ಇವತ್ತು ನಾವು ಚಾಣಕ್ಯ ನೀತಿಯ ಬಗ್ಗೆ ಮತ್ತಷ್ಟು ವಿಷಯವನ್ನ ತಿಳಿಯೋಣ. ಚಾಣಕ್ಯನ ಪ್ರಕಾರ ನಾಲ್ಕು ಮಾತುಗಳನ್ನ ನಾವು ಯಾರ ಬಳಿಯೂ ಹೇಳಬಾರದು. ಯಾವುದು ಆ ನಾಲ್ಕು ಮಾತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೊದಲನೇಯದಾಗಿ ನಮಗೆ ಯಾರಾದರೂ ಅವಮಾನ ಮಾಡಿದ್ದರೆ, ಅದನ್ನ ಪದೇ ಪದೇ ಎಲ್ಲರ ಮುಂದೆ ಹೇಳಬಾರದು. ಮುಂದೊಂದು ದಿನ ಇದೇ ವಿಷಯವನ್ನಿಟ್ಟುಕೊಂಡು ಎಲ್ಲರ ಮುಂದೆ ನಿಮಗೆ ಅಪಹಾಸ್ಯ ಮಾಡುವ ಸಂದರ್ಭ ಒದಗಿಬರಬಹುದು. ಆದ್ದರಿಂದ ನಿಮಗೆ ಯಾರಾದರೂ ಅವಮಾನ ಮಾಡಿದ್ದರೆ, ಅದನ್ನ ಯಾರೊಂದಿಗೂ ಹೇಳಿಕೊಳ್ಳದಿರುವುದೇ ಉತ್ತಮ.
ಎರಡನೇಯದಾಗಿ ನಿಮ್ಮ ಮನೆಯಲ್ಲಿ ನಡೆದ ಜಗಳ, ನಿಮ್ಮ ಮನೆಯವರಿಗೆ ಏನಾದರೂ ತೊಂದರೆ ಆಗಿದ್ದರೆ, ಅದನ್ನ ಬೇರೆಯವರ ಬಳಿ ಹೇಳಬಾರದು. ಮನೆಯ ವಿಷಯ ನಾಲ್ಕು ಗೋಡೆಯ ಮಧ್ಯೆಯೇ ಇರಬೇಕು. ನೀವು ಜಗಳ ನಡೆದ ಬಳಿಕ ನಿಮ್ಮ ಸಮಾಧಾನಕ್ಕಾಗಿ ಇತರರಿಗೆ ಆ ವಿಷಯವನ್ನ ಹೇಳಿದರೆ, ಮುಂದೊಂದು ದಿನ ಅದೇ ಮಾತನ್ನ ಗುರಿಯಾಗಿಸಿ, ಅವರು ನಿಮ್ಮ ಮರ್ಯಾದೆಗೆ, ಸಂಬಂಧಕ್ಕೆ ಧಕ್ಕೆ ತರಬಹುದು. ಅಥವಾ ನಿಮ್ಮ ವಿಷಯವನ್ನ ಇತರರಿಗೆ ಹೇಳಿ ಮಜಾ ತೆಗೆದುಕೊಳ್ಳುತ್ತಾರೆ. ಈ ಕಾರಣಕ್ಕೆ ಮನೆಯ ಗುಟ್ಟು ಮನೆಯಲ್ಲಿಯೇ ಇದ್ದರೆ ಒಳಿತು.
ಮೂರನೇಯದಾಗಿ ನಿಮಗೆ ಬೇಸರವಾಗಿದ್ದರೆ, ಯಾವುದದಾರೂ ಮಾತು ನಿಮ್ಮ ಮನಸ್ಸನ್ನ ಘಾಸಿಗೊಳಿಸಿದ್ದರೆ, ಅದನ್ನ ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ನೀವು ಗೆಳೆಯರು, ಆಪ್ತರೆಂದು ಭಾವಿಸಿದವರು, ನಿಮ್ಮ ಮಾತನ್ನ ಕೇಳಿಸಿಕೊಂಡು, ನಂತರ ಬೇರೆಯವರ ಬಳಿ ನಿಮ್ಮ ಬೇಸರದ ಅಪಹಾಸ್ಯ ಮಾಡುತ್ತಾರೆ. ಆದ್ದರಿಂದ ಎಷ್ಟೇ ತೊಂದರೆ, ಬೇಸರವಾದರೂ ಅದು ನಿಮ್ಮ ಮನಸ್ಸಿನಲ್ಲೇ ಇರಲಿ. ನಿಮಗೆ ಆ ಬೇಸರವನ್ನ ಹೊರಗೆ ಹಾಕಲೇಬೇಕು ಅಂದ್ರೆ, ನಿಮ್ಮ ಅಪ್ಪ- ಅಮ್ಮನ ಬಳಿ, ಅಥವಾ ದೇವರ ಫೋಟೋವಿನ ಮುಂದೆ ಕುಳಿತು ನಿಮ್ಮ ಬೇಸರವನ್ನ ಹೊರಹಾಕಿ.
ನಾಲ್ಕನೇಯದಾಗಿ ನೀವು ಎಷ್ಟೇ ಕಷ್ಟಕ್ಕೆ ಸಿಲುಕಿದ್ದರೂ ಕೂಡ ಬೇರೆಯವರಿಗೆ ಅದರ ಅರಿವಾಗದಂತೆ ನೋಡಿಕೊಳ್ಳಿ. ಮನುಷ್ಯನ ಗುಣವೇ ಹಾಗೆ. ಇಂದು ಬೇರೆಯವರಿಗೆ ಬಂದ ದಿನ ನಾಳೆ ನನಗೂ ಬರಬಹುದು ಎಂಬ ಪರಿವಿಲ್ಲದೇ, ಎಲ್ಲರನ್ನೂ ಆಡಿಕೊಂಡು ಬದುಕುತ್ತಾನೆ. ನಿಮಗೆ ಹಣಕಾಸಿನ ಸಮಸ್ಯೆ ಉಂಟಾದರೆ, ಅದನ್ನ ಎಲ್ಲರ ಬಳಿ ಹೇಳಿಕೊಂಡು ಓಡಾಡಬೇಡಿ. ಅಂಥ ದಿನಗಳು ಕಾಣುವ ಅವಕಾಶವನ್ನೇ ಮಾಡಿಕೊಡಬೇಡಿ. ನಿಮ್ಮ ಬಳಿ ಹಣವಿಲ್ಲದಾಗ, ಸಹಾಯ ಮಾಡುವ ಬದಲು, ಜನ ಅದನ್ನೇ ಹೇಳಿಕೊಂಡು ನಿಮ್ಮ ಅಪಹಾಸ್ಯ ಮಾಡುತ್ತಾರೆ. ಹಾಗಾಗಿ, ಸುಮ್ಮ ಸುಮ್ಮನೆ ಹಣ ವ್ಯರ್ಥ ಮಾಡದೇ, ಭವಿಷ್ಯಕ್ಕಾಗಿ ಒಂದಿಷ್ಟು ಹಣ ಜೋಡಿಸಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




