ಕರ್ಕಾಟಕ ರಾಶಿಯವರ ಉತ್ತಮ ಮತ್ತು ಉತ್ತಮವಲ್ಲದ ಗುಣಗಳ್ಯಾವುದು ಗೊತ್ತಾ..?

ದ್ವಾದಶ ರಾಶಿಚಕ್ರಗಳಲ್ಲಿ ಬರುವ ನಾಲ್ಕನೇ ರಾಶಿ ಅಂದ್ರೆ ಕಟಕ ರಾಶಿ. ಇಂದು ನಾವು ಕರ್ಕಾಟಕ ರಾಶಿಯ ಉತ್ತಮ ಮತ್ತು ಉತ್ತಮವಲ್ಲದ ಗುಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಮೊದಲನೇಯದಾಗಿ ಕಟಕ ರಾಶಿಯವರ ಉತ್ತಮ ಸ್ವಭಾವಗಳ ಬಗ್ಗೆ ತಿಳಿಯೋಣ. ಪ್ರೀತಿ-ಕಾಳಜಿ ಅನ್ನೋದು ಇವರ ಉತ್ತಮ ಗುಣಗಳಲ್ಲಿ ಒಂದು. ಎಲ್ಲಕ್ಕಿಂತ ಹೆಚ್ಚಾಗಿ ಕುಟುಂಬಸ್ಥರಿಗೆ, ಬಾಳ ಸಂಗಾತಿಯ ಬಗ್ಗೆ ಪ್ರೀತಿ ಕಾಳಜಿ ಹೆಚ್ಚು ತೋರುತ್ತಾರೆ. ಇವರಿಗೆ ಇವರ ಬಾಳಸಂಗಾತಿಯ ಖುಷಿಗಿಂತ ಬೇರೆ ಖುಷಿ ಲೆಕ್ಕಕ್ಕೆ ಬರುವುದಿಲ್ಲ. ಹಾಗಾಗಿ ಇವರು ಬಾಳ ಸಂಗಾತಿಗಾಗಿ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಅವರ ಮನಸ್ಸಿಗೆ ನೋವು ಮಾಡುವ ಸಂಗತಿಯನ್ನ ದೂರವಿಡುತ್ತಾರೆ. ಒಟ್ಟಾರೆಯಾಗಿ ಬಾಳಸಂಗಾತಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಸ್ವಭಾವ ಇವರದ್ದು.

ಇಷ್ಟೇ ಅಲ್ಲದೇ, ಉತ್ತಮ ತಾಯಿಯಾಗುವ ಗುಣ ಇವರಲ್ಲಿರುತ್ತದೆ. ಬಾಲ್ಯದಿಂದಲೇ ಇವರಿಗೆ ಮಕ್ಕಳ ಮೇಲೆ ಪ್ರೀತಿ ಕಾಳಜಿ ಇರುತ್ತದೆ. ಮುಂದೆ ತಾವೇ ತಾಯಿಯಾದಾಗ ತಮ್ಮ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಮನುಷ್ಯರಷ್ಟೇ ಅಲ್ಲದೇ, ಪ್ರಾಣಿಗಳ ಮೇಲೂ ಪ್ರೀತಿ, ದಯೆ ತೋರುವ ಇವರು, ಸಾಕು ಪ್ರಾಣಿಗಳನ್ನ ಮಕ್ಕಳಂತೆ ನೋಡುತ್ತಾರೆ.

ಇನ್ನು ಭಾವುಕ ಗುಣದವರಾದ ಕಟಕ ರಾಶಿಯವರು, ಖುಷಿಯಾದಾಗಲೂ, ಬೇಸರವಾದಗಲೂ ಕಣ್ಣೀರು ಹಾಕುತ್ತಾರೆ. ಸಂಬಂಧಕ್ಕೆ ಹೆಚ್ಚಿನ ಬೆಲೆ ಕೊಡುವ ಇವರು, ತನ್ನ ಮನೆ ಜನ ಯಾವಾಗಲೂ ಖುಷಿಯಿಂದ, ನಗು ನಗುತ್ತಲಿರಲಿ ಎಂದು ಆಸೆ ಪಡುತ್ತಾರೆ. ಕಷ್ಟದಲ್ಲಿರುವವರಿಗೆ ತಕ್ಷಣ ಸ್ಪಂದಿಸುವ, ಸಹಾಯ ಮಾಡುವ ಗುಣ ಇವರದ್ದಾಗಿದೆ.

