಗ ಆಕೆಯ ಕೈ ಬಿಲ್ವಪತ್ರೆಯ ಮರಕ್ಕೆ ತಗುಲಿ, ಆ ಮರದಿಂದ ಬಿದ್ದ ಎಲೆ, ಶಿವಲಿಂಗಕ್ಕೆ ಅರ್ಪಿತವಾಗಿರುತ್ತದೆ. ಅಂದು ಶಿವರಾತ್ರಿಯಾಗಿರುತ್ತದೆ. ಆಕೆಗೆ ಗೊತ್ತಿಲ್ಲದೆಯೇ ಆಕೆ ಶಿವರಾತ್ರಿಯ ಉಪವಸ, ಜಾಗರಣೆ ಮಾಡಿ, ದೇವರಿಗೆ ಬಿಲ್ವಪತ್ರೆ ಅರ್ಪಿಸಿರುತ್ತಾಳೆ. ಈ ಕಾರಣಕ್ಕಾಗಿ ಆಕೆಯ ಪಾಪ ಕರ್ಮಗಳೆಲ್ಲೂ ಕಳೆದು, ಆಕೆ ಅದೇ ದಿನ ಮರಣ ಹೊಂದಿದ್ದು, ಆಕೆಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ.

ಬಿಲ್ವಪತ್ರೆಯ ಗಿಡವನ್ನ ಭಕ್ತಿಯಿಂದ ಮುಟ್ಟಿದರೂ ಸಾಕು. ನಿಮ್ಮ ಪಾಪಗಳೆಲ್ಲೂ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಪ್ರತೀ ಸೋಮವಾರದಂದು ಮಧ್ಯಾಹ್ನಕ್ಕೂ ಮುನ್ನ ಶಿವನ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸಿ ಬರುವುದರಿಂದ ನಮ್ಮ ಸಕಲ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇದೆ. ಶಿವರಾತ್ರಿಯ ದಿನ ಶಿವನಿಗೆ ಬಿಲ್ವ ಪತ್ರೆ ಅರ್ಪಿಸಿದರೆ ಶಿವ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಕೂಡ ಇದೆ. ಅಂತೆಯೇ ಶ್ರಾವಣ ಮಾಸದಲ್ಲಿ ಪ್ರತೀ ಸೋಮವಾರ ಶಿವನಿಗೆ ಜಲಾಭಿಷೇಕ ಮಾಡಿದ್ರೂ ಸಾಕು, ನಮ್ಮ ಮನೋಕಾಮನೆಗಳು ಈಡೇರುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

- Advertisement -

Latest Posts

Don't Miss