ಪಾರ್ವತಿ ದೇವಿ ಚಂದ್ರಘಂಟಾ ದೇವಿಯ ರೂಪ ತಾಳಲು ಕಾರಣವೇನು..?

ಜಗನ್ಮಾತೆಯಾದ ಪಾರ್ವತಿ ದುಷ್ಟರ ಸಂಹಾರಕ್ಕಾಗಿ ಲೋಕ ರಕ್ಷಣೆಗಾಗಿ ಹಲವು ಅವತಾರಗಳನ್ನು ಎತ್ತಿದ್ದಾಳೆ. ಅಂಥ ಅವತಾರಗಳಲ್ಲಿ ಚಂದ್ರಘಂಟಾ ದೇವಿ ಅವತಾರ ಕೂಡ ಒಂದು. ಹಾಗಾದ್ರೆ ಪಾರ್ವತಿ ದೇವಿ ಚಂದ್ರಘಂಟಾ ದೇವಿ ರೂಪ ತಾಳಲು ಕಾರಣವೇನು ಅನ್ನೋದನ್ನ ತಿಳಿಯೋಣ ಬನ್ನಿ…

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ

8147130507 / 7349360507

ಚಂದ್ರಘಂಟಾ ದೇವಿ ಅಂದ್ರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಎಂದರ್ಥ. ದಶಭುಜಗಳನ್ನು ಹೊಂದಿದ ಈ ದೇವಿ, ಹತ್ತು ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡಿದ್ದು, ಸಿಂಹವಾಹಿನಿಯಾಗಿದ್ದಾಳೆ. ಇನ್ನು ಚಂದ್ರ ಘಂಟಾದೇವಿ ಈ ರೂಪ ತಾಳಲು ಕಾರಣ ಶಿವ. ಹೌದು ಶಿವನಿಗಾಗಿ ಪಾರ್ವತಿ ತಪಸ್ಸು ಮಾಡಿ, ಶಿವನನ್ನು ಒಲಿಸಿಕೊಳ್ಳುತ್ತಾಳೆ. ಶಿವ-ಪಾರ್ವತಿಯ ಮದುವೆ ನಿಶ್ಚಯವಾಗುತ್ತದೆ.

ವಿವಾಹದ ಸಂದರ್ಭದಲ್ಲಿ ಶಿವ ಸ್ಮಶಾನವಾಸಿಯಾಗಿ ಬರುತ್ತಾನೆ. ಬೂದಿ ತುಂಬಿದ ಮೈ, ಕತ್ತಿನಲ್ಲಿ ಸರ್ಪ, ಅವನೊಟ್ಟಿಗೆ ಭೂತಗಣಗಳು ಬರುತ್ತದೆ. ಶಿವನ ಈ ಆಕಾರ ಕಂಡ ಚಂದ್ರಘಂಟಾ ದೇವಿ ಎಚ್ಚರ ತಪ್ಪಿ ಬೀಳುತ್ತಾಳೆ. ತದನಂತರ ಚಂದ್ರಘಂಟಾ ದೇವಿಯ ರೂಪ ತಾಳುತ್ತಾಳೆ. ಶಿವನಿಗೂ ಸುಂದರ ರೂಪಕ್ಕೆ ಬರುವಂತೆ ಮನವಿ ಮಾಡುತ್ತಾಳೆ.

ಆಗ ಶಿವ ಸರ್ವಾಲಂಕೃತ ಭೂಷಿತನಾಗಿ ಚಂದ್ರಘಂಟಾ ರೂಪದಲ್ಲಿರುವ ಪಾರ್ವತಿಯನ್ನು ವರಿಸುತ್ತಾನೆ. ಈ ದಿನವನ್ನೇ ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ ಅಂತಾ ಹೇಳಲಾಗಿದೆ. ಅಲ್ಲದೇ ಚಂದ್ರ ಘಂಟಾದೇವಿಯ ಘಂಟೆನಾದದಿಂದ ಹಲವಾರು ರಾಕ್ಷಸರು ಸಂಹಾರಗೊಂಡಿದ್ದಾರೆಂದೂ ಹೇಳಲಾಗುತ್ತದೆ.  

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ

8147130507 / 7349360507

About The Author