ಇತರರನ್ನು ಹೆಚ್ಚಾಗಿ ನಂಬುವ ಇವರಿಗೆ ನಂಬಿಕೆ ದ್ರೋಹ ಮಾಡುವವರು ಹೆಚ್ಚು ಅನ್ನಬಹುದು. ಹಾಗಾಗಿ ಒಮ್ಮೆ ಬುದ್ಧಿ ಕಲಿತ ಮೇಲೆ ಮತ್ತೆ ಯಾರನ್ನೂ ಅಷ್ಟು ಸುಲಭವಾಗಿ ಇವರು ನಂಬುವುದಿಲ್ಲ. ಹಾಗಾಗಿ ಇವರಿಗೆ ಸ್ನೇಹಿತರು ಕೊಂಚ ಕಡಿಮೆ ಎನ್ನಬಹುದು. ಇನ್ನು ಇವರಿಗೆ ಯಾರಾದರೂ ನಂಬಿಕೆ ದ್ರೋಹ ಮಾಡಿದ್ರೆ ಅವರನ್ನ ಇವರು ಕೊನೆತನಕ ಕ್ಷಮಿಸುವುದಿಲ್ಲ.

ಉತ್ತಮವಲ್ಲ ಗುಣ ಅಂದ್ರೆ ಹಠ, ಸಿಟ್ಟು, ಅಸಮಾಧಾನದ ಸ್ವಭಾವ. ಇವರಿಗೆ ಒಳ್ಳೆ ರೀತಿಯ ಹಠವೂ ಇರುತ್ತದೆ. ಕೆಟ್ಟ ರೀತಿಯ ಹಠವೂ ಇರುತ್ತದೆ. ಒಳ್ಳೆ ರೀತಿಯ ಹಠ ಅಂದ್ರೆ ತಾನು ಹಿಡಿದ ಕೆಲಸ ಮಾಡೇ ಮುಗಿಸುತ್ತೇನೆ. ತನಗೆ ಬೇಕಾದ್ದನ್ನು ಕಷ್ಟಪಟ್ಟು ದುಡಿದು ಕೊಂಡುಕೊಳ್ಳುತ್ತೇನೆ. ನಾನು ನನ್ನ ಗುರಿ ತಲುಪೇ ತಲುಪುತ್ತೇನೆ ಎಂಬ ಹಠ.

ಆದ್ರೆ ಕೆಟ್ಟ ಹಠ ಅಂದ್ರೆ. ಯಾರ ಜೊತೆಗಾದರೂ ಮಾತು ಬಿಟ್ಟರೆ, ಜಗಳವಾಡಿದರೆ ಅದನ್ನ ಹಠದಿಂದ ಮುಂದೆ ಕೊಂಡೊಯ್ಯುತ್ತಾರೆ ವಿನಃ, ರಾಜಿ ಮಾಡಿಕೊಂಡು ಸುಮ್ಮನಾಗುವುದಿಲ್ಲ. ಈ ಮೇಲೆ ಹೇಳಿದಂತೆ ಒಮ್ಮೆ ಹೊರಗಿನವರ ಬಳಿ ಮಾತು ಬಿಟ್ಟರೆ, ಜನ್ಮದಲ್ಲಿ ಅವರ ಮುಖ ನೋಡದಿರುವಷ್ಟು ಸಿಟ್ಟಿನ ಸ್ವಭಾವ ಇವರಿಗಿರುತ್ತದೆ.

ಇವರ ಸಿಟ್ಟಿನ ಸ್ವಭಾವದಿಂದ ಇವರ ಸಂಬಂಧ ಕೂಡ ಹಾಳಾಗುತ್ತದೆ. ಹಾಗಾಗಿ ಇವರಿಗೆ ತಾಳ್ಮೆವುಳ್ಳ ಸಂಗಾತಿ ಸಿಕ್ಕರೆ ಉತ್ತಮ. ಇಲ್ಲವಾದಲ್ಲಿ ಇವರ ವೈವಾಹಿಕ ಜೀವನ ಸ್ವಲ್ಪ ಕಷ್ಟಕರವಾಗಿರುತ್ತದೆ. ಇನ್ನು ಕೆಲವೊಮ್ಮೆ ಇವರ ಸಿಟ್ಟೇ ಇವರಿಗೆ ಲಕ್ ಆಗಿ ಪರಿಣಮಿಸುತ್ತದೆ. ಇವರ ಬಳಿ ಕುತಂತ್ರಿಗಳು ಬಂದರೂ ಇವರ ಸಿಟ್ಟಿನ ಸ್ವಭಾವ ಕಂಡು ಅವರು ದೂರಾಗುತ್ತಾರೆ. ಇದರಿಂದ ಕಟಕ ರಾಶಿಯವರು ಕಷ್ಟದಿಂದ ಪಾರಾಗುತ್ತಾರೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

About The Author