Sunday, September 8, 2024

Latest Posts

ನವರಾತ್ರಿ ವಿಶೇಷ: ತಾಯಿ ಚಾಮುಂಡೇಶ್ವರಿ ಮೈಸೂರಿನಲ್ಲಿ ನೆಲೆ ನಿಲ್ಲಲು ಕಾರಣವೇನು..?

- Advertisement -

ನವರಾತ್ರಿ ವಿಶೇಷವಾಗಿ ನಾವು ಹೊರನಾಡು ಅನ್ನಪೂರ್ಣೇಶ್ವರಿ, ಶ್ರೃಂಗೇರಿ ಶಾರದಾಂಬೆಯ ಬಗ್ಗೆ ಚಿಕ್ಕ ವಿವರಣೆ ನೀಡಿದ್ದೆವು. ಇಂದು ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಬಗ್ಗೆ ಮಾಹಿತಿ ತಿಳಿಯೋಣ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ದಸರಾ ಅಂದ್ರೆ ಬರೀ ಕನ್ನಡಿಗರಿಗೆ ಅಷ್ಟೇ ಅಲ್ಲ, ಇಡೀ ವಿಶ್ವದ ಜನರಿಗೆ ನೆನಪು ಬರುವುದು ಮೈಸೂರು. ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಮಾತಿದೆ. ಮೈಸೂರು ಅರಮನೆ ಜೊತೆ ಗಮನ ಸೆಳೆಯುವ ಸ್ಥಳವೆಂದರೆ ಚಾಮುಂಡಿ ಬೆಟ್ಟ. ವಿಶ್ವ ವಿಖ್ಯಾತ ದಸರಾ ಶುರುವಾಗುವುದೇ ತಾಯಿ ಚಾಮುಂಡೇಶ್ವರಿ ಪೂಜೆಯ ಮೂಲಕ. ಹಾಗಾದ್ರೆ ತಾಯಿ ಚಾಮುಂಡೇಶ್ವರಿ ಮೈಸೂರಿನಲ್ಲಿ ಬಂದು ನೆಲೆ ನಿಲ್ಲಲು ಕಾರಣವೇನು ಅನ್ನೋದನ್ನ ನೋಡೋಣ..

ದಕ್ಷ ಮಹಾರಾಜ ಯಜ್ಞ ಮಾಡುವಾಗ ದಾಕ್ಷಾಯಿಣಿ ಯಜ್ಞಕ್ಕೆ ಹಾರುತ್ತಾಳೆ. ಆಗ ಶಿವ ಆಕೆಯನ್ನ ಅಗ್ನಿ ಕುಂಡದಿಂದ ತೆಗೆದು, ತಾಂಡವವಾಡುತ್ತಾನೆ. ಈ ವೇಳೆ ವಿಷ್ಣು ತನ್ನ ಸುದರ್ಶನ ಚಕ್ರದಿಂದ ದಾಕ್ಷಾಣಿಯನ್ನ ದೇಹವನ್ನ ಚಿದ್ರಗೊಳಿಸುತ್ತಾನೆ. ಆಗ ಆಕೆಯ ದೇಹ 18 ತುಂಡುಗಳಾಗಿ ಬೇರೆ ಬೇರೆ ಸ್ಥಳದಲ್ಲಿ ಬೀಳುತ್ತದೆ. ಅಂಥ 18 ಸ್ಥಳಗಳಲ್ಲಿಯೂ ದೇವಿ ನೆಲೆನಿಂತಿದ್ದಾಳೆ. ಅಂಥ ಶಕ್ತಿಪೀಠಗಳಲ್ಲಿ ಚಾಮುಂಡಿ ಬೆಟ್ಟ ಕೂಡ ಒಂದು.

