ಜೀವನದಲ್ಲಿ ಉದ್ಧಾರವಾಗುವ ಬಗ್ಗೆ ಚಾಣಕ್ಯರು ಹಲವು ಮಾತುಗಳನ್ನ ಹೇಳಿದ್ದಾರೆ. ತಮ್ಮ ನೀತಿ ಪಾಠದ ಮೂಲಕ ಜನರಿಗೆ ಉತ್ತಮ ಸಂದೇಶ ನೀಡಿದ್ದಾರೆ. ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಮೊದಲನೇಯದಾಗಿ ದಡ್ಡನ ಬಳಿ ಹೊಗಳಿಸಿಕೊಳ್ಳುವುದಕ್ಕಿಂತ, ಬುದ್ಧಿವಂತನಿಂದ ಬೈಯಿಸಿಕೊಳ್ಳುವುದು ಉತ್ತಮ ಅಂತಾ ಚಾಣಕ್ಯರು ಹೇಳಿದ್ದಾರೆ. ಯಾರು ಹೆಚ್ಚು ಹೊಗಳುತ್ತಾರೋ, ಅಂಥವರು ನಮ್ಮ ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ ಎಂದರ್ಥ. ಇನ್ನು ಯಾರು ನಮಗೆ ಬೈದು ಬುದ್ಧಿ ಹೇಳುತ್ತಾರೋ, ಅವರು ನಮ್ಮನ್ನ ಉದ್ಧಾರ ಮಾಡಲು ಯತ್ನಿಸುತ್ತಿದ್ದಾರೆಂದು ಅರ್ಥ. ಆದ್ರೆ ಪದೇ ಪದೇ, ಕುಂತರೂ ನಿಂತರೂ ಬೈಯ್ದರೆ, ಅಲ್ಲಿ ಉದ್ಧಾರ ಮಾಡುವ ಪ್ರಯತ್ನವಿರುವುದಿಲ್ಲ. ಬದಲಾಗಿ ನಿಮ್ಮ ಮನಸ್ಸಿಗೆ ಬೇಸರ ತರುವ ಉದ್ದೇಶವಿರುತ್ತದೆ. ಇನ್ನು ಕೆಲವರು ಉತ್ತಮ ಮನಸ್ಸಿನಿಂದ ಅಪರೂಪಕ್ಕೆ ಹೊಗಳಿದರೂ ತಪ್ಪಿಲ್ಲ. ಆದ್ರೆ ಹೊಗಳುವುದೇ ಕಾಯಕವಾಗಿ ಬಿಟ್ಟರೆ, ಉತ್ತಮವಲ್ಲ.
ಅಲ್ಲದೇ, ಮೂರ್ಖರ ಬಳಿ ವಾದ ಮಾಡುವುದು ಸಮಯ ವ್ಯರ್ಥ ಮಾಡಿದಂತೆ ಅಂತಾ ಚಾಣಕ್ಯರು ಹೇಳಿದ್ದಾರೆ. ಆದ್ರೆ ಬುದ್ಧಿವಂತರ ಜೊತೆ ವಾದ ಮಾಡಿದರೆ, ನಮಗೆ ಹಲವು ವಿಷಯಗಳ ಬಗ್ಗೆ ಜ್ಞಾನ ಹೆಚ್ಚುತ್ತದೆ. ಆದ್ದರಿಂದ ಮೂರ್ಖರ ಜೊತೆ ವಾದ ಮಾಡಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ.
ಜೀವನದಲ್ಲಿ ಧೈರ್ಯವಂತನಾಗಬೇಕೇ ಹೊರತು, ಹೇಡಿಯಾಗಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ. ಜೀವನದಲ್ಲಿ ಏನೇ ಕಷ್ಟ ಬಂದರೂ ಅದನ್ನ ಎದುರಿಸಿ, ಮುನ್ನಡೆಯುವವನು ಉದ್ಧಾರವಾಗುತ್ತಾನೆ. ಉತ್ತಮ ಬಾಳು ಬಾಳುತ್ತಾನೆ ಅಂತಾ ಚಾಣಕ್ಯರು ಹೇಳಿದ್ದಾರೆ. ಅಲ್ಲದೇ, ಆಲಸ್ಯದಿಂದ ಕೂಡಿರುವವನಿಗೆ ಉತ್ತಮ ಭವಿಷ್ಯವಿರುವುದಿಲ್ಲ.
ಇನ್ನು ಕೊನೆಯದಾಗಿ ನಾವು ಭವಿಷ್ಯದ ಬಗ್ಗೆ ಮತ್ತು ಭೂತಕಾಲದ ಬಗ್ಗೆ ಚಿಂತಿಸುವುದನ್ನ ಬಿಟ್ಟು ವರ್ತಮಾನದಲ್ಲಿ ಉತ್ತಮವಾಗಿ ಜೀವಿಸಬೇಕು ಅಂತಾ ಚಾಣಕ್ಯರು ಹೇಳಿದ್ದಾರೆ.