ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿರುವ ದೇಶ ಯಾವುದು ಎಂದರೆ, ಕೆಲವರು ಭಾರತ ಅನ್ನೋದುಂಟು. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳನ್ನು ಹೊಂದಿದ ದೇಶ ಅಂದರೆ, ನೇಪಾಳ. ಇದನ್ನ ಹಿಂದೂ ರಾಷ್ಟ್ರ ಅಂತಾನೂ ಕರೆಯುತ್ತಾರೆ. ಇಂಥ ದೇಶದಲ್ಲಿ ಹಲವಾರು ಹಿಂದೂ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಕ್ಕೂ ಒಂದೊಂದು ವಿಶೇಷವಿದೆ. ಅಂಥ ವಿಶೇಷತೆ ಹೊಂದಿರುವ ವಿಭಿನ್ನ ದೇವಸ್ಥಾನ ಅಂದ್ರೆ, ಬುದ್ಧ ನೀಲಕಂಠ ದೇವಸ್ಥಾನ. ಯಾಕೆ ಇದು ವಿಭಿನ್ನ ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ನಾವು ಮಹಿಳೆಯರಿಗೆ, ಪುರುಷರಿಗೆ ಪ್ರವೇಶವಿಲ್ಲದ ದೇವಸ್ಥಾನಗಳ ಬಗ್ಗೆ ಕೇಳಿದ್ದೇವೆ. ಇನ್ನು ಕೆಲವು ದೇವಸ್ಥಾನಗಳಲ್ಲಿ ಬರೀ ಹಿಂದೂಗಳಿಗಷ್ಟೇ ಪ್ರವೇಶವಿದೆ. ಮತ್ತೆ ಕೆಲ ದೇವಸ್ಥಾನಗಳಲ್ಲಿ ಸಸ್ಯಹಾರಿಗಳಿಗಷ್ಟೇ ಪ್ರವೇಶವಿದೆ. ಆದ್ರೆ ಈ ಬುದ್ಧ ನೀಲಕಂಠ ದೇವಸ್ಥಾನದಲ್ಲಿ ರಾಜಮನೆತನದವರಿಗೆ ಪ್ರವೇಶವಿಲ್ಲ. ರಾಜ ಮನೆತನದವರು ಈ ದೇವಸ್ಥಾನಕ್ಕೆ ಬರುಂತಿಲ್ಲ.
ಇನ್ನು ಯಾಕೆ ಹೀಗೆ ಅನ್ನೋ ಪ್ರಶ್ನೆಗೆ ಉತ್ತರ, ಜನರ ಶಾಪ. ಹೌದು, ಕಠ್ಮಂಡುವಿನ ಶಿವಪುರಿ ಬೆಟ್ಟದ ತಪ್ಪಲಿನಲ್ಲಿ ಈ ದೇವಸ್ಥಾನವಿದೆ. ಇದರ ಹೆಸರು ಬುದ್ಧ ನೀಲಕಂಠ ದೇವಸ್ಥಾನವಾದರೂ, ಇಲ್ಲಿ ಪೂಜಿಸಲ್ಪಡುವವನು ವಿಷ್ಣು. ನೀಲಿ ಕಲ್ಲಿನಲ್ಲಿ ಕೆತ್ತಲಾದ ಶ್ರೀವಿಷ್ಣು ಇಲ್ಲಿನ ದೇವರು.
ಜನರು ಏನೆಂದು ಶಾಪ ನೀಡಿದರು ಅಂತಾ ನೋಡುವುದಾದರೆ, ಈ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆಯುವ ರಾಜ ವಂಶಸ್ಥರು ಸಾವನ್ನಪ್ಪಲಿ ಎಂದು ಜನ ಶಾಪ ನೀಡಿದ್ದರು. ಸುಮಾರು ವರ್ಷಗಳ ಹಿಂದೆ ಪ್ರತಾಪಮಲ್ಲನೆಂಬ ರಾಜ, ಈ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀವಿಷ್ಣುವಿನ ದರ್ಶನ ಮಾಡಿ ಹೋದ ಬಳಿಕ ಸಾವನ್ನಪ್ಪಿದ. ಆದರೆ ಅವನ ಅಚಾನಕ್ ಸಾವಿಗೆ ಏನು ಪರಿಹಾರವೆಂದು ತಿಳಿದು ಬಂದಿಲ್ಲ. ಹಾಗಾಗಿ ಈ ದೇವಸ್ಥಾನಕ್ಕೆ ರಾಜವಂಶಸ್ಥರು ಬರುವುದಿಲ್ಲ. ಆದ್ರೆ ಈ ದೇವರನ್ನು ರಾಜವಂಶಸ್ಥರು ಮನೆಯಲ್ಲೇ ಪೂಜಿಸುತ್ತಾರೆ.
ಇನ್ನು ಈ ದೇವರಿಗೆ ಬುದ್ಧ ನೀಲಕಂಠ ದೇವನೆಂದು ಕರೆಯಲು ಕಾರಣ, ಇಲ್ಲಿ ವಿಷ್ಣುವಿನೊಂದಿಗೆ ಶಿವ ನೆಲೆಸಿದ್ದಾನೆಂದು ಹೇಳಲಾಗುತ್ತದೆ. ಯಾಕೆಂದರೆ, ಸಮುದ್ರ ಮಂಥನ ನಡೆಯುವಾಗ ಶಿವನು ವಿಷವನ್ನು ಕುಡಿಯುತ್ತಾನೆ. ಆದ್ರೆ ವಿಷ ದೇಹ ಸೇರದೇ, ಗಂಟಲಲ್ಲಿ ಉಳಿಯುತ್ತದೆ. ಆಗ ಶಿವನ ಗಂಟಲಿನಲ್ಲಿ ಉರಿ ಶುರುವಾಗುತ್ತದೆ. ಈ ಉರಿಯನ್ನು ಕಡಿಮೆಮಾಡಲು ಶಿವ, ಬೆಟ್ಟಕ್ಕೆ ತ್ರಿಶೂಲದಿಂದ ಹೊಡೆದು, ಅದರಿಂದ ಬಂದ ನೀರನ್ನು ಸೇವಿಸುತ್ತಾನೆ.
ಆ ನೀರು ಹರಿದ ಜಾಗವೇ ಗೋಸಾಯಿ ಕೊಳ, ಈ ಕೊಳ ಇರುವುದು, ಇದೇ ಬುದ್ಧ ನೀಲಕಂಠ ದೇವಸ್ಥಾನದಲ್ಲಿ. ಶ್ರೀ ವಿಷ್ಣು ಆಸೀನನಾಗಿರುವುದ ಕೂಡ ಈ ಗೋಸಾಯಿ ಕೊಳದ ಮಧ್ಯದಲ್ಲಿ. ವಿಷ್ಣು ಮೂರ್ತಿ ಕಲ್ಲಿನಿಂದ ಕೆತ್ತಲಾಗಿದ್ದರೂ, ಭಾರವಾಗಿದ್ದರೂ ಅದು ನೀರಿನಲ್ಲಿ ಮುಳುಗಿಲ್ಲ. ಬದಲಾಗಿ ತೇಲುತ್ತಿದೆ. ಇದನ್ನ ವಿಸ್ಮಯ ಅಂತಾನೇ ಹೇಳಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