ಇನ್ನೊಂದೆಡೆ ತನಗೆ ಸಾವಾದರೆ ಹೆಣ್ಣಿನಿಂದಷ್ಟೇ ಆಗಬೇಕು ಅನ್ನೋ ವರ ಪಡೆದ ಮಹೀಷಾಸುರ, ತನಗೇ ಸಾವೇ ಇಲ್ಲವೇನೋ ಎಂಬಂತೆ ಎಲ್ಲರಿಗೂ ತೊಂದರೆ ಕೊಡುತ್ತ ತಿರುಗುತ್ತಾನೆ. ಈ ವೇಳೆ ಎಲ್ಲ ದೇವಾನುದೇವತೆಗಳು ತ್ರಿಮೂರ್ತಿಗಳ ಮೊರೆ ಹೋಗುತ್ತಾರೆ. ತ್ರಿಮೂರ್ತಿಗಳು ತಮ್ಮ ಅಂಶದಿಂದ ದೇವಿಯನ್ನ ಸೃಷ್ಟಿಸುತ್ತಾರೆ. ಆ ದೇವಿಯೇ ಚಾಮುಂಡೇಶ್ವರಿ. ಚಾಮುಂಡಿಗೆ ಎಲ್ಲರೂ ತಮ್ಮ ಆಯುಧವನ್ನ ನೀಡುತ್ತಾರೆ.

ಹೀಗೆ ಎಲ್ಲರ ಆಯುಧದ ಸಹಾಯದಿಂದ ತಾಯಿ ಚಾಮುಂಡಿ ಮಹೀಷಾಸುರನ ಸಂಹಾರ ಮಾಡಲು ಬರುತ್ತಾಳೆ. ಚಾಮುಂಡೇಶ್ವರಿ ಮತ್ತು ಮಹೀಷನ ಮಧ್ಯೆ 9 ದಿನಗಳ ಕಾಲ ಯುದ್ಧ ನಡೆಯುತ್ತದೆ. ಹತ್ತನೇ ದಿನದಂದು ತಾಯಿ ಚಾಮುಂಡಿ ಮಹೀಷನನ್ನು ಸಂಹರಿಸಿ, ಮಹಿಷಾಸುರ ಮರ್ದಿನಿ ಎನ್ನಿಸಿಕೊಳ್ಳುತ್ತಾಳೆ. 9 ದಿನಗಳ ಕಾಲ ದೇವಿ ನಾನಾ ಅವತಾರಗಳನ್ನೆತ್ತಿ ರಾಕ್ಷನ ವಿರುದ್ಧ ಸೆಣೆಸಾಡಿದ್ದಕ್ಕೆ, ನವರಾತ್ರಿ ಎಂದು ಆಚರಿಸಲಾಗುತ್ತಿದ್ದು, ದುಷ್ಟರನ್ನ ಸಂಹರಿಸಿದ 10ನೇ ದಿನವನ್ನ ವಿಜಯ ದಶಮಿ ಎಂದು ಆಚರಿಸುತ್ತಾರೆ.

ಚಾಮುಂಡಿ ಬೆಟ್ಟದ ಮೇಲೆ ಈ ಯುದ್ಧ ನಡೆದು, ಚಾಮುಂಡೇಶ್ವರಿ ಗೆಲುವು ಸಾಧಿಸಿದಳೆಂದು ಹೇಳಲಾಗುತ್ತದೆ. ಹೀಗೆ ಗೆಲುವು ಸಾಧಿಸಿದ ಚಾಮುಂಡಿ ಅದೇ ಸ್ಥಳದಲ್ಲಿ ನೆಲೆನಿಂತಳು.

ಇನ್ನು ನವರಾತ್ರಿಯಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಮೈಸೂರು ರಾಜ ವಂಶಸ್ಥರ ಸಮ್ಮುಖದಲ್ಲಿ ಈ ಪೂಜೆ ನೆರವೇರುತ್ತದೆ. ವಿಜಯ ದಶಮಿಯಂದು ಅದ್ಧೂರಿಯಾಗಿ ಆನೆ ಅಂಬಾರಿಯ ಮೂಲಕ ಚಾಮುಂಡಿಯ ಉತ್ಸವ ಮೂರ್ತಿಯನ್ನ ಮೆರವಣಿಗೆ ಮಾಡಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss