ಚಂಪಾ ಷಷ್ಠಿಯ ಮಹತ್ವವೇನು..? ಯಾಕೆ ಇದನ್ನು ಆಚರಿಸಲಾಗುತ್ತದೆ..?

ಇದೇ ಡಿಸೆಂಬರ್ 20ರಂದು ಚಂಪಾ ಷಷ್ಠಿ ಬರಲಿದೆ. ಇದನ್ನು ಸುಬ್ರಹ್ಮಣ್ಯ ಸೃಷ್ಠಿ ಅಂತಾನೂ ಕರೆಯಲಾಗುತ್ತದೆ. ಯಾಕಂದ್ರೆ ಈ ದಿನ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಶಿವನನ್ನು ಕೂಡ ಪೂಜಿಸಲಾಗುತ್ತದೆ. ಹಾಗಾದ್ರೆ ಚಂಪಾ ಷಷ್ಠಿಯ ಹಿಂದಿನ ಕಥೆಯೇನು..? ಚಂಪಾ ಷಷ್ಠಿಯ ಮಹತ್ವವೇನು..? ಯಾಕೆ ಇದನ್ನು ಆಚರಿಸಲಾಗುತ್ತದೆ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಚಂಪಾ ಷಷ್ಠಿಯನ್ನು ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಲಾಗುತ್ತದೆ. ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತದೆ. ಸಕ್ಕರೆಯಿಂದ ತಯಾರಿಸಿದ ನೈವೇದ್ಯವನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಈ ದಿನ ಶಿವನನ್ನು ಕುರಿತು ಜಪ ಮಾಡಿದರೆ ಉತ್ತಮ ಅನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಚಂಪಾ ಷಷ್ಠಿಯನ್ನು ಅದ್ಧೂರಿಯಾಗಿ ಮಾಡುತ್ತಾರೆ.

ಇನ್ನು ಪುರಾಣ ಕಥೆಯ ಪ್ರಕಾರ ಬ್ರಹ್ಮನ ಬಳಿ ವರ ಪಡೆದು ಕೊಬ್ಬಿದ್ದ ಮಣಿ ಮತ್ತು ಮಲ್ಲನೆಂಬ ರಾಕ್ಷಸರು ದೇವತೆಯರಿಗೆ ತೀವ್ರ ಉಪಟಳ ನೀಡುತ್ತಿದ್ದರು. ಈ ಕಾರಣಕ್ಕೆ ದೇವತೆಗಳು ಶಿವನ ಬಳಿ ಬಂದು ತಮ್ಮನ್ನು ರಕ್ಷಿಸುವಂತೆ ಕೇಳಿಕೊಂಡರು. ಆಗ ಶಿವ ಮಲ್ಹಾರನ ರೂಪ ತಾಳಿ, ಪಾರ್ವತಿ ಮಹಾಲಸಾ ದೇವಿಯಾಗಿ ಮಣಿ ಮತ್ತು ಮಲ್ಲರ ಜೊತೆ ಆರು ದಿನ ಹೋರಾಡಿ, ಇಬ್ಬರನ್ನೂ ಸಂಹರಿಸಿದರು. ಹೀಗೆ ಮಣಿ ಮತ್ತು ಮಲ್ಲರ ಸಂಹಾರದ ದಿನವೇ ಚಂಪಾ ಷಷ್ಠಿ ಎಂದು ಹೇಳಲಾಗಿದೆ. ಅಲ್ಲದೇ ಹೀಗೆ ಸಂಹಾರ ಮಾಡಿದ ಬಳಿಕ, ಶಿವ ಖಂಡೋಬ ಅಥವಾ ಮಲ್ಹಾರನಾಗಿ ಭೂಮಿಯಲ್ಲೇ ಉಳಿಯಲು ನಿರ್ಧರಿಸಿದ ಎಂಬ ಮಾತಿದೆ.

ಮಹಾರಾಷ್ಟ್ರದ ಮತ್ತು ಕರ್ನಾಟಕದಲ್ಲಿರುವ ಮೈಲಾರ ದೇವಸ್ಥಾನದಲ್ಲಿ, ಖಂಡೋಬಾ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಪೂಜೆ ಅದ್ಧೂರಿಯಾಗಿ ನಡೆಯುತ್ತದೆ. ಆರು ದಿನಗಳ ಕಾಲ ಈ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ವಿಶೇಷ ಆರತಿ ಬೆಳಗುವುದು, ನಂದಾ ದೀಪ ಹಚ್ಚುವ ಪದ್ಧತಿ ಕೂಡ ಇದೆ. ಅಲ್ಲದೇ, ಗೋದಿಯಿಂದ ಮಾಡಿದ ಸಿಹಿ ತಿಂಡಿ ಮತ್ತು ಬದನೆಕಾಯಿಯಿಂದ ಮಾಡಿದ ಖಾರ ತಿಂಡಿಯನ್ನು ಪ್ರಸಾದವಾಗಿ ನೀಡಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author